ಶಿವಮೊಗ್ಗ: ನಗರದ ಕುವೆಂಪು ರಸ್ತೆಯ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.5ರಿಂದ 10ರವರೆಗೆ ಕ್ಯಾನ್ಸರ್ ಜಾಗೃತಿ ಸಪ್ತಾಹ ಏರ್ಪಡಿಸಲಾಗಿದೆ ಎಂದು ಆಸ್ಪತ್ರೆಯ ಮೆಡಿಕಲ್ ಅಂಕಾಲಜಿಸ್ಟ್ ಡಾ.ಅಪರ್ಣ ಶ್ರೀವತ್ಸ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಜಾಗೃತಿ ಸಪ್ತಾಹದಲ್ಲಿ ಡಾ.ವಿವೇಕ್, ಡಾ. ಆಶಾಶ್ರೀ ಉಪಾಧ್ಯ, ಡಾ.ಮಧು, ಡಾ.ಶಿಲ್ಪಾ ಪ್ರಭು ಹಾಗೂ ಡಾ.ರವಿ ಅವರು ಕ್ಯಾನ್ಸರ್ ರೋಗಿಗಳಿಗೆ ಜೀವನಶೈಲಿ, ಆಹಾರ ಪದ್ಧತಿ, ಯೋಗ ಮತ್ತು ವ್ಯಾಯಾಮ, ಶಸ್ತ್ರಚಿಕಿತ್ಸೆ ಕುರಿತು ಸಲಹೆ ಮತ್ತು ಸಮಾಲೋಚನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಫೆ.4ರಂದು ಕ್ಯಾನ್ಸರ್ ದಿನ ಹಿನ್ನೆಲೆ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಪ್ರತಿ ತಿಂಗಳು ಮೊದಲನೇ ಗುರುವಾರ ಕ್ಯಾನ್ಸರ್ ಸಮಸ್ಯೆ ಗೆದ್ದವರೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ತಿಳಿಸಿದರು.ಕೀಮೋಥೆರಪಿಯಿಂದ ಅನೇಕ ಕ್ಯಾನ್ಸರ್‌ಗಳನ್ನು ಸಂಪೂರ್ಣ ಗುಣಪಡಿಸುವುದು ಸಾಧ್ಯವಿದೆ. ಆದರೆ, ಕೀಮೋಥೆರಪಿ ತನ್ನದೇ ಆದ ಸೈಡ್ ಎಫೆಕ್ಟ್‌ಗಳನ್ನು ಹೊಂದಿದೆ. ಕೀಮೋ ಇಂಜೆಕ್ಷನ್ ಕೊಟ್ಟ ರಕ್ತನಾಳಗಳಿಗೆ ಹಾನಿ ಮಾಡಿ ನೋವನ್ನುಂಟು ಮಾಡುತ್ತದೆ. ಅಂತಹ ರಕ್ತನಾಳಗಳು ನಾರುಗಟ್ಟಿ ಮುಂದಿನ ಕೀಮೋಥೆರಪಿಗೆ ರಕ್ತನಾಳಗಳು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೀಮೋ ಸರಿಯಾಗಿ ಕೊಡದಿದ್ದಲ್ಲಿ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ಬೊಬ್ಬೆಯುಂಟಾಗಿ ಊತ ಬರಬಹುದು. ಬಳಿಕ ರಕ್ತ ಪರೀಕ್ಷೆಗಳಿಗೆ ರಕ್ತ ತೆಗೆಯುವುದೂ ಕಷ್ಟವಾಗುತ್ತದೆ. ಇಂತಹ ದುಷ್ಪರಿಣಾಮಗಳನ್ನು ತಡೆಗಟ್ಟಿ ಕೀಮೋಥೆರಪಿಯನ್ನು ಸರಿಯಾಗಿ ಹಾಕಿ, ನೋವಿಲ್ಲದೇ ಕೊಡಲು ಪಿಕ್‌ಲೈನ್ ಕ್ಯಾನ್ಸರ್ ರೋಗಿಗಳಿಗೆ ಲೈಫ್‌ಲೈನ್ ಆಗಿದೆ ಎಂದು ತಿಳಿಸಿದರು.
ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕ್ಯಾನ್ಸರ್ ಚಿಕಿತ್ಸಾ ವಿಭಾಗದಲ್ಲಿ ಪಿಕ್‌ಲೈನ್ ಹಾಕಬಲ್ಲ ಮತ್ತು ಅದರ ಶುಶ್ರೂಷೆ ಮಾಡಬಲ್ಲ ನುರಿತ ನರ್ಸ್‌ಗಳು ಮತ್ತು ವೈದ್ಯರ ತಂಡ ಇದೆ. ಕ್ಯಾನ್ಸರ್ ರೋಗಿಗಳು ನೋವಿಲ್ಲದೇ ಮತ್ತು ಸುರಕ್ಷತವಾಗಿ ಕೀಮೋಥೆರಪಿ ಪಡೆಯಲು ಸುವ್ಯವಸ್ಥೆ ಇದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ.ವಿವೇಕ್, ಡಾ.ರವಿ ಇದ್ದರು.
- - - -2ಎಸ್‌ಎಂಜಿಕೆಪಿ08: ಡಾ.ಅಪರ್ಣ ಶ್ರೀವತ್ಸ