ಅಪರಾಧ ತಡೆಗೆ 112ಕ್ಕೆ ಕರೆ ಮಾಡಿ

KannadaprabhaNewsNetwork |  
Published : Jun 21, 2025, 12:49 AM IST
20ಡಿಡಬ್ಲೂಡಿ1ವಿದ್ಯಾಗಿರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಸಾರಸ್ವತಪೂರ ರಹವಾಸಿಗಳ ಸಂಘವು ಸಾರ್ವಜನಿಕ ಕುಂದುಕೊರತೆ ಸಭೆ ನಡೆಯಿತು.   | Kannada Prabha

ಸಾರಾಂಶ

ಕಳ್ಳತನ, ಹಿರಿಯನಾಗರಿಕ ಸಮಸ್ಯೆ, ಹೆಣ್ಣು ಮಕ್ಕಳ ದೌರ್ಜನ್ಯ, ಫೋಕ್ಸೊ ಅಪರಾಧ ಪ್ರಕರಣ ಪತ್ತೆ ಹಚ್ಚಲು, ಡಿಜಿಟಿಲ್ ದೂರು (ದಾಖಲೆ) ಕರೆ, ಹೊಸ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಸಿಸಿಟಿವಿ ದೃಶ್ಯಗಳು ಸಹಕಾರಿಯಾಗಿವೆ

ಧಾರವಾಡ: ಅಪರಾಧ ತಡೆಗೆ ಪೊಲೀಸ್ ದೂರವಾಣಿ ಸಂಖ್ಯೆ 112 ನಾಗರಿಕ ಸುರಕ್ಷಾ ಸೇವೆ ಕೊಡುಗೆ. ದೂರು ಕರೆ ಮಾಡಿದ ಮೂರರಿಂದ ಆರು ನಿಮಿಷಗಳಲ್ಲಿ ಡಿಜಿಟಲ್ ಆಧಾರಿತ ದೂರು ದಾಖಲಾಗಿ ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಘಟನಾ ಸ್ಥಳಕ್ಕೆ ಪೊಲೀಸ್ ತಂಡ ಆಗಮಿಸಲಿದೆ. ಇದರ ಸದುಪಯೋಗ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕೆಂದು ವಿದ್ಯಾಗಿರಿ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಫಕ್ಟರ್ ಸಂಗಮೇಶ ದೀಡಿಗಿನಾಲ್ ತಿಳಿಸಿದರು.

ಇಲ್ಲಿಯ ಸಾರಸ್ವತಪೂರ ರಹವಾಸಿಗಳ ಸಂಘವು ಸಾರ್ವಜನಿಕ ಕುಂದುಕೊರತೆ ಸಭೆ ಮತ್ತು ಮುಖ್ಯಮಂತ್ರಿಗಳ ಪದಕ ವಿಜೇತ ಸನ್ಮಾನದಲ್ಲಿ ಮಾತನಾಡಿ, ಕಳ್ಳತನ, ಹಿರಿಯನಾಗರಿಕ ಸಮಸ್ಯೆ, ಹೆಣ್ಣು ಮಕ್ಕಳ ದೌರ್ಜನ್ಯ, ಫೋಕ್ಸೊ ಅಪರಾಧ ಪ್ರಕರಣ ಪತ್ತೆ ಹಚ್ಚಲು, ಡಿಜಿಟಿಲ್ ದೂರು (ದಾಖಲೆ) ಕರೆ, ಹೊಸ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಸಿಸಿಟಿವಿ ದೃಶ್ಯಗಳು ಸಹಕಾರಿಯಾಗಿವೆ. ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಲ್ಲಿ ಹೆಚ್ಚಾಗಿ ಫೋಕ್ಸೊ ಪ್ರಕರಣಗಳು ದಾಖಲಾಗಿವೆ. ಮನೆ ಕಳ್ಳತನ ಕಡಿವಾಣ ಹಾಕಿ ಪತ್ತೆ ಹಚ್ಚಿ ಬಂಧಿಸಲು ಸಹಕಾರಿಯಾಗಿವೆ. ಅಪರಾಧ ರಾತ್ರಿ ನಡೆಯುವ ಸ್ಥಳದಲ್ಲಿ ಹೊಸ ವೈಜ್ಞಾನಿಕ ತಂತ್ರಜ್ಞಾನ ಅಳವಡಿಕೆ, ಬೀಟ್ (ಪೊಲೀಸ್ ಪಹರೆ) ಮಾಡಲಾಗುತ್ತಿದೆ ಹಾಗೂ ಠಾಣೆ ಗಮನಕ್ಕೆ ಬಂದ ಸಮಸ್ಯೆಗಳ ಬಗ್ಗೆ ಕ್ರಮ ಜರುಗಿಸಲಾಗುತ್ತಿದೆ ಎಂದವರು ತಿಳಿಸಿದರು.

ರಹವಾಸಿಗಳ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿ ಗುಗ್ಗಳಿ ಕುಂದುಕೊರತೆ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪದಕ ವಿಜೇತ ಸಂಗಮೇಶ ದೀಡಿಗಿನಾಳ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಸಿದ್ದು ಪಾಟೀಲ, ಕವಿಯತ್ರಿ ರಾಧಾ ಶ್ಯಾಮ್, ಇಂದಿರಾ ಪ್ರಸಾದ, ಎಸ್.ಎನ್. ಕುಲಕರ್ಣಿ, ಎಂ.ಆರ್. ಹಂಪಸಾಗರ, ಸುಧೀಂದ್ರ ಕುಲಕರ್ಣಿ, ಎಸ್.ವಿ.ಮುತಾಲಿಕ ದೇಸಾಯಿ, ಡಾ.ಸಿ.ಬಿ. ಪುರಾಣಿಕ ಮತ್ತಿತರರು ಇದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ