ಮೀಸಲು ಹೆಚ್ಚಳ ರದ್ದು: ಮೇಲ್ಮನವಿಗೆ ಹಲವು ಅಡ್ಡಿ

KannadaprabhaNewsNetwork |  
Published : Oct 19, 2026, 01:30 AM IST
18ಕೆಪಿಆರ್‌ಸಿಆರ್‌ 02: ಮಹೇಂದ್ರ ಕುಮಾರ ಮಿತ್ರ | Kannada Prabha

ಸಾರಾಂಶ

ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಿರುವ ತೀರ್ಮಾನದ ಅರ್ಜಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾದಲ್ಲಿ ಹಲವಾರು ಸಂಗತಿಗಳು ಅಡ್ಡಿಯಾಗಲಿವೆ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಿರುವ ತೀರ್ಮಾನದ ಅರ್ಜಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮುಂದಾದಲ್ಲಿ ಹಲವಾರು ಸಂಗತಿಗಳು ಅಡ್ಡಿಯಾಗಲಿವೆ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ ಮಿತ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಮೀಸಲಾತಿ ಪಟ್ಟಿಯಲ್ಲಿ ಅಸಂವಿಧಾನಿಕವಾಗಿ ಹಿಂದುಳಿದ ವರ್ಗಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದು ಇಂದಿರಾ ಸಾಹಾನಿ ಪ್ರಕರಣದಲ್ಲಿ ಶೇ.50 ಮೀಸಲು ಹೆಚ್ಚಿಸಿದಂತೆ ಸುಪ್ರೀಂ ಕೋರ್ಟ್ ಸೂಚನೆಯ ವಿರುದ್ಧವಾಗಿದೆ.

ರಾಜ್ಯ ಸರ್ಕಾರ ಹಿಂದುಳಿದ ಪಟ್ಟಿಯಲ್ಲಿದ್ದ ಲಂಬಾಣಿ, ಭೋವಿ, ಕೊರಮ, ಕೊರಚ ಸೇರಿದಂತೆ 13 ಜಾತಿಗಳನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ರಾಷ್ಟ್ರೀಯ ಆಯೋಗಗಳ ನಿರ್ಧಾರವನ್ನು ಪರಿಗಣಿಸದೇ ಸರ್ಕಾರ ಕೈಗೊಂಡಿರುವ ನಡೆಯಿಂದ ಅನ್ಯಾಯಕ್ಕೆ ಗುರಿಯಾಗುವಂತಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಒಟ್ಟು ಮೀಸಲಾತಿ ಹೆಚ್ಚಿಸದೇ ಹೊಸ ಸಮುದಾಯಗಳನ್ನು ಸೇರ್ಪಡೆ ಮಾಡಿರುವ ಪರಿಣಾಮ ಮೀಸಲಾತಿ ಕುಸಿತವಾಗುತ್ತಲೇ ಇದೆ. ಮಾದಗಿ, ಚಲವಾದಿ ಸಮುದಾಯಗಳೂ ಸೇರಿದಂತೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಸಮುದಾಯಗಳು ಅಸ್ಪೃಶ್ಯತೆ ಎದುರಿಸುತ್ತಿದ್ದರೂ ಜನಸಂಖ್ಯೆಗೆ ಅನುಗುಣವಾಗಿ ಇತರೆ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರ್ಪಡೆ ಮಾಡುವಾಗಲೇ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಯೋಚಿಸದೇ ಹಿಂದುಳಿದ ವರ್ಗಗಳನ್ನು ಸೇರಿಸಲಾಗುತ್ತಲೇ ಬರಲಾಗಿದೆ. ಒಬಿಸಿ ಜಾತಿಯ ಸೇರ್ಪಡೆಯಿಂದಾಗಿಯೇ ದಲಿತರ ಮೇಲೆ ದೌರ್ಜನ್ಯ ಹೆಚ್ಚಲು ಕಾರಣವಾಗಿವೆ. ದಾವೆಂದರಗ್ ಸಿಂಗ್ ಪ್ರಕರಣದ ತೀರ್ಪಿನಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಕೆನೆಪದರ ನೀತಿಯೂ ಜಾರಿಗೊಳಿಸಬೇಕಾದ ಅವಶ್ಯಕತೆಯಿದೆ. 9 ಶೆಡ್ಯೂಲ್‌ಗೆ ಸೇರ್ಪಡೆ ಮಾಡಿದರೆ, ಕಾನೂನಿ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗದು. 2007ರಲ್ಲಿ ಐಆರ್ ಸೆಲ್ಹೋ ಮತ್ತು ತಮಿಳುನಾಡಿನ ಪ್ರಕರಣ ಒಂದರಲ್ಲಿ ಸುಪ್ರಿಂ ಕೋರ್ಟ್ ಮೂಲಭೂತ ಹಕ್ಕಿನ ಉಲ್ಲಂಘನೆಗಳಾದಲ್ಲಿದ್ದ 9 ಶೆಡ್ಯೂಲ್ ಪರಾಮರ್ಶಿಸುವ, ರದ್ದುಪಡಿಸುವ ಅಧಿಕಾರಿವಿದ್ದು, ಸರ್ಕಾರ ಅರ್ಹರಿಗೆ ಮೀಸಲಾತಿ ನೀಡಬೇಕೇ ಹೊರತು ಅನರ್ಹರಿಗೆ ಮೀಸಲು ನೀಡದೇ ರಕ್ಷಣೆಗೆ ಬರಬೇಕು. ಒಂದು ವೇಳೆ ರಾಜ್ಯ ಸರ್ಕಾರ ಮೀಸಲು ಹೆಚ್ಚಳ ರದ್ದತಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಲ್ಲಿ ಈ ಎಲ್ಲ ಅಂಶಗಳು ಮುನ್ನಲೆಗೆ ಬರಲಿದ್ದು, ಇದರಿಂದ ಸರ್ಕಾರವೇ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹುಸೇನ್‌ಷಾ ಪಲಕನಮರಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಜಿ ಪಾಳ್ಯ ಡೊಡ್ಡಕೆರೆ ಮಣ್ಣು ಮಾರಾಟದಿಂದ ಭ್ರಷ್ಟಾಚಾರ: ನಿಶಾಂತ್
ಇರುವೆಯ ಹೆಜ್ಜೆ ಸಪ್ಪಳವನ್ನೂ ಆಲಿಸುವವನೇ ನಿಜ ಕವಿ