ಸಾರಾಂಶ
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ರಚಿಸಿದಿ ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ ಮಾಡಿದರು. ರಾಜ್ಯ ಜಲ ವಿವಾದಗಳ ಕುರಿತಾದ ಈ ಪುಸ್ತಕ ಜಲ ವಿವಾದ ಒಪ್ಪಂದ ತೀರ್ಪುಗಳ ಬಗ್ಗೆ ಹಲವು ವಿಚಾರಗಳನ್ನು ಒಳಗೊಂಡಿದೆ.
ಬೆಂಗಳೂರು : ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ರಚಿಸಿದಿ ನೀರಿನ ಹೆಜ್ಜೆ ಪುಸ್ತಕ ಬಿಡುಗಡೆ ಮಾಡಿದರು. ರಾಜ್ಯ ಜಲ ವಿವಾದಗಳ ಕುರಿತಾದ ಈ ಪುಸ್ತಕ ಜಲ ವಿವಾದ ಒಪ್ಪಂದ ತೀರ್ಪುಗಳ ಬಗ್ಗೆ ಹಲವು ವಿಚಾರಗಳನ್ನು ಒಳಗೊಂಡಿದೆ.
ನೀರಿನ ಹೆಜ್ಜೆ ಪುಸ್ತಕದಲ್ಲೇನಿದೆ?
ನೀರು ನೀಲಿ ಬಂಗಾರ. ಸಾಕಷ್ಟು ಇತಿಹಾಸಗಳ ಅಧ್ಯಯನ ಮಾಡಿ ಈ ಪುಸ್ತಕವನ್ನು ರಚಿಸಲಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಗಳು, ನಮ್ಮ ರಾಜ್ಯದ ನದಿಗಳ ವಿಚಾರ ಸೇರಿ 10 ರಾಜ್ಯಗಳ ನದಿಗಳ ವಿಚಾರ, ದೇವೇಗೌಡರು ತೆಗೆದುಕೊಂಡು ತೀರ್ಮಾನ, ಒಪ್ಪಂದ ಹಾಗೂ ಅದರ ಯಶಸ್ಸು ಎಲ್ಲವನ್ನೂ ಇದರಲ್ಲಿ ಉಲ್ಲೇಖಿಸಿದ್ದೇನೆ. ಇದರಲ್ಲಿ ನಾನು ರಾಜಕೀಯ ಮಾಡದೇ ಅವರನ್ನು ಅಭಿನಂದಿಸಿದ್ದೇನೆ. ಸದನದಲ್ಲಿ ನಂಜೇಗೌಡರು ನೀರಾವರಿ ಬಗ್ಗೆ ಚರ್ಚೆ ಮಾಡುವಾಗ ನಾನು ಅದನ್ನು ಆಲಿಸಿದ್ದೆ. ಕೆಲ ಟೀಕೆಗಳನ್ನೂ ಮಾಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
13 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್
ನಾನು ಈ ಹಿಂದೆ ಇಂಧನ ಇಲಾಖೆಯಲ್ಲಿ ಪಾವಗಡದಲ್ಲಿ ರೈತರ ಜಮೀನನ್ನೂ ಸ್ವಾಧೀನ ಪಡಿಸಿಕೊಳ್ಳದೆ 13 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ಅನ್ನು ಮಾಡಿದ್ದೇವೆ. ಪ್ರತಿ ತಾಲೂಕಿನಲ್ಲೂ 20-50 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ನಮಗಿದೆ. ಹಾಗಾಗಿ ಮತ್ತೆ ಇಂಧನ ಇಲಾಖೆಯನ್ನೇ ಕೇಳಿದೆ. ಆದರೆ, ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ನೀರಾವರಿ ಇಲಾಖೆ ಜವಾಬ್ದಾರಿಗೆ ಒಪ್ಪಿಕೊಂಡೆ ಎಂದರು.
;Resize=(690,390))
)
)
;Resize=(128,128))
;Resize=(128,128))
;Resize=(128,128))
;Resize=(128,128))