- ಸಚಿವ ಕೆ. ವೆಂಕಟೇಶ್ ಎದುರು ಮಾದಿಗ ಸಮುದಾಯ ಮುಖಂಡರ ಆಕ್ಷೇಪ
ಕಾಂಗ್ರೆಸ್ ನಿಷ್ಠಾವಂತರು ಎಂಬುದನ್ನು ಅರಿತುಕೊಂಡೇ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಮಾದಿಗ ಸಮುದಾಯದ ಮುಖಂಡರು ಸಚಿವ ಕೆ. ವೆಂಕಟೇಶ್ ಮುಂದೆ ಪ್ರಸ್ತಾಪಿದರು.
ಪಟ್ಟಣದ ಎನ್.ಎ ಫಂಕ್ಷನ್ ಹಾಲಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಲೋಕಸಭಾ ಚುನಾವಣೆಯ ಅಭ್ಯರ್ಥಿ ಎಂ. ಲಕ್ಷ್ಮಣ್ ಪರ ಮತ ಯಾಚನಾ ಸಭೆಯಲ್ಲಿ ಈ ಘಟನೆ ನಡೆಯಿತು.ಕಾಂಗ್ರೆಸ್ ಮತ ಹಾಕುವುದನ್ನು ಬಿಟ್ಟರೆ ಬೇರೆ ಯಾವ ಪಕ್ಷವನ್ನು ನಮ್ಮ ಕ್ಷೇತ್ರದಲ್ಲಿ ಬೆಂಬಲಿಸದ ನಮ್ಮ ಆದಿ ಜಾಂಬವ ಸಮುದಾಯದ ಜನರನ್ನು ಪರಿಗಣಿಸುತ್ತಿಲ್ಲ ಎಂದು ತಿಳಿಸಿದರು.
ಹೆಚ್ಚು ಚರ್ಚೆಗೆ ಅವಕಾಶ ನೀಡದ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ನನಗೆ ರಾಜಕೀಯವಾಗಿ ಬಹಳಷ್ಟು ಅನುಭವವಿದ್ದು, ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಗೊತ್ತಿದೆ, ಮುಂದಿನ ದಿನಗಳಲ್ಲಿ ಅವಕಾಶ ನೀಡುವುದಾಗಿ ತಿಳಿಸಿದರು.
ಲಕ್ಷ್ಮಣ್ ಅವರು ಕಾಂಗ್ರೆಸ್ ಅಭ್ಯರ್ಥಿಯ ವಿನಃ ನನ್ನ ಅಭ್ಯರ್ಥಿಯಾಗಲಿ ಅಥವಾ ಯಾರ ವೈಯಕ್ತಿಕ ವ್ಯಕ್ತಿಯ ಅಭ್ಯರ್ಥಿ ಅಲ್ಲ, ಈ ರೀತಿ ತಪ್ಪು ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಮತ ಚಲಾಯಿಸಬೇಕೆಂದು ಮನವಿ ಮಾಡಿಕೊಂಡರು.