ಮಲ್ಲಿಗೆರೆ ಡೇರಿ ಅಧ್ಯಕ್ಷ- ಉಪಾಧ್ಯಕ್ಷರಿಗೆ ಸಿ.ಎಸ್.ಪುಟ್ಟರಾಜು ಅಭಿನಂದನೆ

KannadaprabhaNewsNetwork | Published : May 8, 2025 12:35 AM
Follow Us

ಸಾರಾಂಶ

ಡೇರಿಗಳು ರೈತರ ಬೆನ್ನೆಲುಬು. ಹೈನುಗಾರಿಕೆ ನಡೆಸುವ ಮೂಲಕ ತಮ್ಮ ಬದುಕು ನಿರ್ವಹಣೆ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ ಎಲ್ಲರು ರೈತರ ಪ್ರಗತಿಗೆ ಪೂರಕವಾಗಿ ಹಾಗೂ ಡೇರಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಮಲ್ಲಿಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಜೆಡಿಎಸ್ ಬೆಂಬಲಿತ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.

ಮಲ್ಲಿಗೆರೆ ಜೇಪಿ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಎಲ್ಲಾ 10 ಸ್ಥಾನದಲ್ಲೂ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದರು. ಬಳಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎಂ.ಬಿ.ರಾಜೇಗೌಡ, ಎಂ.ಆರ್.ಅನಿತಾ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ - ಉಪಾಧ್ಯಕ್ಷರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಪಟ್ಟಣದ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.

ನಂತರ ಸಿ.ಎಸ್.ಪುಟ್ಟರಾಜು ಮಾತನಾಡಿ, ಡೇರಿಗಳು ರೈತರ ಬೆನ್ನೆಲುಬು. ಹೈನುಗಾರಿಕೆ ನಡೆಸುವ ಮೂಲಕ ತಮ್ಮ ಬದುಕು ನಿರ್ವಹಣೆ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಆಯ್ಕೆಯಾಗಿರುವ ಎಲ್ಲರು ರೈತರ ಪ್ರಗತಿಗೆ ಪೂರಕವಾಗಿ ಹಾಗೂ ಡೇರಿ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಈ ವೇಳೆ ನಿರ್ದೇಶಕರಾದ ಪುಟ್ಟರಾಮೇಗೌಡ, ಎಸ್.ಎನ್.ರಘು, ಎಂ.ಎಸ್.ದೇವರಾಜು, ಮಹೇಂದ್ರಚಾರಿ, ಎಂ.ಬಿ.ಅಶೋಕ, ಮಹೇಶ್, ವಿನುತ, ಹಲಗೇಗೌಡ ಮುಖಂಡರಾದ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಎಂ.ಸಿ.ಯಶವಂತ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷರಾದ ಎಂ.ಎಸ್.ರವಿಕರ, ಎಂ.ಡಿ.ಚಂದ್ರೇಗೌಡ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಎಸ್.ಜಗದೀಶ್, ಎಂ.ಆರ್.ಸೋಮಶೇಖರ್, ಸುರೇಶ್, ರವಿ, ಎಂ.ಆರ್.ಕುಮಾರ್, ಸತೀಶ್, ಪ್ರಸನ್ನ, ಧನ್ಯಕುಮಾರ್, ಎಂ.ಕೆ.ರಾಜೇಶ್, ಗುರುಲಿಂಗಯ್ಯ, ಮಂಜುನಾಥ್ ಶಿವಣ್ಣ, ಸಣ್ಣಸೋಮಚಾರಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಹೊಲಿಗೆ ಯಂತ್ರ ಹಾಗೂ ಟೂಲ್ ಕಿಟ್ ವಿತರಣೆ

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿವಿಧ ಆರ್ಹ ಫಲಾನುಭವಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೊಲಿಗೆ ಯಂತ್ರ ಹಾಗೂ ಟೂಲ್ ಕಿಟ್‌ಗಳನ್ನು ವಿತರಿಸಿದರು.

ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಪಿತಾ ಬಾಬು, ಕೋಕಿಲಾ ಜ್ಞಾನೇಶ್, ತೇಜಸ್ವಿನಿ ಸೇರಿದಂತೆ ಒಟ್ಟು 63 ಫಲಾನುಭವಿಗಳಿಗೆ ಹೊಲಿಗೆ ಯಂತ್ರದ 12 ಟೂಲ್ ಕಿಟ್‌ಗಳನ್ನು ವಿತರಿಸಲಾಯಿತು.

2024-25 ನೇ ಸಾಲಿನ ವೃತ್ತಿಪರ ಗ್ರಾಮೀಣ ಕುಶಲ ಕರ್ಮಿಗಳಿಗೆ ಸುಧಾರಿತ ಉಪಕರಣ ಸರಬರಾಜು ಯೋಜನೆ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ವಿದ್ಯುತ್ಚಾಲಿತ ಹೊಲಿಗೆಯಂತ್ರ ಹಾಗೂ ಪವರ್ ಟೂಲ್ಸ್ ಗಳಾದ ಮರಗೆಲಸ, ಗಾರೆ ಕೆಲಸ, ಕ್ಷೌರಿಕ ಹಾಗೂ ದೋಬಿ ಉಪಕರಣಗಳ ವಿತರಣೆಗಾಗಿ ಲಾಟರಿ ಮುಖಾಂತರ ಆಯ್ಕೆಯಾಗಿದ್ದ ಫಲಾನುಭವಿಗಳಿಗೆ ವಿತರಿಸಲಾಯಿತು.

ಈ ವೇಳೆ ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ದೊರೆರಾಜ್, ಕಚೇರಿ ಸಿಬ್ಬಂದಿ ಗುಣವತಿ, ಗಿರಿಸ್ವಾಮಿ, ರಾಜಶೇಖರ, ಆದರ್ಶ ಇತರರಿದ್ದರು.