- ಪಕ್ಷೇತರ ಅಭ್ಯರ್ಥಿಗೆ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಿದ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಮಂಗಳವಾರ ಭರ್ಜರಿ ರೋಡ್ ಶೋ ಮೂಲಕ ಮತಯಾಚಿಸಿದರು.ನೂರಾರು ಗ್ರಾಮಸ್ಥರು ವಿನಯಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ಕೋರಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಜೈಕಾರ ಕೂಗಿದರು.
ಇಲ್ಲಿನ ಪುಷ್ಕರಣಿ ತುಂಬಾ ಪ್ರಸಿದ್ಧಿಯಾಗಿದೆ. ಇದೊಂದು ಐತಿಹಾಸಿಕ ತಾಣವಾಗಿಸಲು, ಯುವಕರಿಗೆ ಉದ್ಯೋಗ ದೊರಕುವಂತೆ ಮಾಡಲು ದೊಡ್ಡ ಕೈಗಾರಿಕೆಯನ್ನಾಗಲೀ, ಬಡಮಕ್ಕಳೂ ಸೇರಿದಂತೆ ಎಲ್ಲ ವರ್ಗದವರಿಗೆ ಅನುಕೂಲ ಆಗುವಂತೆ ಹೈಟೆಕ್ ಶಾಲೆ, ಕಾಲೇಜಾಗಲೀ ಇಲ್ಲ. ನೀವೆಲ್ಲಾ ಇಲ್ಲಿಗೆ ಬರುವ ಬೇರೆ ಪಕ್ಷಗಳ ಅಭ್ಯರ್ಥಿಗಳಿಗೆ ಈ ಬಗ್ಗೆ ಪ್ರಶ್ನಿಸಿ. ಅಧಿಕಾರದಲ್ಲಿದ್ದರೂ ಏಕೆ ಈ ಕೆಲಸ ಮಾಡಿಲ್ಲ ಎಂದು ಬಂದವರನ್ನು ನೀವು ಪ್ರಶ್ನೆ ಮಾಡಿ ಎಂದ ಅವರು, ನನಗೆ ಮತ ನೀಡಿ, ಲೋಕಸಭೆಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದರು.
ತಣಿಗೆರೆ ಗ್ರಾಮದ ಪ್ರಚಾರದಲ್ಲಿ ಸುನಿಲ್, ಶ್ರೇಯಸ್, ಈಶಪ್ಪ ದೊಡ್ಮನೆ, ರಾಕೇಶ, ಟಿ. ಸಿ. ಹನುಮಂತಪ್ಪ, ಎ.ಕೆ. ಶಿವಕುಮಾರ್, ರಂಗಸ್ವಾಮಿ, ಸುರೇಶ್ ಮತ್ತಿತರರು ಹಾಜರಿದ್ದರು.
ಕೋಟ್ ಯಾವುದೇ ಕಾರಣಕ್ಕೂ ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಪಕ್ಷಕ್ಕೆ ನನಗೆ ಆಹ್ವಾನಿಸಿದ್ದರು. ಟಿಕೆಟ್ ಕೊಡಿಸುವ ಭರವಸೆ ಕೊಟ್ಟಿದ್ದರು. ನಾನು ಟಿಕೆಟ್ ತಂದು ಸ್ಪರ್ಧೆ ಮಾಡಬಹುದಿತ್ತು. ಬದ್ಧತೆಯಂತೆ ನಡೆದುಕೊಂಡೆ. ಡೀಲ್ ಮಾಡಿಕೊಳ್ಳಲು ಹೋಗಲಿಲ್ಲ
- - - -30ಕೆಡಿವಿಜಿ6, 7: