ಮಂಗಳೂರು: ಖ್ಯಾತ ಪತ್ರಿಕೋದ್ಯಮಿ ನವಭಾರತ ಕನ್ನಡ ದೈನಿಕ ಪತ್ರಿಕೆಯ ಸ್ಥಾಪನಾ ಸಂಪಾದಕ ಮತ್ತು ನಗರದ ಮರೋಳಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ವರ್ಕ್‌ಶಾಪ್ ಕೈಗಾರಿಕಾ ಸಂಸ್ಥೆಯ ಸ್ಥಾಪನಾಧ್ಯಕ್ಷ ದಿ.ವಿ.ಎಸ್. ಕುಡ್ವರ ೧೨೭ನೇ ವಾರ್ಷಿಕ ಜನ್ಮ ದಿನಾಚರಣೆ (ಸಂಸ್ಥಾಪಕರ ದಿನಾಚರಣೆ) ಕಾರ್ಯಕ್ರಮ ಮಂಗಳವಾರ ಅವರು ಸ್ಥಾಪಿಸಿದ ಕೆನರಾ ವರ್ಕ್‌ಶಾಪ್ ಸಂಸ್ಥೆಯ ಕೈಗಾರಿಕಾ ಸಂಕೀರ್ಣದಲ್ಲಿ ನಡೆಯಿತು.
ದಿ.ಕುಡ್ವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಸಂಸ್ಥಾಪಕರಿಗೆ ಗೌರವ ಸಲ್ಲಿಸಲಾಯಿತು. ಸಂಸ್ಥೆಯ ಹಿರಿಯ ಕಾರ್ಯ ನಿರ್ವಹಣಾ ಪ್ರಬಂಧಕಿ ಕಾವ್ಯ ಪಿ. ಕುಡ್ವ, ದಿ.ವಿ.ಎಸ್.ಕುಡ್ವರ ಜೀವನ ಚರಿತ್ರೆ ಕೃತಿಯ ಲೇಖಕ ವಸಂತ ಮಲ್ಯ, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಕೋಡಿಯಾಲ್‌ಬೈಲ್‌ನ ಮುಖ್ಯ ಪ್ರಬಂಧಕ ಮಿಲನ್ ಗಿರಿ, ಕೆನರಾ ಬ್ಯಾಂಕ್ ಕುಲಶೇಖರ ಶಾಖೆಯ ಪ್ರಬಂಧಕ ಅಮಲ್ ಮೋಹನ್ ಮತ್ತಿತರರು ಇದ್ದರು.ಸಂಸ್ಥೆಯ ನಿವೃತ್ತ ಉಪ ಮಹಾಪ್ರಬಂಧಕ ಅಬ್ದುಲ್ ಸಲೀಂ ಅವರು ಸಂಸ್ಥೆ ಬೆಳೆದು ಬಂದ ಬಗ್ಗೆ ಮಾತನಾಡಿದರು.
ವಿ.ಎಸ್. ಕುಡ್ವ ಕಂಪ್ಯೂಟರ್ ಅಕಾಡೆಮಿಯ ಮುಖ್ಯ ತರಬೇತುದಾರ ಕೆ.ಮುಕುಂದರಾಜ ಪೈ ಅವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿಗಳ ಪರವಾಗಿ ಸಹಾಯಕ ಮಹಾಪ್ರಬಂಧಕ ಅಕ್ಷಯ್ ಪ್ರಭು, ಹಿರಿಯ ಕಾರ್ಮಿಕರಾದ ಜಗದೀಶ್ ಸಾಲ್ಯಾನ್, ನಾಗರಾಜ್, ಕಾರ್ಮಿಕರ ಸಂಘದ ಪರವಾಗಿ ಪದಾಧಿಕಾರಿಗಳು ಸಂಸ್ಥಾಪಕರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಕಿರಣ್ ಎಸ್. ಕುಲಾಲ್ ಸ್ವಾಗತಿಸಿ, ನಿರೂಪಿಸಿದರು. ಉತ್ಪಾದನಾ ತಾಂತ್ರಿಕಾ ತಜ್ಞ ಸುದರ್ಶನ್ ರಾವ್ ವಂದಿಸಿದರು.