ಸಾರಾಂಶ
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿದೆಸೆಯಲ್ಲಿ ಮಕ್ಕಳು ಪುಸ್ತಕ ಸ್ನೇಹಿಗಳಾಗಬೇಕು. ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಗ್ರಂಥಾಲಯದ ಪುಸ್ತಕ ಸಹಕಾರಿ. ಬದುಕಿಗೆ ಪುಸ್ತಕಗಳು ಹೊಸಮಾರ್ಗ ನೀಡಲಿದೆ ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅಭಿಪ್ರಾಯ ಪಟ್ಟರು.ನಗರದ ಹೊಸಮನೆ ಬಡಾವಣೆ ಸಮೀಪದ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ಧ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟಿಸಿ ಮಾತನಾಡಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಲಿಕೆ ಹಾಗೂ ಸಾರ್ವಜನಿಕರ ಓದಿಗಾಗಿ ಗುಣ ಮಟ್ಟದ ಗ್ರಂಥಾಲಯ ಸೇರಿದಂತೆ ಸ್ವಚ್ಚಂದ ವಾತಾವರಣ ನಿರ್ಮಾಣ ಮಾಡಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ದೇಶದ ಖ್ಯಾತ ವ್ಯಕ್ತಿಗಳ ಜೀವನಚರಿತ್ರೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಪುಸ್ತಕಗಳನ್ನು ಅಡಕಗೊಳಿಸಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಅವಶ್ಯವಿರುವ ಮೂಲಸವಲತ್ತನ್ನು ಪ್ರಾಮಾಣಿಕವಾಗಿ ಒದಗಿಸಲಾಗುವುದು ಎಂದ ಅವರು, ದೇಶದ ಮುಂದಿನ ಯುವಪ್ರಜೆಗಳನ್ನು ಸಮಾಜದ ಮುಂಚೂಣಿಗೆ ಕೊಂಡೊಯ್ಯುವುದೇ ಪ್ರಮುಖ ಧ್ಯೇಯ ಎಂದು ಹೇಳಿದರು. ಹಿರಿಯ ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ ಗ್ರಂಥಾಲಯ ಜ್ಞಾನ ಉಣಬಡಿಸುವ ಕೇಂದ್ರ. ಕನಿಷ್ಠ ದಿನದ ಒಂದುಗಂಟೆಗಳ ಬಿಡುವು ಮಾಡಿಕೊಂಡು ಗ್ರಂಥಾಲಯದಲ್ಲಿ ದಿನಪತ್ರಿಕೆ, ಪುಸ್ತಕಗಳು ಓದುವ ಅಭ್ಯಾಸವಿರಬೇಕು.ಇದರಿಂದ ಸಮಾಜದ ಆಗು-ಹೋಗುಗಳನ್ನು ಸಮಗ್ರವಾಗಿ ತಿಳಿದು ಕೊಳ್ಳಲು ಸಾಧ್ಯ ಎಂದು ತಿಳಿಸಿದರು.ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಜಿ.ಉಮೇಶ್ ಮಾತನಾಡಿ ಇಂದಿನಿಂದ ನ.20ರವರೆಗೆ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ, ಚಿತ್ರಕಲೆ ಸ್ಪರ್ಧೆ ಹಾಗೂ ಗ್ರಂಥಾಲಯ ಮಹತ್ವ ಕುರಿತು ಉಪನ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿ ಗಳಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.ನಗರಸಭೆ ಸದಸ್ಯೆ ಸುಜಾತಾ ಶಿವಕುಮಾರ್ ಮಾತನಾಡಿ ವಿದ್ಯಾಕ್ಷೇತ್ರದಲ್ಲಿ ಪುಸ್ತಕಗಳು ಮಕ್ಕಳ ತಲೆ ಎತ್ತುವಂತೆ ಮಾಡಲಿದ್ದು, ಮೊಬೈಲ್ ಚಟಕ್ಕೆ ಬಲಿಯಾಗದೇ, ನಿರಂತರ ಕಲಿಕೆಗೆ ಆ್ತೆ ನೀಡಿ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.ನಗರಸಭೆ ಉಪಾಧ್ಯಕ್ಷೆ ಲಲಿತಾ ನಾಯ್ಕ್, ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಮುಖ್ಯಸ್ಥ ತುಳಸಿದಾಸ್, ಗ್ರಂಥಾಲಯ ಸಿಬ್ಬಂದಿ ರಾಘವೇಂದ್ರ, ರೂಪ, ಶಂಕರೇಗೌಡ, ಸಿದ್ದೇಗೌಡ, ಸೌಮ್ಯ, ಕೃಪ, ಕೆ.ಬಿ.ವೀಣಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))