ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಚಂದ್ರಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಆರೋಗ್ಯದ ಕಾಳಜಿ ಬಹಳ ಮುಖ್ಯ. ಗ್ರಾಮೀಣ ಭಾಗದ ಬಡ ಜನರಿಗೆ ಉತ್ತಮ ಚಿಕಿತ್ಸೆ ಸಿಗುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಧು ಬಂಗಾರಪ್ಪ ಅಭಿಮಾನಿಗಳ ಬಳಗ, ಕೆ.ಎಸ್.ಹೆಗ್ಡೆ ಆಸ್ಪತ್ರೆ ಸೇರಿ ಜನರ ಮನೆ ಬಾಗಿಲಿಗೆ ನುರಿತ ವೈದ್ಯರನ್ನು ಕರೆಸಿರುವುದು ಶ್ಲಾಘನೀಯ ಎಂದರು.ಮಧು ಬಂಗಾರಪ್ಪ ಅಭಿಮಾನಿ ಬಳಗದ ದರ್ಶನ್ ಚಿಕ್ಕಮಾಕೊಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಧು ಬಂಗಾರಪ್ಪ ಅಭಿಮಾನಿ ಬಳಗ ಹಾಗೂ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸಹಕಾರದೊಂದಿಗೆ ನಿರಂತರವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಈ ಕಾರ್ಯದಿಂದಗ್ರಾಮೀಣ ಭಾಗದ ಬಡಜನರಆರೋಗ್ಯ ಸುಧಾರಣೆಗೆದೊಡ್ಡ ಶಕ್ತಿ ಸಿಕ್ಕಂತಾಗಿದೆ. ನಾವೆಲ್ಲ ಸೇರಿ ಮಾಡುತ್ತಿರುವಇಂತಹ ಸಮಾಜಮುಖಿ ಕೆಲಸಕ್ಕೆ ಸಾರ್ವಜನಿಕರು ನೀಡುತ್ತಿರುವ ಪ್ರೋತ್ಸಾಹ ಮತ್ತು ಸಹಕಾರ ಮತ್ತಷ್ಟು ಸೇವೆ ಮಾಡಲು ಉತ್ಸಾಹ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮAಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ನುರಿತ ತಜ್ಞರಾದ ಡಾ.ಶಶಾಂಕ್ ಕೋಟ್ಯಾನ್, ಡಾ.ಸಫ್ವಾನ್ ಜಿ.ಎಂ, ಡಾ. ಕಿರಣ್ ಹರಿ, ಡಾ. ರಾಹುಲ್ ಶೆಣೈ ಮತ್ತು ಡಾ.ಆಶೀಶ್ ಕುಮಾರ್ ದೂಳಪ್ಪ ಅವರು ರೋಗಿಗಳನ್ನು ಆಪ್ತವಾಗಿ ಪರೀಕ್ಷಿಸಿ, ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿದರು. ಶಿಬಿರದಲ್ಲಿ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಸಹ ವಿತರಿಸಲಾಯಿತು.