ಕನ್ನಡಪ್ರಭ ವಾರ್ತೆ ಕಲಬುರಗಿ
ರಾಮಮಂದಿರ ಹತ್ತಿರವಿರುವ ಅಥರ್ವ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಜಿಲ್ಲೆ ಧರ್ತಿ ಅಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ, ಆದಿ ಕರ್ಮಯೋಗಿ ಅಭಿಯಾನ: ಪ್ರಕ್ರಿಯೇ ಪ್ರಯೋಗಾಲಯ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಹರ್ಷಿ ವಾಲ್ಮೀಕಿ ಮತ್ತು ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಾಗಾರ ಉದ್ಫಾಟಿಸಿ ಮಾತನಾಡಿದರು.
ಈಗಾಗಲೆ ತರಬೇತಿಯನ್ನು ಪಡೆದ ಮಾಸ್ಟರ್ ಟ್ರೇನರ್ಸ್‍ಗಳಿಂದ ಐದು ಇಲಾಖೆಯ 30 ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನಗಳ ತರಬೇತಿ ನೀಡಿದೆ. ಆದಿ ಕರ್ಮಯೋಗಿ ಅಭಿಯಾನದ ಕುರಿತು ಮತ್ತು ಬುಡಕಟ್ಟು ಸಮುದಾಯಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ತಿಳುವಳಿಕೆ ಮೂಡಿಸಲು ಪ್ರತಿಯೊಬ್ಬ ಅಧಿಕಾರಿಗಳು ಶ್ರಮಿಸಬೇಕೆಂದು ತಿಳಿಸಿದರು.ಅಧಿ ಕರ್ಮಯೋಗಿ ಅಭಿಯಾನ ಹಾಗೂ ವಿಭಾಗಾಧಿಕಾರಿ ಬುಡಕಟ್ಟು ವ್ಯವಹಾರದ ಸಚಿವಾಲಯ ಭಾರತ ಸರ್ಕಾರ ಕಲಬುರಗಿ ಜಿಲ್ಲಾ ಪ್ರಭಾರ ಅಧಿಕಾರಿಯಾದ ಕುಂದನ ಕುಮಾರ ಮಾತನಾಡಿ, ಬುಡಕಟ್ಟು ಸಮಾಜವು ನಮ್ಮ ಸಮಾಜದಿಂದ ಅತ್ಯಂತ ವಂಚಿತ ವರ್ಗದಲ್ಲಿ ಒಂದಾಗಿದೆ. ಅವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿದಿಲ್ಲ ಎಂದರು.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಕಾರ್ಯಕ್ರಮದ ಕುರಿತು ಮಾತನಾಡಿದರು.ಗ್ರಾಮೀಣ ಕುಡಿವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತ ಜಗದೇವ ಜೀವನಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ನೆಲಸನ್ ಮಂಡೆಲಾ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಸುಭಾಷ, ಸಿ.ಎಸ್.ಒ, ಕಲಬುರಗಿ ಶಿಕ್ಷಣಾಧಿಕಾರಿ ಶಂಕರಮ್ಮ ಡವಳಗಿ ಕಾರ್ಯಕ್ರಮ ನಿರೂಪಿಸಿ, ಜೇವರ್ಗಿ ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಸಂತೋಷ ಕುಮಾರ ಯಾಚೆ, ಜಿಲ್ಲಾ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಚೇತನ್ ಗುರುಕರ್ ವಂದಿಸಿದ್ದರು.