ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಮರಳಿ ಗೂಡು ಸೇರಿದ್ದಾರೆ.
ಚುನಾವಣೆಯಲ್ಲಿ ಪರಸ್ಪರ ವಾಗ್ದಾಳಿಗಳಿಂದಲೇ ಸಾಕಷ್ಟು ಕೂತುಹಲ ಮೂಡಿಸಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಖಾಡ ಖುದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಯೋಗೇಶ್ವರ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವಾಗಿಯೂ ಮಾರ್ಪಟ್ಟಿತ್ತು. ಹೀಗಾಗಿ ಸಾಕಷ್ಟು ಉತ್ಸಾಹದಲ್ಲಿ ದುಡಿದಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಇದೀಗ ಎಲ್ಲಿದ್ದಾರೆ? ಎಂಬ ಹುಡುಕಾಟ ಕ್ಷೇತ್ರಾದ್ಯಂತ ನಡೆಯುತ್ತಿದೆ. ನಿತ್ಯ ಮತದಾರರ ಮುಂದೆ ಮೈಕ್ ಹಿಡಿದು, ಕೈ ಮುಗಿದು ನಿಲ್ಲುತ್ತಿದ್ದ ನಾಯಕರು ಸಹ ಎಲ್ಲಿದ್ದಾರೆ ಎಂಬ ಯಕ್ಷ ಪ್ರಶ್ನೆ ಮತದಾರರನ್ನು ಕಾಡುತ್ತಿರುವುದು ಮಾತ್ರವಲ್ಲ, ಮತ್ತೊಮ್ಮೆ ನಮ್ಮೂರಿಗೆ ನಾಯಕರು ಬರುವುದಕ್ಕೆ ಮತ್ತೊಂದು ಚುನಾವಣೆಯೇ ಬರಬೇಕು ಎಂಬ ವ್ಯಂಗ್ಯವೂ ಸಹ ಕೇಳಿ ಬರುತ್ತಿದೆ.
ಮನೆ ಬಿಟ್ಟು ಹೊರಬಾರದ ಮುಖಂಡರು!ಇನ್ನು ಪ್ರಚಾರದ ಸಮಯದಲ್ಲಿ ಬಿರು ಬಿಸಿಲನ್ನು ಲೆಕ್ಕಿಸದೇ ಕಣದಲ್ಲಿದ್ದ ಕಾರ್ಯಕರ್ತರು ಇದೀಗ ಮನೆಯಿಂದ ಹೊರಬರುವುದಿರಲಿ, ಯಾವೊಂದು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ನಿತ್ಯ ಪ್ರಚಾರ ಕಣದಲ್ಲಿ ದುಡಿಯುತ್ತಿದ್ದವರು ಇದೀಗ ವಿಶ್ರಾಂತಿ ಕೇಳುತ್ತಿದ್ದಾರೆ. ಗ್ರಾಮಗಳಲ್ಲಿ ಅರಳೀಕಟ್ಟೆ ರಾಜಕೀಯ ಮಾಡುತ್ತಿದ್ದವರು ಇದೀಗ ಸಾಕಪ್ಪ ಸಾಕು ರಾಜಕೀಯ ಎನ್ನುತ್ತಿದ್ದಾರೆ.
ಬಾಕ್ಸ್.........
ಕಳೆದ 1 ತಿಂಗಳಿನಿಂದ ಸದಾ ಕೇಳುತ್ತಿದ್ದ ಚುನಾವಣೆ ಪದ ಇದೀಗ ಏಕಾಎಕೀ ಇಳಿಕೆಯಾಗಿದೆ. ಈಗೇನಿದ್ದರೂ, ಯಾರು-ಎಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬುದೊಂದೆ ಚರ್ಚೆಯಲ್ಲಿದೆ. ಮನೆ ಬಿಟ್ಟು ಹೊರ ಬಾರದ ಅಭ್ಯರ್ಥಿಗಳು - ಮುಖಂಡರು ಮತದಾನದ ಶೇಕಡವಾರು ಲೆಕ್ಕಹಾಕಿಕೊಂಡು, ಯಾವ ಕ್ಷೇತ್ರಗಳಲ್ಲಿ ಎಷ್ಟು ಮತಗಳನ್ನು ಪಡೆಯಲಾಗಿದೆ ಎಂಬ ಮತಗಳ ಲೆಕ್ಕಚಾರದಲ್ಲೇ ಮುಳುಗಿದ್ದಾರೆ. ಆದರೆ, ರಾಜಕೀಯದಷ್ಟು ಅಬ್ಬರ ಇರದ ಹಿನ್ನೆಲೆಯಲ್ಲಿ ಎಲ್ಲವು ಧ್ವನಿ ಕಳೆದುಕೊಂಡಿದೆ.
27ಕೆಆರ್ ಎಂಎನ್ 1,2.ಜೆಪಿಜಿ
2.ಡಿ.ಕೆ.ಸುರೇಶ್