ದೊಡ್ಡಬಳ್ಳಾಪುರ: ನ.2ರಂದು ನಡೆಯಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.ನಾಮಪತ್ರ ಸಲ್ಲಿಸಿ ಹೊರಬಂದ ನಂತರ ಕೆಲ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಸಚಿವ ಜಿ.ರಾಮೇಗೌಡ ಅವರಿಂದ ಭದ್ರ ಬುನಾದಿ ಹಾಕಿಕೊಂಡು ಸ್ಥಾಪನೆಗೊಂಡ ಟಿಎಪಿಎಂಸಿಎಸ್ ಇಂದು ತಾಲೂಕಿನಲ್ಲಿ ಬೃಹತ್ ಸಹಕಾರ ಸಂಘವಾಗಿ ರೂಪುಗೊಂಡಿದೆ. ಸಂಘಕ್ಕೆ ಅಗತ್ಯವಾದ ಜಾಗವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿಸಲಾಗಿದೆ ಎಂದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಟಿಎಪಿಎಂಸಿಎಸ್ ''''''''ಎ'''''''' ತರಗತಿಗೆ 5 ಸ್ಥಾನ, ''''''''ಬಿ'''''''' ತರಗತಿಯ 8 ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಎಲ್ಲ 13 ಸ್ಥಾನಗಳಿಗೂ ಕಣಕ್ಕಿಳಿದಿದ್ದಾರೆ ಎಂದರು.
ಟಿಎಪಿಎಂಸಿಎಸ್ ''''''''ಎ'''''''' ತರಗತಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಮುಖಂಡ ನಾರನಹಳ್ಳಿ ಗೋವಿಂದರಾಜು ಮಾತನಾಡಿ, 15 ವರ್ಷಗಳಿಂದ ನಮ್ಮ ಹಿಡಿತದಲ್ಲಿಯೇ ಇರುವ ಟಿಎಪಿಎಂಸಿಎಸ್ ಚುನಾವಣೆ ಈ ಬಾರಿ ಮಹತ್ವ ಪಡೆದಿದೆ. ರಾಮೇಗೌಡರ ಕಾಲದಿಂದ ಇಲ್ಲಿಯ ವರೆಗೆ ಸಂಘವು ಹಲವಾರು ಸವಾಲುಗಳನ್ನು ಎದುರಿಸಿ, ಸುಸಜ್ಜಿತವಾಗಿದೆ ಎಂದರು.ಈ ವೇಳೆ ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ತೂಬಗೆರೆ ಬ್ಲಾಕ್ ಅಧ್ಯಕ್ಷ ರವಿ ಸಿದ್ದಪ್ಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇವತಿ, ನಗರಸಭಾ ಸದಸ್ಯ ಆನಂದ್, ಮುಖಂಡರಾದ ಚುಂಚೇಗೌಡ, ರಂಗಪ್ಪ ಅಭ್ಯರ್ಥಿ ಗಳಾದ ಕೆ.ಎಸ್.ರವಿ, ವಿಶ್ವಾಸ್ ಹನುಮಂತೇಗೌಡ, ಶ್ರೀನಿವಾಸ ಮೂರ್ತಿ, ಕೆಂಪೇಗೌಡ, ರತ್ನಮ್ಮ, ಮೀನಾಕ್ಷಿ ನಾಗರಾಜ್, ಮುನಿ ಆಂಜಿನಪ್ಪ ಕುಮಾರ್, ವೆಂಕಟೇಶ್, ಸಿದ್ದರಾಮಯ್ಯ, ಆರ್ ವಿ.ಗೌಡ ಮೊದಲಾದವರು ಭಾಗವಹಿಸಿದ್ದರು.