ಸಿಎಂ ಆಗಮನ ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ

KannadaprabhaNewsNetwork |  
Published : Nov 29, 2025, 12:15 AM IST
28ಎಚ್ಎಸ್ಎನ್9ಎ :  | Kannada Prabha

ಸಾರಾಂಶ

ಸರ್ಕಾರ ಮಾಡಿರುವ ಉತ್ತಮ ಕೆಲಸಗಳು ಜನರಿಗೆ ಕಾಣಬೇಕು. ಈ ನಿಟ್ಟಿನಲ್ಲಿ ಡಿ.೬ರಂದು ಹಾಸನದಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಣೆ ಮಾಡುವುದರ ಮೂಲಕ ಸಹಕರಿಸುವಂತೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ೨೦೨೫ರ ಜನವರಿಯಿಂದ ಇಲ್ಲಿಯವರೆಗೆ ೨೧,೬೩೧ ಜಮೀನುಗಳನ್ನು ಅಳತೆ ಮಾಡಲಾಗಿದೆ. ಇದರಲ್ಲಿ ೧೦ ಸಾವಿರ ಆರ್‌.ಟಿ.ಸಿ ಆಗಿದೆ. ಉಳಿದವು ಕೂಡ ಮುಂದಿನ ದಿನಗಳಲ್ಲಿ ಆರ್‌ಟಿಸಿ ಮಾಡಲಾಗುವುದು ಎಂದರು.

ಹಾಸನ: ಸರ್ಕಾರ ಮಾಡಿರುವ ಉತ್ತಮ ಕೆಲಸಗಳು ಜನರಿಗೆ ಕಾಣಬೇಕು. ಈ ನಿಟ್ಟಿನಲ್ಲಿ ಡಿ.೬ರಂದು ಹಾಸನದಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಣೆ ಮಾಡುವುದರ ಮೂಲಕ ಸಹಕರಿಸುವಂತೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಬೈರೇಗೌಡರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಇದೊಂದು ಸರ್ಕಾರಿ ಕಾರ್ಯಕ್ರಮ. ಜಿಲ್ಲಾಡಳಿತದೊಂದಿಗೆ ವಿವಿಧ ಇಲಾಖೆಗಳು ಒಳಗೊಂಡಂತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಕಳೆದ ಒಂದು ವರ್ಷದಲ್ಲಿ ಆದಂತಹ ಕೆಲಸಗಳನ್ನು ಜನರಿಗೆ ಸಮರ್ಪಣೆ ಮಾಡಲಾಗುತ್ತಿದೆ. ಕಂದಾಯ ಇಲಾಖೆ ಗಣನೀಯವಾಗಿ ಪ್ರಗತಿ ಸಾಧಿಸಿದೆ ಎಂದ ಅವರು, ೧೪ ವರ್ಷದಲ್ಲಿ ೨೪೪೪ ರೈತರಿಗೆ ಪೋಡಿ ದುರಸ್ತಿ ಮಾಡಿಕೊಂಡಲಾಗಿದೆ. ಆದರೆ ೨೦೨೫ರ ಜನವರಿಯಿಂದ ಇಲ್ಲಿಯವರೆಗೆ ೨೧,೬೩೧ ಜಮೀನುಗಳನ್ನು ಅಳತೆ ಮಾಡಲಾಗಿದೆ. ಇದರಲ್ಲಿ ೧೦ ಸಾವಿರ ಆರ್‌.ಟಿ.ಸಿ ಆಗಿದೆ. ಉಳಿದವು ಕೂಡ ಮುಂದಿನ ದಿನಗಳಲ್ಲಿ ಆರ್‌ಟಿಸಿ ಮಾಡಲಾಗುವುದು ಎಂದರು.ವೇದಿಕೆ ಕಾರ್ಯಕ್ರಮ ೧೧ ಗಂಟೆಗೆ ಪ್ರಾರಂಭ ಮಾಡಲೇಬೇಕು. ೨.೩೦ಕ್ಕೆ ಕಾರ್ಯಕ್ರಮ ಮುಗಿಯಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂಬಂಧಪಟ್ಟ ವಿ.ಎ ಮತ್ತು ಪಿಡಿಒಗಳು ತಾವು ಕರೆತಂದ ಫಲಾನುಭವಿಗಳನ್ನು ಕಾರ್ಯಕ್ರಮದ ನಂತರ ಸುರಕ್ಷಿತವಾಗಿ ಅವರನ್ನು ಮನೆಗೆ ತಲುಪಿಸಬೇಕು. ಹೋಗುವಾಗ ಅವರ ಕೈಯಲ್ಲಿ ದಾಖಲೆಗಳಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಹೆಸರಿನಲ್ಲಿ ಯಾವುದೇ ದುಂದುವೆಚ್ಚ ಮಾಡುವಂತಿಲ್ಲ. ಸಮಯವನ್ನೂ ವ್ಯರ್ಥಗೊಳಿಸುವಂತಿಲ್ಲ ಆಡಂಬರ ಬೇಡ ಸರಳವಾಗಿ ಕಾರ್ಯಕ್ರಮವನ್ನುಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಂಸದರಾದ ಶ್ರೇಯಸ್ ಪಟೇಲ್,ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಅಧಿಕಾರಿ ಬಿ.ಆರ್. ಪೂರ್ಣಿಮಾ,ಸಚಿವರ ಆಪ್ತ ಕಾರ್ಯದರ್ಶಿ ರವಿ ತಿಮ್ಮಾಪುರ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳಾದ ಜಗದೀಶ್‌ ಗಂಗಣ್ಣನವರ್, ರಾಜೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ : ಡಿಕೆ ಸಿಡಿಮಿಡಿ ! - ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ ?
ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌