ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಉದನೂರ್, ನಾಗನಹಳ್ಳಿ ಹಾಗೂ ಮಾಲಗತ್ತಿ ಬಳಿಯ ನಾಗರಿಕ ಸೌಲಭ್ಯ (ಸಿಎ ಸೈಟ್) ದ ಮೂರು ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಾರುಕಟ್ಟೆ ಮೌಲ್ಯದ ಶೇ.5 ರಷ್ಟೇ ದರ ವಿಧಿಸಿ ಕಾಯಂ ಆಗಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಸಿರುವುದು ವಿವಾದ ಹುಟ್ಟು ಹಾಕಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿ.ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಉದನೂರ್, ನಾಗನಹಳ್ಳಿ ಹಾಗೂ ಮಾಲಗತ್ತಿ ಬಳಿಯ ನಾಗರಿಕ ಸೌಲಭ್ಯ (ಸಿಎ ಸೈಟ್) ದ ಮೂರು ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಾರುಕಟ್ಟೆ ಮೌಲ್ಯದ ಶೇ.5 ರಷ್ಟೇ ದರ ವಿಧಿಸಿ ಕಾಯಂ ಆಗಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿಸಿರುವುದು ವಿವಾದ ಹುಟ್ಟು ಹಾಕಿದೆ.ಕಲಬುರಗಿಯ ಉದನೂರ್ ಸ. ನಂ- 16- 2 ರಲ್ಲಿನ 5, 294 ಚ ಅ, ನಾಗನಹಳ್ಳಿಯ ಸ ನಂ- 38- 2 ನಲ್ಲಿರುವ 14, 402 ಚ ಅ, ಮಾಲಗತ್ತಿಯ ಸ. ನಂ 75- 4 ನಲ್ಲಿನ 517. 53 ಚ.ಮೀ ವಿಸ್ತೀರ್ಣದ ಸಿಎಂ ನಿವೇಶನಗಳನ್ನು ಕುಡಾ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡುವಂತೆ ಈ ಸಂಬಂಧ ಏ.16 ರ ಸಂಪುಟ ಸಭೆ ನಿರ್ಣಯದಂತೆ ಮೇ. 7 ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯರ್ಶಿಗಳು ಆದೇಶ ಹೊರಡಿಸಿದ್ದರು.
ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆಯನುಸಾರ ನಾಗರಿಕ ಸೌಲಭ್ಯದ ನಿವೇಶನಗಳನ್ನು ರಾಜಕೀಯ ಪಕ್ಷಗಳ ಭವನಗಳ ನಿರ್ಮಾಣಕ್ಕೆ ಹಂಚಿಕೆಗೆ ಅವಕಾಶವಿಲ್ಲ. ಆದರೆ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕಟ್ಟಡ ನಿರ್ಮಾಣಕ್ಕೆ ಇದೀಗ ಪ್ರಾಧಿಕಾರ ನಿವೇಶನ ಹಂಚಿಕೆ ಮಾಡಿರುವುದು ಕಾನೂನು ಉಲ್ಲಂಘನೆ. ತಕ್ಷಣ ಈ ನಿವೇಶನಗಳ ಹಂಚಿಕೆ ರದ್ದಾಗಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಭಾರತೀಯ ಜನತಾ ಪಕ್ಷ ಎಚ್ಚರಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು, ಕುಡಾ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್, ಅವಿನಾಶ ಕುಲಕರ್ಣಿ, ಸಿಎಂ ನಿವೇಶನ ಶಿಕ್ಷಣ ಸಂಸ್ಥೆ, ಸಮಾಜಮುಖಿ ಕೆಲಸಗಳ ಸಂಸ್ಥೆ, ಟ್ರಸ್ಟ್‌ಗಳನ್ನು ಹೊರತುಪಡಿಸಿ ಅನ್ಯರಿಗೆ ಕೊಡುವಂತಿಲ್ಲ. ಆದರಿಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸಿಎಂ ನಿವೇಶನ, ಅದೂ ಮಾರುಕಟ್ಟೆ ಮೌಲ್ಯದ ಶೇ. 5 ರಷ್ಟೇ ಬೆಲೆಗೆ ಮಂಜೂರು ಮಾಡಿರೋದರಿಂದ ಪ್ರಾಧಿಕಾರಕ್ಕೆ ಆರ್ಥಿಕ ಹಾನಿ ಉಂಟು ಮಾಡಿದೆ ಎಂದು ಆರೋಪಿಸಿದ್ದಾರೆ.ಕುಡಾ ನಡಾವಳಿ, ಸರ್ಕಾರದ ಸಂಪುಟ ಸಭೆಯ ನಿರರ್ಣಯ, ಆದೇಶಗಳ ಪ್ರತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಅವರು ಸಿಎಂ ನಿವೇಶನ ನಿಮಗಳಂತೆ ರಾಜಕೀಯ ಪಕ್ಷಗಳಿಗೆ ಬಿಡುಗಡೆ ಮಾಡಲು ಬರುದಿಲ್ಲವೆಂದು ಸ್ಥಳೀವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮನವಿಗೆ ಅಧಿಕಾರಿಗಳು ಉತ್ತರಿಸಿದ್ದರೂ ಅದನ್ನು ಅಲಕ್ಷಿಸಿ ಸದರಿ ವಿಷಯದ ಬಗ್ಗೆ ಸಂಪುಟದಲ್ಲೇ ನಿರ್ಣಯ ಅಂಗೀಕರಿಸಿ ಕಲಬುರಗಿಯ 3 ನಿವೇಶನ ಸೇರಿದಂತೆ ರಾಜ್ಯದ ಇನ್ನೂ ಹಲವೆಡೆ ಸ್ಥಳೀಯ ಸಂಸ್ಥೆಗಳಡಿಯಲ್ಲಿರುವ ಸಿಎಂ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. ಇದೆಲ್ಲವೂ ಸಿಎ ನಿವೇಶನ ಹಂಚಿಕೆ ಕಾನೂನು ಉಲ್ಲಂಘನೆ ಎಂದು ದೂರಿದರು.ಉದನೂರ್, ನಾಗನಹಳ್ಳಿ, ಮಾಲಗತ್ತಿಯಲ್ಲಿ ಸದ್ಯದ ಮಾರುಕಟ್ಟೆ ಬೆಲೆ ಗಗನಕ್ಕೇರಿದೆ. ಹೀಗಿದ್ದರೂ ಸರ್ಕಾರಿ ಸಂಸ್ಥೆಗೆ ಆರ್ಥಿಕ ನಷ್ಟ ಮಾಡಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಚಿಲ್ಲರೆ ಹಣದಲ್ಲಿನಿವೇಶನ ಪಡೆಯಲಾಗಿದೆ. ಇದೆಲ್ಲದರ ಹಿಂದೆ ಸ್ಥಳೀಯ ಉತ್ತರ, ದಕ್ಷಿಣ ಶಾಸಕರ ಪ್ರಭಾವವೂ ಇದೆ. ಇಳಕಲ್, ಹುನಗುಂದ್, ಯಲಬುರ್ಗಾದಲ್ಲಿಯೂ ಇದೇ ರೀತಿ ಅಲ್ಲಿನ ಸ್ಥಳೀಯ ಸಂಸ್ಥೆಗಳಡಿಯ ಸಿಎಂ ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್ ಮಾರುಕಟ್ಟೆ ಮೌಲ್ಯದ ಶೇ. 5 ರಲ್ಲೇ ಪಡೆದಿದ್ದಾರೆ. ತಕ್ಷಣ ಈ ಆದೇಶ ರದ್ದಾಗಬೇಕು, ಸಿಎಂ ನಿವೇಶನವನ್ನು ಕುಡಾ ಮರಳಿ ಪಡೆಯಬೇಕು. ಇಲ್ಲದೆ ಹೋದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ರೇವೂರ್ ಎಚ್ಚರಿಸಿದ್ದಾರೆ.
ಸದನದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕಿದ್ದಾರೆ. ಕೈ ಮಾಡುತ್ತ ಭಾವುಕರಾಗಿ ರೈತರ ಬಗ್ಗೆ ಎದ್ದೇಳಿ ಎಂದು ಸದನದಲ್ಲಿ ಹರತಾಳ ಮಾಡುತ್ತಿರುವ ಬಿಜೆಪಿಗೆ ಹೇಳಿದ್ದಾರೆ. ಆದರೆ ಮೊದಲು ಅಲ್ಲಂಪ್ರಭು ತಾವು ಕುಂಭಕರ್ಣ ನಿದ್ರೆಯಿಂದ ಏಳಬೇಕಾಗಿದೆ. ಎದ್ದು ರೈತರಿಗಾಗಿ ತಾವು ಕ್ಷೇತ್ರದಲ್ಲಿ ಏನು ಮಾಡಿದ್ದೇನೆಂದು ಹೇಳಲಿ ರೈತರು ಬರಗಾಲದಿಂದ ಸಂಕಷ್ಟದಲ್ಲಿದ್ದಾರೆ. ಕುಡಿಯಲು ನೀರಿಲ್ಲದೆ ಜನ ಸಮಸ್ಯೆಯಲ್ಲಿದ್ದಾರೆ. ಬೆಳೆ ವಿಮೆ ಬರುತ್ತಿಲ್ಲ, ಬೆಳೆಹಾನಿ ಪರಿಹಾರದಲ್ಲೂ ತಾರತಮ್ಯವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ರೇವೂರ್ ಟೀಕಿಸಿದರು. ಬಿಜೆಪಿ ಮುಖಂಡರಾದ ಸಿವಯೋಗಿ ನಾಗನಹಲ್ಳಿ, ರಾಜು ವಾಡೇಕರ್, ಮಾಜಿ ಮೇಯರ್ ವಿಶಾಲ ಧರ್ಗಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.