ಆರೋಪ । ಬಿಜೆಪಿ ಉಚ್ಚಾಟಿತ ನಿರಂಜನ್ ಆಕ್ರೋಶ । ಮುಂಬರುವ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಿಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗದಿದ್ದರೂ ಅವೈಜ್ಞಾನಿಕವಾಗಿ ಬಿಜೆಪಿಯಿಂದ ಉಚ್ಚಾಟಿಸಿದ್ದಾರೆ. ಈ ಬಗ್ಗೆ ಪಕ್ಷದ ರಾಜ್ಯದ ಹಿರಿಯ ಮುಖಂಡರಿಗೆ ದೂರು ಸಲ್ಲಿಸ ಲಾಗುವುದು. ಜತೆಗೆ, ಮುಂಬರು ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಕೇಳುತ್ತೇನೆ ಎಂದರು.
1998ರಿಂದ ಬಿಜೆಪಿಯಲ್ಲಿ ನಿಷ್ಠಾವಂತವಾಗಿ ಕಾರ್ಯನಿರ್ವಹಿಸಿದ್ದೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಹಲವು ಅವಕಾಶ ಕೈ ಬಿಟ್ಟಿದ್ದೇನೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಬಿಜೆಪಿಯಲ್ಲಿ ವ್ಯಕ್ತಿಯೇ ಮುಖ್ಯ. ಜಿಲ್ಲಾ ಕೋರ್ ಕಮಿಟಿ ಹಲ್ಲು ಕಿತ್ತ ಹಾವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿಗೆ ಅರ್ಹತೆ ಇಲ್ಲದಿದ್ದರೂ ಪ್ರೋತ್ಸಾಹ ನೀಡಿ ಜಿಲ್ಲಾಧ್ಯಕ್ಷರಾಗಿ ಮಾಡ ಲಾಗಿತ್ತು. ತಮ್ಮನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಏಕೆ ಎಂಬುದು ಅರ್ಥವಾಗಿಲ್ಲ ಎಂದು ಹೇಳಿದರು.ಸಿ.ಟಿ.ರವಿ ಅವರು ಜಿಲ್ಲೆಯಲ್ಲಿ ಲಿಂಗಾಯತರು, ಕುರುಬರು, ಒಕ್ಕಲಿಗರು ಸೇರಿದಂತೆ ಯಾವುದೇ ಸಮುದಾಯ ಮುಖಂಡರನ್ನು ಬೆಳೆಯಲು ಬಿಡುತ್ತಿಲ್ಲ. ಅದೇ ಕಾರಣಕ್ಕೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಹಿಂದೆ ಸಹ ಹಲವು ಬಿಜೆಪಿ ನಿಷ್ಠಾವಂತ ಮುಖಂಡರನ್ನು ಇದೇ ರೀತಿ ಮಾಡಿದ್ದು ಒಂದು ದಿನ ನನ್ನಂತೆಯೇ ಸಿಡಿಯುತ್ತಾರೆ. ಈಗ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ರಾಜಕಾರಣ ಮಾಡುತ್ತೇನೆ. ಹಾಗಂತ ಬೇರೆ ಪಕ್ಷಕ್ಕೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.
ವಿವಿಧ ಸಮುದಾಯದ ಮುಖಂಡರು ರಾಜಣ್ಣ, ರಮೇಶ್, ದರ್ಶನ್, ಶಿವಾನಂದ್, ರಾಕೇಶ್, ರಘುನಂದನ್, ಉಮೇಶ್ ಇತರರು ಇದ್ದರು.ಫೋಟೋ: