ನಾರಾಯಣಗೌಡರಿಗೆ ಆತಿಥ್ಯ ರತ್ನ ಮೈಸೂರಿಗೆ ಹೆಮ್ಮೆ

KannadaprabhaNewsNetwork |  
Published : Jun 25, 2025, 11:47 PM ISTUpdated : Jun 25, 2025, 11:48 PM IST
34 | Kannada Prabha

ಸಾರಾಂಶ

ಆರ್ಥಿಕವಾಗಿ ತೊಂದರೆಯಲ್ಲಿದ್ದ ಸಣ್ಣಪುಟ್ಟ ಹೊಟೇಲು ಮಾಲೀಕರಿಗೆ ಯಾವುದೇ ತೊಂದರೆ ಬಾರದಂತೆ ಬೆನ್ನುಲುಬಾಗಿ ನಿಂತು ಮಾರ್ಗದರ್ಶನ

ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿ ನಿರಂತರವಾಗಿ ಪ್ರವಾಸೋದ್ಯಮ ಹಾಗೂ ಹೋಟೆಲ್ ಮಾಲೀಕರು ಹಾಗೂ ಉದ್ಯಮಿಗಳ ಹಿತ ಕಾಯುತ್ತಾ ಬಂದಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡರಿಗೆ ರಾಜ್ಯಮಟ್ಟದ ಆತಿಥ್ಯ ರತ್ನ ಪ್ರಶಸ್ತಿ ಬಂದಿರುವುದು ಮೈಸೂರಿಗರಿಗೆ ಹೆಮ್ಮೆಯ ವಿಚಾರ ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ಹೇಳಿದರು.ವಿಶ್ವೇಶ್ವರ ನಗರದಲ್ಲಿ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಸಿ. ನಾರಾಯಣಗೌಡ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಾಕಷ್ಟು ಸಮಾಜಮುಖಿ ಸಂದೇಶ ಸಾರುವ ದಿನಗಳನ್ನು ಮೈಸೂರಿನಲ್ಲಿ ಯಶಸ್ವಿಯಾಗಿ ನೆರವೇರಲು ಸ್ಥಳೀಯ ಸಂಘ ಸಂಸ್ಥೆಗಳು ಉದ್ಯಮಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಸೇತುವೆಯಾಗಿ ಕೆಲಸ ಮಾಡಿ ಮೈಸೂರಿನ ಹಿರಿಮೆ ಹೆಚ್ಚಿಸುವಲ್ಲಿ ಸಿ. ನಾರಾಯಣಗೌಡ ಅವರು ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ, ಕೋವಿಡ್ ವೇಳೆ ಹೊಟೇಲುಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಸಿ ಸಾಮಾಗ್ರಿಗಳು ಮತ್ತು ವೈದ್ಯಕೀಯ ನೆರವು ಕಾರ್ಮಿಕ ಇಲಾಖೆಯಿಂದ ಸಾಹಯಧನ ಕಲ್ಪಿಸಿದ್ದಾಗಿ ಹೇಳಿದರು,ಆರ್ಥಿಕವಾಗಿ ತೊಂದರೆಯಲ್ಲಿದ್ದ ಸಣ್ಣಪುಟ್ಟ ಹೊಟೇಲು ಮಾಲೀಕರಿಗೆ ಯಾವುದೇ ತೊಂದರೆ ಬಾರದಂತೆ ಬೆನ್ನುಲುಬಾಗಿ ನಿಂತು ಮಾರ್ಗದರ್ಶನ ನೀಡಿ, ನೂರಾರು ಮಂದಿಯನ್ನು ಮೈಸೂರಿನ ಗಣ್ಯ ವ್ಯಕ್ತಿಯಾಗಿ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದಾರೆ. ಅವರಿಗೆ ಅತಿಥ್ಯ ರತ್ನ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದರು.ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಮೈಸೂರಿನ‌ ಪ್ರವಾಸೋದ್ಯಮಕ್ಕೆ ಉತ್ತೇಜನಕ್ಕೆ ನೀಡುವಲ್ಲಿ ಹೋಟೆಲು ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಅವರ ಪಾತ್ರ ಮಹತ್ವವಾದುದು, ಕಳೆದ ಎರಡು ದಶಕಗಳಿಂದ ಮೈಸೂರು ದಸರಾ ಮತ್ತು ಹೊಸ ವರ್ಷದ ಆಚರಣೆ, ಆಷಾಢ ದೀಪಾವಳಿ ಬೇಸಿಗೆ ಮಾಸದ ವೇಳೆ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ ಎಂದರು.ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮತ್ತು ಮೈಸೂರಿನ ಪರಂಪರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿ ಸಾಕಷ್ಟು ಸಂಘ ಸಂಸ್ಥೆಗಳಿಂದ ಸರ್ಕಾರಕ್ಕೆ ಸಿಎಸ್‌ಆರ್‌ನೆರವು ತಂದುಕೊಡಲು ಹಲವು ಯೋಜನೆಗಳನ್ನು ಮಾರ್ಗದರ್ಶನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ದಸರಾ ವೇಳೆ ಪ್ರವಾಸಿಗರಿಗಾಗಿ ಆಹಾರ ಮೇಳ ಪರಿಕಲ್ಪನೆ ಆಯೋಜನೆ ಜಾರಿಗೆ ತರಲು ನಾರಾಯಣಗೌಡ ಅವರೇ ಮುಖ್ಯ ಕಾರಣ ಎಂದರು.ಈ ವೇಳೆ ನೂರಾರು ಹೋಟೆಲ್ ಉದ್ಯಮಿಗಳು ವೈಯಕ್ತಿಕವಾಗಿ ನಾರಾಯಣಗೌಡ ಅವರನ್ನು ಅಭಿನಂದಿಸಿದರು.ಈ ವೇಳೆ ಹೋಟೆಲ್ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ.ಕೆ. ಶೆಟ್ಟಿ, ನಿಕಟಪೂರ್ವ ರಾಜ್ಯಾಧ್ಯಕ್ಷ ಎಂ. ರಾಜೇಂದ್ರ, ರಾಜ್ಯ ಉಪಾಧ್ಯಕ್ಷ ರವಿಶಾಸ್ತ್ರಿ, ಕಾರ್ಯದರ್ಶಿ ಎ.ಆರ್. ರವೀಂದ್ರ ಭಟ್, ಸುರೇಶ್ ಉಗ್ರಯ್ಯ, ಜಿ. ಅಶೋಕ್, ಸುಬ್ರಹ್ಮಣ್ಯ ತಂತ್ರಿ, ಕೆ.ಎಸ್‌. ಅರುಣ್, ಕೆ. ಭಾಸ್ಕರ್ ಶೆಟ್ಟಿ, ಪಿ.ಎಸ್. ಶೇಖರ್, ಕಿರಣ್, ಮ.ವಿ. ರಾಮಪ್ರಸಾದ್ ಹಾಗೂ ನೂರಾರು ಹೋಟೆಲ್ ಉದ್ಯಮಿಗಳು ಇದ್ದರು.

PREV

Recommended Stories

ರಾಜ್ಯದಲ್ಲಿ ಇಂದು, ನಾಳೆ ವ್ಯಾಪಕ ಮಳೆಯ ನಿರೀಕ್ಷೆ
ಭಾರೀ ಮಳೆಗೆ ಡ್ಯಾಂಗಳು ಭರ್ತಿ - ಲಿಂಗನಮಕ್ಕಿ ಜಲಾಶಯ ಭರ್ತಿಗೆ ಕೇವಲ 4 ಅಡಿ ಮಾತ್ರ ಬಾಕಿ