ಎಚ್.ಡಿ. ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದಿರುವುದು ಹಾಸ್ಯಾಸ್ಪದ: ಎ. ಮಂಜು

KannadaprabhaNewsNetwork |  
Published : Nov 07, 2026, 01:15 AM IST
34 | Kannada Prabha

ಸಾರಾಂಶ

ಪ್ರಿಯಾಂಕ್ ಖರ್ಗೆಗೆ ಕ್ಷಮೆ ಹೇಳಿ ಎಂದು ನಾನು ಹೇಳಲ್ಲ. ಆ ಪದದ ಅರ್ಥ ಏನು ಎಂದು ತಿಳಿಸಿ ಅಂತ ಕೇಳುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ತೊಲಗಿಸಬೇಕು ಅಂತ ಪ್ರಿಯಾಂಕ್ ಖರ್ಗೆ ತೀರ್ಮಾನ ಮಾಡಿದ್ದಾರೆ. ಅವರ ಭಾಷೆಯೇ ಅವರ ವ್ಯಕ್ತಿತ್ವವನ್ನು ತೋರಿಸುತ್ತೆ. ಇವರ ಪದ ಬಳಕೆ ಹಳ್ಳಿ ಜನರಿಗೆ ಅವಮಾನ ಮಾಡಿದ್ದಂತೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹಳ್ಳಿ ಗುಗ್ಗು ಎಂದಿರುವುದು ಹಾಸ್ಯಾಸ್ಪದದ ಹೇಳಿಕೆ ಎಂದು ಜೆಡಿಎಸ್ ಶಾಸಕ ಎ.ಮಂಜು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ, ದೇವೇಗೌಡರು, ದೇವರಾಜ ಅರಸು, ವೀರೇಂದ್ರ ಪಾಟೀಲ್ ಸೇರಿ ಎಲ್ಲಾ ಮಹನೀಯರು ಹಳ್ಳಿಗಳಿಂದ ಬಂದವರು. ಪದದ ಅರ್ಥ ಗೊತ್ತಿಲ್ಲದೆ ಪ್ರಚಾರದ ಹುಚ್ಚಿಗೆ ಮಾತನಾಡಬಾರದು. ಅವರ ಹೇಳಿಕೆ ನಮಗೆ ವರದಾನ ಆಗಲಿದೆ. 2028ಕ್ಕೆ ಜನರು ಎಲ್ಲದಕ್ಕೂ ಉತ್ತರ ಕೊಡ್ತಾರೆ ಎಂಬ ಭರವಸೆಯಿದೆ. ನಾನು ಅವರ (ಪ್ರಿಯಾಂಕ್ ಖರ್ಗೆ) ಹೆಸರನ್ನು ಹೇಳಲು ಇಷ್ಟಪಡಲ್ಲ. ಅವರ ತಂದೆ ಕೂಡ ಹಳ್ಳಿಯಿಂದಲೇ ಬಂದವರು ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆಗೆ ಕ್ಷಮೆ ಹೇಳಿ ಎಂದು ನಾನು ಹೇಳಲ್ಲ. ಆ ಪದದ ಅರ್ಥ ಏನು ಎಂದು ತಿಳಿಸಿ ಅಂತ ಕೇಳುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ತೊಲಗಿಸಬೇಕು ಅಂತ ಪ್ರಿಯಾಂಕ್ ಖರ್ಗೆ ತೀರ್ಮಾನ ಮಾಡಿದ್ದಾರೆ. ಅವರ ಭಾಷೆಯೇ ಅವರ ವ್ಯಕ್ತಿತ್ವವನ್ನು ತೋರಿಸುತ್ತೆ. ಇವರ ಪದ ಬಳಕೆ ಹಳ್ಳಿ ಜನರಿಗೆ ಅವಮಾನ ಮಾಡಿದ್ದಂತೆ. ಇದರಿಂದ ರಾಜಕೀಯ ಲಾಭ ಸಿಗುತ್ತೆ ಅನ್ನೋದು ನಮಗೆ ಬೇಕಾಗಿಲ್ಲ ಎಂದರು.

ಹಳ್ಳಿ ಬದುಕು ಬದುಕಿದ್ರೆ ಅವ್ರಿಗೆ ಗೊತ್ತಾಗುತ್ತಿತ್ತು. ಹಳ್ಳಿಗಳಿಂದ ದೇಶ ಅಂತ ಮಹಾತ್ಮ ಗಾಂಧಿ ಹೇಳಿದ್ರು. ಅದನ್ನು ಪ್ರಿಯಾಂಕ್ ಖರ್ಗೆ ತಿಳಿದುಕೊಳ್ಳಬೇಕು. ಮೋದಿಗೆ ಚಾಯ್ ವಾಲಾ ಅಂತಿದ್ರು. ಅಂತವರನ್ನು ಮೂರು ಬಾರಿ ದೇಶದ ಜನ ಪ್ರಧಾನಿ ಮಾಡಿದ್ರು. ಇದನ್ನು ಮರಿಯಬಾರದು ಎಂದರು.

ಹಳ್ಳಿಜನರು ಸಮಯ ಬಂದಾಗ ಪಾಠ ಕಲಿಸುತ್ತಾರೆ. ಇವರು ಕುಮಾರಸ್ವಾಮಿ ಡಿ ಗ್ರೇಡ್ ಮಾಡಿಲ್ಲ. ಹಳ್ಳಿ ಜನರನ್ನು ಡಿ ಗ್ರೇಡ್ ಮಾಡಿದ್ದಾರೆ. ಹಳ್ಳಿಗಳಿಗೆ ವೋಟ್ ಕೇಳಲು ಹೋದಾಗ ಜನರು ಗುಗ್ಗು ಯಾರು ತೋರಿಸುತ್ತಾರೆ. ಕಷ್ಟಪಟ್ಟು ಸಚಿವ ಆಗಿದ್ರೆ ಗೊತ್ತಿರೋದು. ಸುಲಭವಾಗಿ ಅಧಿಕಾರ ಸಿಕ್ಕಾಗ ಈ ರೀತಿ ಆಗುತ್ತೆ. ಮಲ್ಲಿಕಾರ್ಜುನ್ ಖರ್ಗೆ ರಾಜಕೀಯವಾಗಿ ನನ್ನನ್ನು ಬೆಳೆಸಿದ್ದಾರೆ. ಅದಕ್ಕೆ ನನಗೆ ಕೃತಜ್ಞತೆ ಇದೆ. ಆದರೆ, ನಿಮ್ಮ ಮಗನಿಗೆ ಸ್ವಲ್ಪ ಬುದ್ಧಿ ಹೇಳಿ ಅಂತ ನಾನು ಅವರಿಗೆ ಮನವಿ ಮಾಡ್ತೀನಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ