ಎರಡು ವರ್ಷದಿಂದ ಬಿಲ್‌ ಆಗಿಲ್ಲ: ಅಸಮಧಾನ

KannadaprabhaNewsNetwork |  
Published : Aug 26, 2026, 01:15 AM IST
೨೫ಶಿರಾ೩: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಶಿರಾ ತಾಲೂಕು ವ್ಯಾಪ್ತಿಯ ಗುತ್ತಿಗೆದಾರರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕು ವ್ಯಾಪ್ತಿಯ ಗುತ್ತಿಗೆದಾರರು ಅತ್ಯಂತ ಸಂಕಷ್ಟದಲ್ಲಿದ್ದು ಯಾವುದೇ ಇಲಾಖೆಯಲ್ಲೂ ಕೂಡ ಅನುದಾನ ಬಿಡುಗಡೆಯಾಗುತ್ತಿಲ್ಲ. ಎರಡು ವರ್ಷಗಳಿಂದ ಬಿಲ್ ಆಗಿಲ್ಲ. ಕೂಡಲೇ ಸರ್ಕಾರ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಶಿರಾ ತಾಲೂಕು ಗುತ್ತಿಗೆದಾರರ ಸಂಘದ ಕೆ.ಎನ್.ಶೇಷಾ ನಾಯಕ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕು ವ್ಯಾಪ್ತಿಯ ಗುತ್ತಿಗೆದಾರರು ಅತ್ಯಂತ ಸಂಕಷ್ಟದಲ್ಲಿದ್ದು ಯಾವುದೇ ಇಲಾಖೆಯಲ್ಲೂ ಕೂಡ ಅನುದಾನ ಬಿಡುಗಡೆಯಾಗುತ್ತಿಲ್ಲ. ಎರಡು ವರ್ಷಗಳಿಂದ ಬಿಲ್ ಆಗಿಲ್ಲ. ಕೂಡಲೇ ಸರ್ಕಾರ ಗುತ್ತಿಗೆದಾರರಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಶಿರಾ ತಾಲೂಕು ಗುತ್ತಿಗೆದಾರರ ಸಂಘದ ಕೆ.ಎನ್.ಶೇಷಾ ನಾಯಕ್ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರು ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲದ ಬಡ್ಡಿ ಹೆಚ್ಚಾಗಿ ಮನೆ ಮೇಲೆ ಪಡೆದಿರುವ ಸಾಲ ಒಡವೆಗಳ ಮೇಲೆ ಪಡೆದಿರುವ ಸಾಲ ಕೈ ಬದಲು ಸಾಲ ಎಲ್ಲಾ ಬಡ್ಡಿ ಹೆಚ್ಚಾಗಿ ಮಾನಸಿಕವಾಗಿ ಚಿಂತೆಗೀಡಾಗಿದ್ದು ಆರ್ಥಿಕವಾಗಿ ನಷ್ಟ ಉಂಟಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಇದರ ಜೊತೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ೨೦೨೩ ರಲ್ಲಿ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಕೇಂದ್ರ ಸರಕಾರದ ಪಾಲಿನ ಹಣ ಬಿಡುಗಡೆಯಾಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ಸಕಾಲಕ್ಕೆ ಬಿಲ್ಲುಗಳು ಸಲ್ಲಿಸದೆ ಕಾಲಾವಧಿ ದಂಡವನ್ನು ಗುತ್ತಿಗೆದಾರರ ಮೇಲೆ ಹಾಕುತ್ತಿದ್ದು ಇದರಿಂದ ಇನ್ನು ಹೆಚ್ಚಿನ ಹೊರೆ ಗುತ್ತಿಗೆದಾರರಿಗೆ ಬೀಳುತ್ತಿದೆ ಸಕಾಲದಲ್ಲಿ ಕೆಲಸ ಮಾಡಿದರೂ ಬಿಲ್ಲುಗಳು ಆಗುತ್ತಿಲ್ಲ. ಬಿಲ್ಲುಗಳ ಬಗ್ಗೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಶಾಸಕ ಟಿ ಬಿ ಜಯಚಂದ್ರ ಅವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಪಾಂಡುರಂಗಪ್ಪ, ಮಹೇಂದ್ರ ಗೌಡ, ಅರುಣ್ ಕುಮಾರ್, ಪ್ರಕಾಶ್, ಉದಯ್, ಟಿಪಿ ಶ್ರೀನಿವಾಸ್, ರಾಜಣ್ಣ, ಶ್ರೀನಿವಾಸ್, ಹೊನ್ನೇಶಪ್ಪ, ಜಯರಾಮ್, ರಂಗನಾಥ್ ಗೌಡ, ಜಯರಾಮಯ್ಯ, ತಿಪ್ಪೇಸ್ವಾಮಿ, ಸುಧಾಕರ್ ಗೌಡ, ಮಂಜುನಾಥ್, ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘಗಳ ಆರ್ಥಿಕ ಪ್ರಗತಿಗೆ ಸದಸ್ಯರು ಸಹಕರಿಸಿ
ನಾದೂರಿನಲ್ಲಿ ಪಡಿತರ ಕೇಂದ್ರ ಕಾರ್ಯಾರಂಭ