ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರೀನ್ ಲೈಫ್ ಹೆಲ್ತ್ ಸೆಂಟರ್ ಮ್ಯಾನೇಜರ್ ಲೋಹಿತ್ ಮಾತನಾಡಿ, ಕ್ಯಾನ್ಸರ್ ಬಗ್ಗೆ ಜಾಗೃತಿ ಹೆಚ್ಚಿಬೇಕಿದೆ. ಆರಂಭದಲ್ಲೆ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಹೊರಗಡೆ ಬರಬಹುದು ಎಂದು ಸಲಹೆ ನೀಡಿದರು.
ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಉಚಿತ ಆರೋಗ್ಯ ಚಿಕಿತ್ಸೆಗಳಲ್ಲಿ ಮಧುಮೇಹ, ಮಂಡಿನೋವು, ಕ್ಯಾನ್ಸರ್ ನಂತಹ ಸಮಸ್ಯೆಗಳಿಗೆ ಥೆರಪಿ, ಯೋಗಾಸನ ಮೂಲಕ ಗುಣಪಡಿಸಬಹುದು. ದೇಹದಲ್ಲಾಗುವ ಆರೋಗ್ಯದ ವ್ಯತ್ಯಾಸವನ್ನು ಗಮನಿಸಿ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಅಥವಾ ಉಚಿತವಾಗಿ ಗ್ರೀನ್ ಲೈಫ್ ಹೆಲ್ತ್ ಸೆಂಟರ್‌ನಲ್ಲಿ ಸಿಗುವ ಉಚಿತ ಥೆರಪಿ ಮೂಲಕ ರೋಗಮುಕ್ತ ಜೀವನ ನಡೆಸಬಹುದು ಎಂದರು.ಕ್ಯಾನ್ಸರ್ ಭಯ, ಜಾಗೃತಿ ಕೊರತೆಯಿಂದ ಜಾಗತಿಕವಾಗಿ ಹೆಚ್ಚು ಜನರ ಸಾವಿಗೆ ಪ್ರಮುಖ ಕಾರಣ. 2022ರಲ್ಲಿ ಸುಮಾರು 100 ಮಿಲಿಯನ್ ಜೀವಗಳನ್ನು ಕ್ಯಾನ್ಸರ್ ಬಲಿ ತೆಗೆದುಕೊಂಡಿದೆ. ಇದು ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಾಗೃತಿ ಜಾಥಾವು ಗ್ರೀನ್ ಲೈಫ್ ಹೆಲ್ತ್ ಸೆಂಟರ್‌ನಿಂದ ಹೊರಟು ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಅಂತ್ಯಗೊಂಡಿತು. ಈ ವೇಳೆ ವೃತ್ತ ಅಧಿಕಾರಿಗಳಾದ ಚನ್ನೇಗೌಡ, ಜಾರ್ಜ್ ವೆಲ್ಸನ್, ಕೈಲಾಸ್, ಸಿಬ್ಬಂದಿಗಳಾದ ಆಶಾರಾಣಿ, ವೇದಶ್ರೀ, ನಂದಿನಿ, ಶಿಲ್ಪ, ರುಕ್ಮಿಣಿ, ಆಶಾ ಮತ್ತಿತರರಿದ್ದರು.