ಎನ್‌ಡಿಎ ಅಭ್ಯರ್ಥಿ ಪರ ಸಿ.ಎಸ್ .ಪುಟ್ಟರಾಜು ಪುತ್ರರಿಂದ ಬಿರುಸಿನ ಪ್ರಚಾರ

KannadaprabhaNewsNetwork | Published : Apr 20, 2024 1:03 AM

ಸಾರಾಂಶ

ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂಆಗಿದ್ದಾಗ ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿದರು. ಜಿಲ್ಲೆಯ ಜನತೆ ನೂರಾರು ವರ್ಷಗಳಿಂದ ಅನುಭವಿಸುತ್ತಿರುವ ಕಾವೇರಿ ಜಲ ವಿವಾದ ನಿವಾರಣೆಗಾಗಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತಕೊಟ್ಟು ಗೆಲ್ಲಿಸಿ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಲು ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಗ್ರಾಪಂ ವ್ಯಾಪ್ತಿ ಹಾಗೂ ಕಸಬ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಹೋದರ ಪುತ್ರರಾದ ಸಿ.ಅಶೋಕ್, ಸಿ.ಶಿವಕುಮಾರ್ ಹಾಗೂ ಪುತ್ರ ಸಿ.ಪಿ.ಶಿವರಾಜು ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು.

ಜಿಪಂ ಮಾಜಿ ಸಿ.ಅಶೋಕ್ ಹಾಗೂ ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಅವರು ಚಿನಕುರಳಿ ವ್ಯಾಪ್ತಿಯ ಗ್ರಾಮಗಳಾದ ಅಂಕೇಗೌಡನ ಕೊಪ್ಪಲು, ಕನಗನಹಳ್ಳಿ, ಅಶೋಕನಗರ, ಕೆ.ಮಂಚನಹಳ್ಳಿ, ಮೊಳ್ಳೇನಹಳ್ಳಿ, ಇಳ್ಳೇನಹಳ್ಳಿ, ಬೋರೇಮೇಗಳಕೊಪ್ಪಲು, ಸಣಬದಕೊಪ್ಪಲು, ಸೆಣಬ, ತಿರುಮಲಾಪುರ, ಹಸನ್ ಪುರ, ಚಿಕ್ಕಬೋಗನಹಳ್ಳಿ, ಬ್ಯಾಟರಾಯನಕೊಪ್ಪಲು, ದೊಡ್ಡಭೋಗನಹಳ್ಳಿ, ಲಿಂಗಾಪುರ, ಮೊರಸನಹಳ್ಳಿ, ಕಾಳೇಗೌಡನಕೊಪ್ಪಲು ಗ್ರಾಮಗಳಲ್ಲಿ ಕಾರ್ಯಕರ್ತರು ಸಭೆ ನಡೆಸಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಚ್ಚಿನಮತಕೊಟ್ಟು ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಿ.ಪಿ.ಶಿವರಾಜು ಅವರು ಕಸಬಾ ಹೋಬಳಿಯ ಕೆನ್ನಾಳು, ಚಿಕ್ಕಾಡೆ, ದೊಡ್ಡಬ್ಯಾಡರಹಳ್ಳಿ, ಕನಗನಮರಡಿ, ಹಿರೇಮರಳಿ ಸೇರಿದಂತೆ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆ ನಡೆಸುವ ಮೂಲಕ ಮತಯಾಚಿಸಿದರು.

ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಮಾತನಾಡಿ, ಮಂಡ್ಯದಲ್ಲಿ ಹೃದಯವಂತ ಹಾಗೂ ಹಣವಂತರ ನಡುವೆ ಚುನಾವಣೆ ನಡೆಯುತ್ತಿದೆ. ಮತದಾರರು ಯಾವುದೇ ಹಣದ ಆಮಿಷಗಳಿಗೆ ಒಳಗಾಗದೆ ಹೃದಯವಂತ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತಕೊಟ್ಟು ಗೆಲ್ಲಿಸಲಿದ್ದಾರೆ ಎಂದರು.

ಸಿ.ಪಿ.ಶಿವರಾಜು ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂಆಗಿದ್ದಾಗ ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿದರು. ಜಿಲ್ಲೆಯ ಜನತೆ ನೂರಾರು ವರ್ಷಗಳಿಂದ ಅನುಭವಿಸುತ್ತಿರುವ ಕಾವೇರಿ ಜಲ ವಿವಾದ ನಿವಾರಣೆಗಾಗಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತಕೊಟ್ಟು ಗೆಲ್ಲಿಸಿ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ಪಕ್ಷದ ಮುಖಂಡರಾದ ಸಿ.ಎಸ್.ಗೋಪಾಲಗೌಡ, ಸಿ.ಕೆ.ಅಂಕೇಗೌಡ, ಶಿಂಢಭೋಗನಹಳ್ಳಿ ನಾಗಣ್ಣ, ವಿಎಸ್ ಎಸ್ ಬಿಎನ್ ಬಿ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಮೊಗ್ಗಣ್ಣಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಪಾಪಣ್ಣ, ಮಹಮದ್ ಪಾ, ಸಿ.ಎಂ.ಕಾಳೇಗೌಡ, ಸದಸ್ಯ ರವಿ, ಶಿವಕುಮಾರ್, ಕೆಂಪೂಮಾಸ್ಟರ್, ಮಹದೇವಪ್ಪ, ಗಾಯಿತ್ರಿಕುಮಾರ್, ಗ್ರಾಪಂ ಸದಸ್ಯರಾದ ಪರಮೇಶ್, ಕೃಷ್ಣೇಗೌಡ, ಸಿ.ಎ.ಲೋಕೇಶ್, ದಿವ್ಯ ಸುರೇಶ್, ಶ್ವೇತಾ ಅಶೋಕ್, ಗ್ರಾಪಂ ಮಾಜಿ ಸದಸ್ಯ ಸಿ.ಡಿ.ಮಹದೇವು ಸೇರಿದಂತೆ ಹಲವರು ಹಾಜರಿದ್ದರು.

Share this article