ನಮ್ಮದು ಅಂಬಾನಿ, ಆದಾನಿ ಗ್ಯಾರಂಟಿ ಅಲ್ಲ: ಸುರ್ಜೇವಾಲ

KannadaprabhaNewsNetwork |  
Published : Apr 20, 2024, 01:03 AM IST
ಚಿತ್ರದುರ್ಗ ಪೋಟೋ ಸುದ್ದಿ 222 | Kannada Prabha

ಸಾರಾಂಶ

ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ಕೇಂದ್ರದಲ್ಲಿ ಗ್ಯಾರಂಟಿ ಯೋಜನೆ ತರುವುದಾಗಿ ಘೋಷಿಸಿದ್ದೇವೆ. ನಾವು ಜನ ಕಲ್ಯಾಣ ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಅಂಬಾನಿ, ಅದಾನಿ ಕಲ್ಯಾಣ ಗ್ಯಾರಂಟಿ ಅಲ್ಲವೆಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ಚಿತ್ರದುರ್ಗ: ಕಾಂಗ್ರೆಸ್ ರಾಜ್ಯದಲ್ಲಿ ನುಡಿದಂತೆ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ಕೇಂದ್ರದಲ್ಲಿ ಗ್ಯಾರಂಟಿ ಯೋಜನೆ ತರುವುದಾಗಿ ಘೋಷಿಸಿದ್ದೇವೆ. ನಾವು ಜನ ಕಲ್ಯಾಣ ಗ್ಯಾರಂಟಿಗಳನ್ನು ಘೋಷಿಸಿದ್ದೇವೆ ಅಂಬಾನಿ, ಅದಾನಿ ಕಲ್ಯಾಣ ಗ್ಯಾರಂಟಿ ಅಲ್ಲವೆಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನಲೆ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯರಿಂದ ಸಮರ್ಥ ಆಡಳಿತ ನೀಡಲಾಗುತ್ತಿದೆ. ಇನ್ನೂ 5 ವರ್ಷ ಕಾಲ ಕಾಂಗ್ರೆಸ್ ಉತ್ತಮ ಆಡಳಿತ ನೀಡಲಿದೆ. ಸಿಎಂ, ಡಿಸಿಎಂ, ಸಚಿವರು, ಶಾಸಕರು ಒಟ್ಟಾಗಿ ಚುನಾವಣೆ ಎದುರಿಸೋಣವೆಂದು ಸುರ್ಜೆವಾಲಾ ಹೇಳಿದರು.

ನಮ್ಮ ಮುಂದೆ ದೇಶದಲ್ಲಿ ಎರಡು ಮಾಡಲ್‍ಗಳಿವೆ ಒಂದು ಖರ್ಗೆ, ರಾಹುಲ್ ಗ್ಯಾರಂಟಿ ಮಾಡಲ್ ಮತ್ತೊಂದು ಚೆಂಬು ಮಾಡೆಲ್ ಎಂದು ಮೋದಿ ಟೀಕಿಸಿದ ಸುರ್ಜೇವಾಲ, ಜನರು ಚಂಬು ಮಾಡಲ್ ಬೇಕೋ, ಅಭಿವೃದ್ಧಿ ಮಾಡಲ್ ಬೇಕೋ ನಿರ್ಧರಿಸಲಿ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಯಾವ ಸಮಯದಲ್ಲೂ ಸಹಾಯ ಮಾಡಿಲ್ಲ. ಬರಗಾಲ ಬಂದಿದೆ ಎಂದು ಪರಿಹಾರವನ್ನು ನೀಡುವಂತೆ ಮನವಿ ಮಾಡಿದರೂ ಕಿವಿಗೊಟ್ಟಿಲ್ಲವೆಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಟಿ.ಬಿ.ಜಯಚಂದ್ರ, ಮಾಜಿ ಸಚಿವ ಎಚ್.ಅಂಜನೇಯ, ಶಾಸಕರುಗಳಾದ ರಘುಮೂರ್ತಿ, ವಿರೇಂದ್ರ ಪಪ್ಪಿ, ಗೋಪಾಲಕೃಷ್ಣ, ಬಿ.ಜಿ.ಗೋವಿಂದಪ್ಪ, ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕರಾದ ಪೂರ್ಣಿಮಾ, ಎ.ವಿ.ಉಮಾಪತಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಜಯಮ್ಮ, ಡಿಸಿಸಿ ಅಧ್ಯಕ್ಷ ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಮುಖಂಡರುಗಳಾದ ಹನುಮಲಿ ಷಣ್ಮುಖಪ್ಪ, ಜೆ.ಜೆ,ಹಟ್ಟಿ ತಿಪ್ಪೇಸ್ವಾಮಿ, ಮರುಳಾರಾಧ್ಯ, ಓ.ಶಂಕರ್, ಜಿ.ಎಸ್.ಮಂಜುನಾಥ್, ಸಂಪತ್ ಕುಮಾರ್, ಮೈಲಾರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಸೋಮಶೇಖರ್, ವಿಜಯಕುಮಾರ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!
ರಾಜ್ಯದ 15 ಜಿಲ್ಲೆಗಳಲ್ಲಿ ಅಕಾಲಿಕ ಮಳೆ : ಮಾರ್ಚ್ 25 ರವರೆಗೆ ಅಬ್ಬರಿಸಲಿದೆ