ತಾಲೂಕು ನಾದೂರು ಗ್ರಾಮದ ಬಹುದಿನಗಳ ಕನಸು ನನಸಾಗಿದ್ದ ಪಡಿತರ ವಿತರಣಾ ಉಪಕೇಂದ್ರ ಕಾರ್ಯಾರಂಭ ಮಾಡಿದೆ. ಈ ವೇಳೆ ಗ್ರಾಮಕ್ಕೆ ಪಡಿತರ ತುಂಬಿ ತಂದ ಲಾರಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಶಿರಾ
ತಾಲೂಕು ನಾದೂರು ಗ್ರಾಮದ ಬಹುದಿನಗಳ ಕನಸು ನನಸಾಗಿದ್ದ ಪಡಿತರ ವಿತರಣಾ ಉಪಕೇಂದ್ರ ಕಾರ್ಯಾರಂಭ ಮಾಡಿದೆ. ಈ ವೇಳೆ ಗ್ರಾಮಕ್ಕೆ ಪಡಿತರ ತುಂಬಿ ತಂದ ಲಾರಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. ಹಲವು ದಶಕಗಳಿಂದ ನಾದೂರು ಗ್ರಾಮದ ರೇಷನ್ ಕಾರ್ಡ್ ಫಲಾನುಭವಿಗಳು, ತಮ್ಮ ಪಡಿತರ ಪಡೆಯಲು ೧.೫ ಕಿಲೋ ಮೀಟರ್ ದೂರದ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೇಷನ್ ಪಡೆಯಬೇಕಿತ್ತು. ವೃದ್ಧರು ಪಡಿತರ ಪಡೆಯಲು ಬಹಳ ಕಷ್ಟ ಪಡಬೇಕಾಗಿತ್ತು. ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಆಹಾರ ಇಲಾಖೆಗೆ ಸೂಚಿಸಿದ ಹಿನ್ನೆಲೆಯಲ್ಲಿ ಕೆಲವೇ ತಿಂಗಳಲ್ಲಿ ಗ್ರಾಮದ ಸಮಸ್ಯೆ ಬಗೆಹರಿದಿದೆ ಎಂದು ಗ್ರಾಮಸ್ಥರು ಸಂತಸ ಹಂಚಿಕೊಂಡರು.
ಈ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಹರೀಶ್, ಮುಖಂಡ ಎನ್.ಇ.ಪರಮೇಶ್, ನವೀನ್, ಅಂಗಡಿ ಜಯಣ್ಣ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ನಾಗಭೂಷಣ್ (ಬಾಬು), ಮೈಕ್ ರಾಜಣ್ಣ, ಚಿಕ್ಕಣ್ಣ, ಮಹಾಲಿಂಗಪ್ಪ, ಕುರಿ ಮೂರ್ತಿ, ಪಾಳೇಗಾರ ಬೊಮ್ಮಣ್ಣ, ಮಹೇಶ್ ಸೇರಿದಂತೆ ನಾದೂರು ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.