2 ಕಾರು, 10 ಬೈಕ್, 83 ಗ್ರಾಂ ಚಿನ್ನಾಭರಣ ವಶ

KannadaprabhaNewsNetwork |  
Published : Sep 14, 2025, 01:04 AM IST
ವಿತಾ | Kannada Prabha

ಸಾರಾಂಶ

ಚಾಮರಾಜನಗರ ಪಟ್ಟಣ ಠಾಣಾ ಹಾಗೂ ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ೨ ಕಾರು, ೧೦ ಬೈಕ್‌ಗಳು ಹಾಗೂ ೮೩ ಗ್ರಾಂ ಚಿನ್ನಾಭರಣ, ಎರಡುವರೆ ಲಕ್ಷ ರು.ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಚಾಮರಾಜನಗರ ಪಟ್ಟಣ ಠಾಣಾ ಹಾಗೂ ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ೨ ಕಾರು, ೧೦ ಬೈಕ್‌ಗಳು ಹಾಗೂ ೮೩ ಗ್ರಾಂ ಚಿನ್ನಾಭರಣ, ಎರಡುವರೆ ಲಕ್ಷ ರು.ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಜಿಲ್ಲಾ ಅಪರಾಧ ವಿಶೇಷ ಪತ್ತೆದಳವು ಚಾಮರಾಜನಗರ ಪಟ್ಟಣ ಠಾಣೆ ವ್ಯಾಪ್ತಿಯ ಸೋಮವಾರಪೇಟೆಯ ಮಾದಲಾಂಭಿಕೆ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದ ೪೬ ಗ್ರಾಂ.ಚಿನ್ನಾಭರಣದಲ್ಲಿ ೪೩ ಗ್ರಾಂ.ಚಿನ್ನ, ಹಾಗೂ ಒಂದು ಲಕ್ಷ ರುಪಾಯಿಗಳನ್ನು ವಶಪಡಿಸಿಕೊಂಡು ಆರೋಪಿ ನಗರದ ಅರ್ಫಾಜ್‌ನನ್ನು ಬಂಧಿಸಿ ಒಂದು ಬೈಕ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದರು.

ನಗರದ ಬಸವೇಶ್ವರ ಜ್ಯೂವೆಲರ್ಸ್‌ನಲ್ಲಿ ಕಳ್ಳತನವಾಗಿದ್ದ ೧೦ ಗ್ರಾಂ ಚಿನ್ನಾಭರಣವನ್ನು ವಶಪಡಿಕೊಂಡು. ಆರೋಪಿ ಮೈಸೂರಿನ ಕೆ.ಜಿ.ಕೊಪ್ಪಲಿನ ಲೀಲಾ ಅವರನ್ನು ಬಂಧಿಸಲಾಗಿದೆ. ನಗರಸಭಾ ವ್ಯಾಪ್ತಿಯ ಸೋಮವಾರಪೇಟೆ ಸತ್ತಿ ರಸ್ತೆಯ ಮನೆಯೊಂದರ ಮುಂಭಾಗ ನಿಲ್ಲಿಸಿದ್ದ ಎರಡು ಮಾರುತಿ ಕಾರು ಮತ್ತು ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು ಕಳ್ಳತನ ಮಾಡಿದ್ದ ಚಾಮರಾಜನಗರದ ರಾಚಪ್ಪಾಜಿ ಮತ್ತು ತಮಿಳುನಾಡಿನ ಶಿವಕಾಶಿಯ ವಿನೋದ್ ಅವರನ್ನು ಬಂಧಿಸಲಾಗಿದೆ ಎಂದರು.

ನಗರದಲ್ಲಿ ಕಳ್ಳತನವಾಗಿದ್ದ ೩೦ ಗ್ರಾಂ, ಚಿನ್ನಾಭರಣ, ಒಂದುವರೆ ಲಕ್ಷ ರು.ಗಳನ್ನು ವಶಪಡಿಸಿಕೊಂಡು ಆರೋಪಿ ಯಳಂದೂರಿನ ಸೊಪ್ಪಿನಕೇರಿಯ ಹರೀಶ್‌ನನ್ನು ಬಂಧಿಸಲಾಗಿದೆ. ಯಳಂದೂರು ಪಟ್ಟಣ ಠಾಣೆಯ ವ್ಯಾಪ್ತಿಯ ಬಳೇಪೇಟೆಯ ಆರ್. ಮಂಜು ಅವರ ಮನೆಮುಂದೆ ಬಜಾಪ್ ಪಲ್ಸರ್ ಬೈಕ್‌ನ್ನು ಕಳ್ಳತನಮಾಡಿದ್ದ ಬನ್ನೂರು ಹೋಬಳಿ, ಬಿ.ಕೆ. ಬಿ.ಬೆಟ್ಟಹಳ್ಳಿಯ ಮದನ್, ಕೆ.ಆರ್. ತಾಲೂಕಿನ ಗಂಧನಹಳ್ಳಿಯ ಅರ್ಜುನ್, ಟಿ. ನರಸೀಪುರ ತಾಲೂಕಿನ ಅಲಗೂಡಿನ ಪ್ರವೀಣ ಹಾಗೂ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ಕಾರ್ತಿಕ್‌ರನ್ನು ಬಂಧಿಸಿ ಇವರು ವಿವಿಧೆಡೆಯಲ್ಲಿ ಕಳ್ಳತನ ಮಾಡಿದ್ದ ೭ ಲಕ್ಷದ ಮೌಲ್ಯದ ೮ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು , ರಾಬ್ಡಿ ಮಾಡಿ ತಲೆ ಮರೆಸಿಕೊಂಡಿರುವ ನಾಲ್ವರು ಪೊಲೀಸರನ್ನು ಬಂಧಿಸಲು ಎಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು, ಕ್ಲಬ್‌ಗಳಲ್ಲಿ ಇಸ್ಪೀಟ್ ದಂಧೆಗೆ ಕಡಿವಾಣ ಹಾಕಲಾಗಿದೆ, ಸಂಚಾರಿ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ಶಶಿಧರ್, ಡಿವೈಎಸ್ಪಿಗಳಾದ ಲಕ್ಷ್ಮಯ್ಯ ಧರ್ಮೆಂದರ್, ಇನ್ಸಪೆಕ್ಟರ್‌ಗಳಾದ ಶ್ರೀಕಾಂತ್, ಸಾಗರ್ ಮಂಜುನಾಥ್ ಲೋಕೇಶ್ ಹಾಗೂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ