ಕನ್ನಡಪ್ರಭ ವಾರ್ತೆ ಹಂಗಾರಕಟ್ಟೆ
ಎಂದು ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರ ಆಯೋಜಿಸಿದ್ದ ೨೦ ದಿವಸಗಳ ‘ನಲಿ ಕುಣಿ’ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ದೇಹದಂಡನೆಯ ಕಲೆ ಭಗವಂತನಿಗೆ ಪ್ರಿಯವಾದದ್ದು. ಕಲೆಯಿಂದ ಸಂಸ್ಕೃತಿಯ ಉದ್ಧಾರವಾಗಬೇಕು. ಮನಸ್ಸು ವಿಕಾಸವಾಗಬೇಕು. ಆದರೂ ಯಕ್ಷಗಾನ ಇತ್ತೀಚಿಗೆ ಭಕ್ತಿ ಹೀನವಾದ, ಲೌಕಿಕ ಪ್ರಸಂಗಗಳ, ಶಾಸ್ತ್ರ ವಿರುದ್ಧ ಸಂಭಾಷಣೆಗಳ, ಮನೋವಿಕಾರತೆ ಹೊಂದಿರುವುದನ್ನು ಗಮನಿಸುತ್ತಿದ್ದೇವೆ. ಹಾಗಾಗಬಾರದು ಎಂದು ಅವರು ಆಶಿಸಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಯಕ್ಷಗಾನ ಪ್ರದರ್ಶನ ಪ್ರದರ್ಶಿಸಲ್ಪಟ್ಟಿತು. ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಸ್ವಾಗತಿಸಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಸೋಮಯಾಜಿ ವಂದಿಸಿದರು.