- ಖಾಸಗಿ ಕಂಪನಿಗೆ ಕಡಿಮೆ ಬೆಲೆ ಭೂಮಿ: ಯಶವಂತರಾವ್ ಕಿಡಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಖಾಸಗಿ ಕಂಪನಿ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಘಟಕ ಸ್ಥಾಪಿಸಲೆಂದು ಕರೂರು ಕೈಗಾರಿಕಾ ಪ್ರದೇಶದಲ್ಲಿ ಜಿಲ್ಲಾ ಸಚಿವರು ನಿಯಮಬಾಹಿರವಾಗಿ ₹15 ಕೋಟಿ ಮೌಲ್ಯದ 1.5 ಎಕರೆ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ. 1.5 ಎಕರೆ ಜಾಗ ಮಂಜೂರು ರದ್ದುಪಡಿಸದಿದ್ದರೆ ಆ.11ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶದಲ್ಲಿ ವಿಷಯ ಮಂಡಿಸಿ, ಬಿಜೆಪಿ ಬೀದಿಗಿಳಿದು ಹೋರಾಡುವ ಜೊತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಎಚ್ಚರಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ಮಂಜೂರು ಮಾಡುವಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಭಾವಕ್ಕೊಳಗಾಗಿದ್ದಾರೆ ಎಂದು ಟೀಕಿಸಿದರು.
20 ವರ್ಷ ಸಂಸದರಿದ್ದ ಜಿ.ಎಂ. ಸಿದ್ದೇಶ್ವರ ಮಾಡಲಾಗದ್ದನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಒಂದೇ ದಿನದಲ್ಲಿ ಮಾಡಿಸಿದ್ದಾರೆ. ಸಿದ್ದೇಶ್ವರ ಯಾವುದೇ ಸರ್ಕಾರಿ ಆಸ್ತಿ ಬರೆಸಿಕೊಳ್ಳಲಿಲ್ಲ. ₹15 ಕೋಟಿ ಬೆಲೆ ಬಾಳುವ ಜಮೀನಿನಲ್ಲಿ ಘನತ್ಯಾಜ್ಯ ಘಟಕ ಮಾಡ್ತೀನಿ ಎನ್ನುವ ಕಾಂಗ್ರೆಸ್ ಸಚಿವರಿಗೆ ಏನನ್ನಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಅಣಬೇರು ಜೀವನಮೂರ್ತಿ, 6ನೇ ಮೈಲಿಕಲ್ಲು ವಿಜಯಕುಮಾರ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಶಂಕರ ಗೌಡ ಬಿರಾದಾರ್, ಟಿಂಕರ್ ಮಂಜಣ್ಣ, ಜಿ.ಕಿಶೋರಕುಮಾರ, ಗೋವಿಂದರಾಜ ಇತರರು ಇದ್ದರು.- - -
(ಟಾಪ್ ಕೋಟ್) ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಜಿಲ್ಲೆಗೆ ತಂದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್‌ನ ವಿಸ್ತರಣೆಗೆ ದಾವಣಗೆರೆ ನಗರ ವ್ಯಾಪ್ತಿಯಲ್ಲಿ 2 ಎಕರೆ ಜಮೀನಿನ ಅಗತ್ಯವಿದೆ. ಕರೂರು ಕೈಗಾರಿಕಾ ಪ್ರದೇಶದ ಜಾಗವನ್ನೇ ಇದಕ್ಕಾಗಿ ಮಂಜೂರು ಮಾಡಬಹುದಿತ್ತಲ್ಲವೇ? ದಾವಣಗೆರೆಯನ್ನು ಸಾಫ್ಟ್‌ವೇರ್ ಹಬ್ ಮಾಡುತ್ತೇವೆ ಎನ್ನುವ ಸಂಸದರು ಇಚ್ಛಾಶಕ್ತಿ ಪ್ರದರ್ಶಿಸಬೇಕು.- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ
- - --4ಕೆಡಿವಿಜಿ3.ಜೆಪಿಜಿ:
ದಾವಣಗೆರೆಯಲ್ಲಿ ಸೋಮವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.