ಕನ್ನಡಪ್ರಭ ವಾರ್ತೆ ಹುಕ್ಕೇರಿ
ಹೆಬ್ಬಾಳ, ಚಿಕ್ಕಾಲಗುಡ್ಡ, ಕುರಣಿ, ಬಸ್ತವಾಡ ಮತ್ತಿತರ ಕಡೆಗಳಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಹಾವೀರ ನಿಲಜಗಿ ಮಾತನಾಡಿ, ಗ್ರಾಹಕ-ಸದಸ್ಯರು, ರೈತರಿಗೆ ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಸರಬರಾಜು ಮಾಡಲು ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ನೇತೃತ್ವದ ಸ್ವಾಭಿಮಾನಿ ರೈತ ಪೆನಲ್‌ನ ಅಭ್ಯರ್ಥಿಗಳಿಗೆ ಮತ ನೀಡಿ ಆಶೀರ್ವದಿಸಬೇಕು. ವಿದ್ಯುತ್ ಸಂಘದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು ಸಂಘವನ್ನು ಮತ್ತಷ್ಟು ಗ್ರಾಹಕ ಸ್ನೇಹಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ಅಭ್ಯರ್ಥಿ ಅಜೀತ ಮುನ್ನೋಳಿ, ಮುಖಂಡರಾದ ಸಂಜು ದೇಸಾಯಿ, ಲಾಜಮ್ ನಾಯಿಕವಾಡಿ, ಸುಭಾಶ ಪಾತ್ರೋಟ, ರಿಯಾಜ್ ಮುಲ್ಲಾ, ದಾದಾ ಖಾಜಿ, ಅಜೀತ ಪಂಚನ್ನವರ ಮತ್ತಿತರರು ಉಪಸ್ಥಿತರಿದ್ದರು.ಬಳಿಕ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸ್ವಾಭಿಮಾನಿ ರೈತ ಪೆನಲ್‌ನ ಅಭ್ಯರ್ಥಿಗಳ ಪರ ಮತಯಾಚಿಸಿದರು. ಸ್ವಾಭಿಮಾನಿ ರೈತ ಪೆನಲ್‌ನ ಅಭ್ಯರ್ಥಿಗಳನ್ನು ಗ್ರಾಮಸ್ಥರು ಪುಷ್ಪಗಳ ಸುರಿಮಳೆಗೈದು ಬರಮಾಡಿಕೊಂಡರು. ಇದರೊಂದಿಗೆ ಗ್ರಾಮಗಳಲ್ಲಿ ಈ ಪೆನಲ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.