ಯಥಾ ರಾಜ, ತಥಾ ಪ್ರಜಾ ಎಂಬಂತೆ ರಾಗಾ-ಕಾಂಗ್ರೆಸ್‌

KannadaprabhaNewsNetwork |  
Published : Aug 04, 2025, 11:45 PM IST
4ಕೆಡಿವಿಜಿ4-ದಾವಣಗೆರೆ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಶ್ರೀರಾಮುರಿಗೆ ಮುಖಂಡರು, ಕಾರ್ಯಕರ್ತರು ಗೌರವಿಸುತ್ತಿರುವುದು. | Kannada Prabha

ಸಾರಾಂಶ

ಯಥಾ ರಾಜ, ತಥಾ ಪ್ರಜಾ ಎಂಬಂತೆ ರಾಹುಲ್ ಗಾಂಧಿ ಹೇಳಿಕೆಗಳಂತೆಯೇ ರಾಜ್ಯ ಕಾಂಗ್ರೆಸ್ ನಾಯಕರೂ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕರಿಂದ ದಿಲ್ಲಿ ನಾಯಕರವರೆಗಿನ ಹೇಳಿಕೆಗಳೆಲ್ಲಾ ಹಾಸ್ಯಾಸ್ಪದವಾಗಿವೆ ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ದಾವಣಗೆರೆ: ಯಥಾ ರಾಜ, ತಥಾ ಪ್ರಜಾ ಎಂಬಂತೆ ರಾಹುಲ್ ಗಾಂಧಿ ಹೇಳಿಕೆಗಳಂತೆಯೇ ರಾಜ್ಯ ಕಾಂಗ್ರೆಸ್ ನಾಯಕರೂ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕರಿಂದ ದಿಲ್ಲಿ ನಾಯಕರವರೆಗಿನ ಹೇಳಿಕೆಗಳೆಲ್ಲಾ ಹಾಸ್ಯಾಸ್ಪದವಾಗಿವೆ ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯವಾಡಿದರು.

ನಗರದಲ್ಲಿ ಸೋಮವಾರ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮತಗಳ್ಳತನದ ಬಗ್ಗೆ ದಾಖಲೆ ಇವೆ ಎನ್ನುತ್ತಿರುವ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ನಡೆದ ಸಂದರ್ಭದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡಬೇಕಿತ್ತಲ್ಲವೆ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿರುದ್ಧ ಯಾವುದೇ ಅಂಶಗಳು, ಆರೋಪ, ವಿಚಾರಗಳೂ ಇಲ್ಲದ ಕಾರಣಕ್ಕೆ ದೇಶದ ಜನರನ್ನು ದಾರಿ ತಪ್ಪಿಸಲು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿಗರು ಹಸಿಹಸಿ ಸುಳ್ಳುಗಳನ್ನು ಹೇಳುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸಿಗರು ಚುನಾವಣೆಯಲ್ಲಿ ಗೆದ್ದಾಗ ಎಲ್ಲವೂ ಸರಿ ಇರುತ್ತದೆ. ಸೋತ ತಕ್ಷಣ ಅವೇ ಇವಿಎಂಗಳಿಂದ ಗೆದ್ದ ಕಾಂಗ್ರೆಸ್ಸಿಗರು ಅದೇ ಇವಿಎಂಗಳು ಸರಿಯಿಲ್ಲ, ಮತಗಳ್ಳತನವಾಗಿವೆ ಎನ್ನುತ್ತಾರೆ. ಮತಗಳ್ಳತನವೆಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ಸಿನವರು ಹೋರಾಟ ನಡೆಸಲು ಮುಂದಾಗಿದ್ದಾರೆ ಎಂದು ಶ್ರೀರಾಮುಲು ಕುಟುಕಿದರು.

ದಾವಣಗೆರೆ ಬಿಜೆಪಿ ಜಿಲ್ಲಾಮಟ್ಟದಲ್ಲಿ ಯುವ ಮುಖಂಡರು, ಕಾರ್ಯಕರ್ತರು ಉತ್ತಮವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಯುವ ನಾಯಕರಿಗೆ ಒಳ್ಳೆಯ ಭವಿಷ್ಯವಿದೆ. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವಕಾಶಗಳು ಇದ್ದೇ ಇವೆ. ಅದೇ ರೀತಿ ನಮ್ಮ ಪಕ್ಷದ ಯುವ ಮುಖಂಡ ಶ್ರೀನಿವಾಸ ದಾಸಕರಿಯಪ್ಪಗೂ ಸಹ ಉತ್ತಮ ಭವಿಷ್ಯವಿದೆ ಎಂದು ಶ್ರೀರಾಮುಲು ತಿಳಿಸಿದರು.

ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣ ಕುಮಾರ, ನಗರಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ, ಫಣಿಯಾಪುರ ಲಿಂಗರಾಜ, ಟಿಂಕರ್ ಮಂಜಣ್ಣ, ದಾಗಿನಕಟ್ಟೆ ನಾಗರಾಜ, ಸಾಲಕಟ್ಟೆ ಸಿದ್ದಪ್ಪ, ರಾಕೇಶ ಭಜರಂಗಿ, ಕಲ್ಲಹಳ್ಳಿ ಮಹೇಶ್ವರಪ್ಪ, ಎಂ.ಆರ್. ರಮೇಶ, ವಿಜಯ್, ವಿನಯ್, ಪ್ರದೀಪ ಅಜ್ಜು, ಬಾಬಣ್ಣ, ನಿಟುವಳ್ಳಿ ವಿಜಯ್ ಇತರರು ಇದ್ದರು.

- - -

(ಕೋಟ್‌) ಕೆಆರ್‌ಎಸ್ ಡ್ಯಾಂ ಕಟ್ಟಿಸಿದ್ದು ಟಿಪ್ಪು ಸುಲ್ತಾನ್ ಎನ್ನುವ ಮೂಲಕ ಸಚಿವ ಡಾ. ಎಚ್.ಸಿ.ಮಹದೇವಪ್ಪ ಮೈಸೂರು ಮಹಾರಾಜರಿಗಷ್ಟೇ ಅಲ್ಲ, ರಾಜ್ಯದ ಜನರಿಗೂ ಅಗೌರವ ತೋರಿಸಿದ್ದಾರೆ. ಇನ್ನು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸಹ ಮೈಸೂರು ಮಹಾರಾಜರಿಗಿಂತ ತನ್ನ ತಂದೆ ಸಿದ್ದರಾಮಯ್ಯ ಮೈಸೂರನ್ನು ಹೆಚ್ಚು ಅಭಿವೃದ್ಧಿಪಡಿಸಿದ್ದಾರೆಂಬ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ಸಿನ ನಾಯಕರಷ್ಟೆ.

- ಶ್ರೀರಾಮುಲು, ಬಿಜೆಪಿ ಮುಖಂಡ

- - - -4ಕೆಡಿವಿಜಿ4.

ದಾವಣಗೆರೆ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಮಾಜಿ ಸಚಿವ ಶ್ರೀರಾಮುಲು ಭೇಟಿ ನೀಡಿದ್ದ ವೇಳೆ ಪಕ್ಷದ ಮುಖಂಡರು, ಕಾರ್ಯಕರ್ತರು ಅವರನ್ನು ಗೌರವಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ