ಗ್ರಾಮೀಣ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ರಮೀಳಾ ಕನಸು: ಉಮಾಶಂಕರ್

KannadaprabhaNewsNetwork |  
Published : Aug 26, 2026, 01:30 AM IST
ಪೋಟೋ 5 : ದಾಬಸ್‍ಪೇಟೆ ಪಟ್ಟಣದ ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ದಿ. ರಮೀಳಾ ಉಮಾಶಂಕರ್ ಅವರ ಭಾವಚಿತ್ರಕ್ಕೆ ಸಂಸ್ಥೆಯ ಅಧ್ಯಕ್ಷರಾದ ಉಮಾಶಂಕರ್ ಪುಷ್ಪನಮನ ಸಲ್ಲಿಸಿದರು | Kannada Prabha

ಸಾರಾಂಶ

ರಮೀಳಾ ಉಮಾಶಂಕರ್ ಅವರ ಸೇವೆ, ಮೌಲ್ಯಗಳು, ಆದರ್ಶಗಳು ಮತ್ತು ಶಿಕ್ಷಣದ ಮೇಲಿನ ಬದ್ಧತೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸೇವಾಪರಂಪರೆ ಸದಾಕಾಲ ಮುಂದುವರಿಯುವಂತೆ, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ, ದೊಡ್ಡ ಕನಸುಗಳನ್ನು ಕಂಡು, ಉನ್ನತ ಗುರಿಗಳನ್ನು ಹೊಂದಿ ಶಾಲೆಗೆ, ಪೋಷಕರಿಗೆ ಕೀರ್ತಿ ತರಬೇಕು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಸೌಲಭ್ಯಗಳು ದೊರೆಯಬೇಕೆಂಬ ಉದ್ದೇಶದಿಂದ ಬಿಬಿಎಂಪಿ ಉಪಮೇಯರ್ ಆಗಿದ್ದ ದಿ.ರಮೀಳಾ ಉಮಾಶಂಕರ್ ಈ ವಿದ್ಯಾಸಂಸ್ಥೆ ಆರಂಭಿಸಿದ್ದು, ಮುಂದೆಯೂ ಉತ್ತಮ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇವೆ. ಅವರು ಬಿಬಿಎಂಪಿ ಸದಸ್ಯರಾಗಿ ಕೆಲಸ ಮಾಡುವಾಗ ಅವರ ನೈಜತೆ, ಕಾರ್ಯ ಪ್ರವೃತ್ತಿಯನ್ನು ಪರಿಗಣಿಸಿ ಕನ್ನಡಪ್ರಭ ಪತ್ರಿಕಾ ಮಾಧ್ಯಮದಿಂದ ಮಾದರಿ ಅವಾರ್ಡ್ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದು ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಶಾಲೆಯ ಅಧ್ಯಕ್ಷರಾದ ಉಮಾಶಂಕರ್ ತಿಳಿಸಿದರು.

ಪಟ್ಟಣದ ವಿದ್ಯಾಸ್ಫೂರ್ತಿ ಇಂಟರ್ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ದಿ.ರಮೀಳಾ ಉಮಾಶಂಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಶಾಲಾ ಸಮನ್ವಯಾಧಿಕಾರಿ ಚಂದ್ರಮ್ಮ ಮಾತನಾಡಿ, ರಮೀಳಾ ಉಮಾಶಂಕರ್ ಅವರ ಸೇವೆ, ಮೌಲ್ಯಗಳು, ಆದರ್ಶಗಳು ಮತ್ತು ಶಿಕ್ಷಣದ ಮೇಲಿನ ಬದ್ಧತೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಸೇವಾಪರಂಪರೆ ಸದಾಕಾಲ ಮುಂದುವರಿಯುವಂತೆ, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ, ದೊಡ್ಡ ಕನಸುಗಳನ್ನು ಕಂಡು, ಉನ್ನತ ಗುರಿಗಳನ್ನು ಹೊಂದಿ ಶಾಲೆಗೆ, ಪೋಷಕರಿಗೆ ಕೀರ್ತಿ ತರಬೇಕು ಎಂದರು.

ಸಿಇಒ ವರುಣ್ ಕುಮಾರ್ ಮಾತನಾಡಿ, ದಾಬಸ್‍ಪೇಟೆ ಕೈಗಾರಿಕೆಗಳಿಂದ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದ್ದು, ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದಲೇ ದಿ.ರಮೀಳಾ ಉಮಾಶಂಕರ್ ದಾಬಸ್‍ಪೇಟೆಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಅವರು ಸಕ್ರಿಯವಾಗಿ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ ಸಹ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದರು ಎಂದರು.

ಆಡಳಿತಾಧಿಕಾರಿ ರಾಮಚಂದ್ರ ಮಾತನಾಡಿ, ನಮ್ಮ ಶಿಕ್ಷಕ ವೃಂದಕ್ಕೆ ಅತ್ಯಂತ ಪ್ರೀತಿಪಾತ್ರರಾಗಿದ್ದ ರಮೀಳಾ ಉಮಾಶಂಕರ್ ನಮ್ಮಂತಹ ನೂರಾರು ಶಿಕ್ಷಕರಿಗೆ ಮಾರ್ಗದರ್ಶಕರಾಗಿದ್ದರು. ರಮೀಳಾ ಉಮಾಶಂಕರ್ ಅವರ ಪರಂಪರೆ ಸದಾಕಾಲ ಮುಂದುವರಿಯಬೇಕು ಮತ್ತು ಅವರು ಕಂಡ ಕನಸುಗಳು ಹಾಗೂ ಹೊಂದಿದ್ದ ಮೌಲ್ಯಗಳು ಸಂಸ್ಥೆಯ ಮೂಲಕ ಮುಂದಿನ ಪೀಳಿಗೆಗಳಿಗೂ ತಲುಪಬೇಕು ಎಂಬ ಸಂದೇಶವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ದಿಲೀಪ್ ಕುಮಾರ್, ಉಪಪ್ರಾಂಶುಪಾಲರಾದ ಅನಿಲ್ ಕುಮಾರ್ ಹಾಗೂ ವನಜಾಕ್ಷಿ, ಅತಿಥಿಗಳಾದ ನಿತ್ಯಶ್ರೀ ವರುಣ್ ಕುಮಾರ್ ಸೇರಿ ಬೋಧಕ ಹಾಗೂ ಬೋಧಕೇತರ ವರ್ಗ ಪೋಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಕ್ಷ ಸಂಘಟನೆಗೆ ಭಾರತ್ ಜೋಡೋ ಸಂಘ ಸಹಕಾರಿ: ಪಿ.ರವಿಕುಮಾರ್
ಬೆಂಗಳೂರು ಜಲ ಮಂಡಳಿ ಅಧಿಕಾರಿಗಳ ಕಳ್ಳಾಟ...!