ಕೆನರಾ ಎಕ್ಸಲೆನ್ಸ್‌ ಪಿಯು ಕಾಲೇಜು ರಾಜ್ಯಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Aug 22, 2026, 02:15 AM IST
ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು | Kannada Prabha

ಸಾರಾಂಶ

ಹೊನ್ನಾವರ ಮಾರ್ಥೋಮಾ ಶಿಕ್ಷಣ ಸಂಸ್ಥೆಯಲ್ಲಿ ೮ ಮತ್ತು ೯ನೇ ತರಗತಿ ಮತ್ತು ಪ್ರಥಮ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಮಟಾ ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್‌ ಪಿಯು ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ.

ಹೊನ್ನಾವರ: ಇಲ್ಲಿಯ ಮಾರ್ಥೋಮಾ ಶಿಕ್ಷಣ ಸಂಸ್ಥೆಯಲ್ಲಿ ೮ ಮತ್ತು ೯ನೇ ತರಗತಿ ಮತ್ತು ಪ್ರಥಮ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಮಟಾ ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್‌ ಪಿಯು ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ.

ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 33 ಶಾಲೆಯಿಂದ ೬೬ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕೆನರಾ ಎಕ್ಸಲೆನ್ ಪಿಯು ಕಾಲೇಜಿನ ಹಿಮಾಂಶು ಹೆಗಡೆ, ಆಶ್ರಿತ ಹೆಗಡೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ದ್ವಿತೀಯ ಸ್ಥಾನವನ್ನು ಕುಮಟಾದ ಸಿವಿಎಸ್‌ಕೆ ಪ್ರೌಢಶಾಲೆಯ ದಿಯಾ ಆರ್. ಶೇಟ್, ಓಂಕಾರ ಭಾಗ್ವತ ಹಾಗೂ ಮೂರನೇ ಸ್ಥಾನವನ್ನು ಹೊನ್ನಾವರ ಎಸ್‌ಡಿಎಂ ಪಿಯು ಕಾಲೇಜ್ ಸ್ವಾತಿ ಸುಬ್ರಹ್ಮಣ್ಯ ಶೇಟ್, ಅಮೃತ ರಾಘವೇಂದ್ರ ಶೇಟ್ ಪಡೆದರು.

ಸಮಾಧಾನಕರ ಬಹುಮಾನವನ್ನು ಹೊನ್ನಾವರದ ಮಾರ್ಥೊಮಾ ಸೆಂಟ್ರಲ್ ಸ್ಕೂಲಿನ ರೋಹನ್ ಆರ್. ನಾಯ್ಕ, ದಕ್ಷಾ ಜಿ. ಮತ್ತು ಸಿರಸಿಯ ಲಯನ್ಸ್‌ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಪಲ್ಲವಿ ಜೋಶಿ, ಅನ್ಸಿಕಾ ಹೆಗಡೆ ಪಡೆದರು.

ತಾಲೂಕಿನ ಆರೋಗ್ಯಾಧಿಕಾರಿ ಡಾ. ಅಚ್ಯುತ್ ನಾಯ್ಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಆರೋಗ್ಯ ಸಂಬಂಧಿತ ವಿಷಯಗಳನ್ನು ಇಂದಿನ ಹದಿಹರೆಯದವರು ನಿರ್ಲಕ್ಷಿಸಬಾರದು. ಉತ್ತಮ ನಡವಳಿಕೆಗಳನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ಮಾರ್ಥೊಮಾ ಶಾಲೆಯ ಪ್ರಿನ್ಸಿಪಾಲ್ ಐಸೋನ್ ಜೋಸುವಾ ಶುಭ ಹಾರೈಸಿದರು. ಮಾರ್ಥೊಮಾ ಸಿಬಿಎಸ್‌ಸಿ ಸ್ಕೂಲಿನ ಪ್ರಾಂಶುಪಾಲರಾದ ಆನ್ಸಿ ಅನ್ನಾ ಪಿಲಿಫ್ ಮತ್ತು ಜಿಲ್ಲಾ ಮೇಲ್ವಿಚಾರಕ ನಿಲೇಶ ನಾಯಕ ಹಾಜರಿದ್ದರು. ಆಪ್ತ ಸಮಾಲೋಚಕ ಪ್ರದೀಪ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ವರಿ ಕೋರ್ಲೋಸ್ಸರ್, ಹರೀಶ್ ಮೊಗೆರ್, ಶ್ರೀಕಾಂತ ಹಿರೇಮಠ, ಉಮೇಶ ಕೆ. ಕ್ವಿಜ್‌ ನಡೆಸಿಕೊಟ್ಟರು. ವಿನಾಯಕ ಪಟಗಾರ ವಂದಿಸಿದರು.ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ ಜಿಲ್ಲೆ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆ, ಪದವಿಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಕಾರವಾರ, ಹೊನ್ನಾವರದ ದಿ ಮಾರ್ಥೋಮಾ ಇಂಗ್ಲಿಷ್ ಮಿಡಿಯಂ ಸ್ಕೂಲ್, ಕುಮಟಾದ ಸೃಷ್ಟಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಜಿಟಲ್ ಸೇವಾ ಕೇಂದ್ರದಲ್ಲಿ ಘರ್ಷಣೆ: ಇತ್ತಂಡ ದೂರು
ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೇಕು: ಹರಿಶಂಕರ್