ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಡಹಳ್ಳಿ ಎಚ್.ಜೆ.ರಾಮಕೃಷ್ಣರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಂಗಳವಾರ ತಮ್ಮ ನಿವಾಸದಲ್ಲಿ ಅಭಿನಂದಸಿದರು.ಬಳಿಕ ಮಾತನಾಡಿದ ಅವರು, ಸಂಘದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಎಚ್.ಜೆ.ರಾಮಕೃಷ್ಣ ಅವರು ಯುವಕರಾಗಿದ್ದು, ಕೆಲಸ ಮಾಡಲು ಉತ್ಸಾಹಕರಾಗಿದ್ದಾರೆ ಎಂದರು.
ಸಹಕಾರ ಸಂಘಗಳು ರೈತರಿಗೆ ಪೂರಕವಾಗಿರಬೇಕು. ಸಹಕಾರ ಸಂಘದ ಮೂಲಕ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ರೈತರ ಪ್ರಗತಿಗೆ ಪೂರಕವಾಗಿ ನೂತನ ಆಡಳಿತ ಮಂಡಳಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದರು.ಈ ವೇಳೆ ಸಿ.ಕೆ.ಲೋಕೇಶ್, ಬೊಮ್ಮರಾಜು, ಎನ್.ಪಿ.ದಿನೇಶ್, ಬೊಮ್ಮೇಗೌಡ, ಸಿ.ಮಹದೇವು, ಶಿವಶಂಕರ್, ಉಷಾ, ಮುಖಂಡರಾದ ಕೆ.ಪುಟ್ಟೇಗೌಡ, ಹೇಮಂತ್‌ಕುಮಾರ್, ಗ್ರಾಪಂ ಸದಸ್ಯ ಮಂಜುನಾಥ್, ಮಾಜಿ ಸದಸ್ಯ ಚಂದ್ರಶೇಖರ್, ಸುರೇಂದ್ರಕುಮಾರ್, ಪುಟ್ಟಸ್ವಾಮಿ, ಪ್ರಭಾಕರ, ಚಿಕ್ಕಮರಳಿ ಕೃಷ್ಣಕುಮಾರ್, ಹೆಗ್ಗಡಹಳ್ಳಿ ಅಪ್ಪಣ್ಣ, ಪ್ರಕಾಶ್, ಮಾಜಿ ನಿರ್ದೇಶಕ ಶಿವರಾಜು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ಹಳೇ ಬೂದನೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಮುಂದೂಡಿಕೆಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹಳೇ ಬೂದನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ರೋಚಕ ತಿರುವು ಪಡೆದಿದ್ದು, ಅಧ್ಯಕ್ಷ ಅಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದ ನಿರ್ದೇಶಕಿಯೊಬ್ಬರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಎರಡನೇ ಬಾರಿ ಚುನಾವಣೆ ಮುಂದೂಡಲಾಗಿದೆ.ಕಳೆದ ಶುಕ್ರವಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಯೋಜನೆಯಾಗಿತ್ತು. ೧೦ ಸದಸ್ಯ ಬಲದ ಸಂಘದ ಆಡಳಿತ ಮಂಡಳಿಯಲ್ಲಿ ಇಬ್ಬರು ನಿರ್ದೇಶಕರು ಚುನಾವಣಾ ಸಭೆಗೆ ಹಾಜರಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಬಿ.ಸಿ.ಪ್ರತಿಮಾ ಶಂಕರ್ ಸೇರಿದಂತೆ ೮ ನಿರ್ದೇಶಕರು ಗೈರಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿಕೆಯಾಗಿತ್ತು.
ಚುನಾವಣಾಕಾರಿಯಾದ ಸಹಕಾರ ಅಭಿವೃದ್ಧಿ ಅಧಿಕಾರಿ ರವಿ ಹಾಗೂ ಸಂಘದ ಕಾರ್ಯದರ್ಶಿ ಡಿ.ಸುರೇಶ್ ನೇತೃತ್ವದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ೮ ನಿರ್ದೇಶಕರು ಹಾಜರಾದರು. ಆದರೆ, ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ.ಸಿ.ಪ್ರತಿಮಾ ಶಂಕರ್ ನಾಮಪತ್ರ ಹಿಂಪಡೆದು ಶೂನ್ಯಕಣ ಸೃಷ್ಟಿಸಿದರು.ಬಳಿಕ ಚುನಾವಣಾ ಪ್ರಕ್ರಿಯೆ ಹೊಸದಾಗಿ ಮಾಡುವುದಾಗಿ ಘೋಷಿಸಿ ಚುನಾವಣಾಕಾರಿ ಸಭೆ ಮುಂದೂಡಿದರು.