ಮಡಿಕೇರಿ : ದಸರಾ ಬಳಿಕ ಕೆಲ ಸಚಿವರ ಸಂಪುಟದಿಂದ ಕೈಬಿಡಲಾಗುವುದು ಎಂಬ ವಿಚಾರ, ಸಚಿವ ಸಂಪುಟದಲ್ಲಿ ಕೆಲವರನ್ನು ಕೈಬಿಡುವುದು ಖಚಿತ. ಸಮಯ ಸಂದರ್ಭ ಬಂದರೆ ಹೈಕಮಾಂಡ್ ಸಚಿವರ ಬದಲಾವಣೆ ಮಾಡಬಹುದು. ಸಚಿವ ಸಂಪುಟ ಬದಲಾವಣೆಗೆ ಸಚಿವ ಭೋಸರಾಜ್ ಹೇಳಿಕೆ ಪುಷ್ಟಿ ನೀಡಿದೆ.
ಆಯಾ ಸಚಿವರಿಗೆ ಇನ್ನಷ್ಟು ಉತ್ತಮ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ತಮ್ಮ ತಮ್ಮ ಇಲಾಖೆಗಳ ಕಾರ್ಯಕ್ರಮಗಳನ್ನು ಜನರಪರ ಗೊಳಿಸುವುದು ಹೇಗೆ ಎಂದು ಸೂಚಿಸಿದ್ದಾರೆ ಹೇಳಿದರು.
----------------------------ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆಯು ಪ್ರಮುಖ: ಭೋಸಜಾಜು
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಮೂರು ತಿಂಗಳು ಪೂರ್ಣಗೊಳ್ಳುತ್ತಿದ್ದು, ಹಲವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಜನರ ಮನಃ ಗೆದ್ದಿದೆ.
ಕೊಡಗು ಜಿಲ್ಲಾಡಳಿತ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆಯು ಗುರುವಾರ ನಗರದ ಕೋಟೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಲುವಾಗಿ ಪೊಲೀಸ್ ಇಲಾಖಾ ವತಿಯಿಂದ ಪಣತೊಟ್ಟಿದ್ದು, 2024 ನೇ ಸಾಲಿನಲ್ಲಿ ಈವರೆಗೆ ಒಟ್ಟು 52 ಪ್ರಕರಣಗಳನ್ನು ದಾಖಲಿಸಿ, 93 ಜನ ಆರೋಪಿಗಳನ್ನು ಬಂಧಿಸಲಾಗಿರುತ್ತದೆ. ಆರೋಪಿಗಳ ವಶದಿಂದ ಸುಮಾರು 4, 56, 900 ರು. ಮೌಲ್ಯದ 15.265 ಕೆ.ಜಿ ಪ್ರಮಾಣದ ವಿವಿಧ ರೀತಿಯ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. 2023 ನೇ ಸಾಲಿನಲ್ಲಿ 101 ಪ್ರಕರಣಗಳನ್ನು ದಾಖಸಿದ್ದು, ಅವುಗಳಲ್ಲಿ ಇತ್ಯರ್ಥವಾದ 22 ಪ್ರಕರಣಗಳಲ್ಲಿ 25 ಜನ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿರುತ್ತದೆ. ಈ ಪೈಕಿ 01 ಪ್ರಕರಣದಲ್ಲಿ 03 ಜನ ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆಯಾಗಿರುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಬಹುಜನ ಹಿತಾಯ, ಬಹುಜನ ಸುಖಾಯ ಎಂಬಂತೆ ಎಲ್ಲ ಜನರಿಗೂ ಸರ್ಕಾರದ ಸೌಲಭ್ಯಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಲುಪಿಸಲು ಶ್ರಮಿಸುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಈ ಬಾರಿ ಧಾರಾಕಾರ ಮಳೆಯಿಂದ ಜಿಲ್ಲೆಯ ನದಿ, ಜಲಾಶಯ, ಜಲಪಾತ, ತೊರೆ, ಹಳ್ಳಕೊಳ್ಳ ತುಂಬಿ ಹರಿದವು. ಹೆಚ್ಚಿನ ಮಳೆಯಿಂದಾಗಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಮತ್ತು ಸೇತುವೆ, ಕಟ್ಟಡಗಳ ಹಾನಿ ಸಂಬಂಧ ಸುಮಾರು 70.74 ಕೋಟಿ ರು. ನಷ್ಟು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳು ಸೇರಿದಂತೆ 4.66 ಕೋಟಿ ರು. ನಷ್ಟು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ವ್ಯಾಪ್ತಿಯ ರಸ್ತೆ, ಸೇತುವೆ ಮತ್ತಿತರ 39.72 ಕೋಟಿ ರು. ನಷ್ಟವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 41ಕೋಟಿ ಅನುದಾನ ಲಭ್ಯವಿದೆ. ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ 29 ಮನೆಗಳು ಪೂರ್ಣಹಾನಿಯಾಗಿದ್ದು, ಒಟ್ಟು 34.80 ಲಕ್ಷ ರು. ಗಳನ್ನು ಸಂಬಂಧಪಟ್ಟವರಿಗೆ ಪಾವತಿಸಲಾಗಿರುತ್ತದೆ. 50 ಮನೆಗಳು ತೀವ್ರಹಾನಿ ಹಾಗೂ 103 ಮನೆಗಳು ಭಾಗಶಃ ಹಾನಿಯಾಗಿದ್ದು ಒಟ್ಟು 66.69 ಲಕ್ಷ ರು. ಗಳನ್ನು ಈಗಾಗಲೇ ಪಾವತಿಸಲಾಗಿರುತ್ತದೆ. ಅದೇ ರೀತಿ ಮಳೆಯಿಂದಾಗಿ ಜಿಲ್ಲೆಯಲ್ಲಿ 04 ಜಾನುವಾರುಗಳು ಹಾನಿಯಾದಂತೆ 65,000 ರು. ಗಳನ್ನು ಮಾಲೀಕರಿಗೆ ಪಾವತಿಸಲಾಗಿರುತ್ತದೆ ಎಂದರು.