೧.೨೫ ಲಕ್ಷ ಮೌಲ್ಯದ ಗಾಂಜಾ ವಶ, ಆರೋಪಿ ಬಂಧನ

KannadaprabhaNewsNetwork |  
Published : Aug 15, 2024, 01:48 AM IST
೧೩ಕೆಎಲ್‌ಆರ್-೨ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ೧,೨೫ ಲಕ್ಷ ರೂ ಮೌಲ್ಯದ ಗಾಂಜಾ ವಶಪಡಿಸಿಕೊಂಡಿರುವ ಗಲ್‌ಪೇಟೆ ಪೊಲೀಸರು. | Kannada Prabha

ಸಾರಾಂಶ

ನಗರ ಹೊರವಲಯದ ಟಮಕದ ಶ್ರೀ ದೇವರಾಜ್ ಅರಸು ಬಡಾವಣೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಗಲ್‌ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ, ಅತನ ಬಳಿ ಇದ್ದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಕೋಲಾರ: ನಗರ ಹೊರವಲಯದ ಟಮಕದ ಶ್ರೀ ದೇವರಾಜ್ ಅರಸು ಬಡಾವಣೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಗಲ್‌ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ, ಅತನ ಬಳಿ ಇದ್ದ ಗಾಂಜಾ ವಶಪಡಿಸಿಕೊಂಡಿದ್ದಾರೆ. ನರಸಾಪುರ ಸಮೀಪದ ನಿವಾಸಿ, ವೆಲ್ಡಿಂಗ್ ವೃತ್ತಿ ಮಾಡುತ್ತಿದ್ದ ಎಂ.ಡಿ.ಶಾರೂಖ್ ಬಂಧಿತ ವ್ಯಕ್ತಿ. ಈತ ಮೂಲತಃ ಬಿಹಾರ ರಾಜ್ಯದ ಶೇಖುರ್‌ ಜಿಲ್ಲೆಯ ಚಿವಾರ ಗ್ರಾಮದವನಾಗಿದ್ದು, ಆತನ ಬ್ಯಾಗ್‌ನಲ್ಲಿ ಸುಮಾರು ೧.೨೫ ಲಕ್ಷ ರು. ಮೌಲ್ಯದ ಗಾಂಜಾ ಪತ್ತೆಯಾಗಿದೆ. ಅದನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದನೆಂದು ವಿಚಾರಣೆಯಿಂದ ತಿಳಿದುಬಂದಿದೆ. ಗಲ್‌ಪೇಟೆಯ ಸಿಪಿಐ ಎಂ.ಜೆ.ಲೋಕೇಶ್‌ ಮಾರ್ಗದರ್ಶದಲ್ಲಿ ಪಿಎಸ್‌ಐ ಅರುಣ್‌ ಗೌಡ ಪಾಟೀಲ್‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಫಿಯುಲ್ಲಾ, ತಿಪ್ಪರಾಜು, ಬೈರೇಗೌಡ ಮತ್ತು ನಾರಾಯಣಸ್ವಾಮಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ