ಬಿಹಾರ ಯಾರ ಮುಡಿಗೆ ? ಎನ್‌ಡಿಎಗೆ ಗೆಲುವೋ ಬದಲಾವಣೆಯ ಪರ ಒಲವೋ?

| N/A | Published : Nov 14 2025, 05:47 AM IST

BIHAR ELECTION RESULT
ಬಿಹಾರ ಯಾರ ಮುಡಿಗೆ ? ಎನ್‌ಡಿಎಗೆ ಗೆಲುವೋ ಬದಲಾವಣೆಯ ಪರ ಒಲವೋ?
Share this Article
  • FB
  • TW
  • Linkdin
  • Email

ಸಾರಾಂಶ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಗದ್ದಲದಿಂದಾಗಿ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಮತಎಣಿಕೆ ಶುಕ್ರವಾರ ನಡೆಯಲಿದೆ. ಈ ಮೂಲಕ ಕಾತರಕ್ಕೆ ತೆರೆಬೀಳಲಿದೆ.

 ಪಟ್ನಾ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಗದ್ದಲದಿಂದಾಗಿ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆ ಮತಎಣಿಕೆ ಶುಕ್ರವಾರ ನಡೆಯಲಿದೆ. ಈ ಮೂಲಕ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ದಾಖಲೆಯ ಐದನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆಯೇ ಅಥವಾ ಈ ಬಾರಿ ಜನ ಬದಲಾವಣೆಗೆ ಮತಚಲಾಯಿಸಿದ್ದಾರೆಯೇ ಎಂಬ ಕಾತರಕ್ಕೆ ತೆರೆಬೀಳಲಿದೆ.

ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 67.13ರಷ್ಟು ಮತದಾನ ಆಗಿದೆ. ನ.6 ಮತ್ತು 11ರಂದು ಎರಡು ಹಂತದಲ್ಲಿ ರಾಜ್ಯದ 243 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 2,616 ಅಭ್ಯರ್ಥಿಗಳು ಕಣದಲ್ಲಿದ್ದರು.

ಎನ್‌ಡಿಎ ಮೈತ್ರಿಕೂಟ ಬಹುಮತ : ಸಮೀಕ್ಷೆಗಳು

ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತಗಳಿಸಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಮಹಾಘಟಬಂಧನ್‌ನ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ಮುಖಂಡರ್ಥಿ ತೇಜಸ್ವಿ ಯಾದವ್‌ ಮಾತ್ರ ಸಮೀಕ್ಷೆಗಳ ಭವಿಷ್ಯವನ್ನು ನಿರಾಕರಿಸಿದ್ದಾರೆ. ತಮ್ಮ ನೇತೃತ್ವದಲ್ಲಿ ಮಹಾಘಟಬಂಧನ್‌ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟವು ಬಿಜೆಪಿ, ಜೆಡಿಯು ಸೇರಿ ಐದು ಪಕ್ಷಗಳನ್ನು ಒಳಗೊಂಡಿದೆ. ಇನ್ನು ಕಾಂಗ್ರೆಸ್‌, ಆರ್‌ಜೆಡಿ, ಸಿಪಿಐ, ಇತರೆ ಎಡಪಕ್ಷಗಳು ಹಾಗೂ ವಿಕಾಸಶೀಲ್‌ ಇನ್ಸಾನ್‌ ಪಾರ್ಟಿ ಸೇರಿಕೊಂಡು ಮಹಾಘಟಬಂಧನ್‌ ಮಾಡಿಕೊಂಡಿವೆ. ಪ್ರಶಾಂತ್‌ ಕಿಶೋರ್‌ ಅವರು ಜನ್‌ ಸೂರಜ್‌ ಪಕ್ಷದ ಮೂಲಕ ಮೊದಲ ಬಾರಿಗೆ ಬಿಹಾರದಲ್ಲಿ ರಾಜಕೀಯ ಅದೃಷ್ಟಪರೀಕ್ಷೆಗಿಳಿದಿದ್ದಾರೆ.

10 ಸಮೀಕ್ಷೆಗಳಲ್ಲಿ ಎನ್‌ಡಿಎಗೆ ಅಧಿಕಾರ:

ಬಿಹಾರ ಚುನಾವಣೆ ಕುರಿತ ಬಹುತೇಕ ಅಂದರೆ 10 ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೇ ಗೆಲುವು ಪಕ್ಕಾ ಎಂದು ಹೇಳಿವೆ. ಪ್ರಶಾಂತ್‌ ಕಿಶೋರ್‌ ಅವರ ಜನ್‌ ಸೂರಜ್‌ ಪಕ್ಷಕ್ಕೆ 2ಕ್ಕಿಂತ ಹೆಚ್ಚು ಸ್ಥಾನ ಸಿಗುವುದು ಅನುಮಾನ. ಇನ್ನು ಮಹಾಘಟಬಂಧನ್‌ ಸೀಟುಗಳ ಸಂಖ್ಯೆ 100 ದಾಟುವುದು ಕಷ್ಟ ಎಂದು ಭವಿಷ್ಯ ನುಡಿದಿವೆ.

Read more Articles on