ಸಿಂದಗಿ ನಗರದ ಹಳೆಯ ಬಜಾರದ ಕುಲಕರ್ಣಿ ಬಟ್ಟೆ ಅಂಗಡಿ ಸಮೀಪ ನಿಲ್ಲಿಸಲಾಗಿದ್ದ ಡಸ್ಟರ್ ಕಾರಿಗೆ ಆಕಸ್ಮಿಕ ಬೆಂಕಿಹೊತ್ತಿ ಉರಿದು ಕಾರು ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಸಿಂದಗಿ
ನಗರದ ಹಳೆಯ ಬಜಾರದ ಕುಲಕರ್ಣಿ ಬಟ್ಟೆ ಅಂಗಡಿ ಸಮೀಪ ನಿಲ್ಲಿಸಲಾಗಿದ್ದ ಡಸ್ಟರ್ ಕಾರಿಗೆ ಆಕಸ್ಮಿಕ ಬೆಂಕಿಹೊತ್ತಿ ಉರಿದು ಕಾರು ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ. ದೇವರ ಹಿಪ್ಪರಗಿ ತಾಲೂಕಿನ ಮಾರ್ಕಪನಹಳ್ಳಿ ಗ್ರಾಮದ ಆನಂದ ಬಸವರಾಜ ಇಜೇರಿ (32) ಅವರಿಗೆ ಸೇರಿದ ಕಾರನ್ನು ಸಾರವಾಡ ಗ್ರಾಮದ ನಿವಾಸಿ, ಚಾಲಕ ಚಂದ್ರಕಾಂತ ಮಹಾಲಿಂಗಪ್ಪ ವಾಲಿ ಅವರು ಸಿಂದಗಿ ಹಳೆಯ ಬಜಾರದ ಕುಲಕರ್ಣಿ ಬಟ್ಟೆ ಅಂಗಡಿ ಬಳಿ ನಿಲ್ಲಿಸಿ ತೆರಳಿದ್ದರು ಎನ್ನಲಾಗಿದೆ. ಕೆಲ ಸಮಯದ ಬಳಿಕ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ತೀವ್ರತೆಗೆ ವಾಹನ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ನಿಖರ ಕಾರಣದ ಕುರಿತು ತನಿಖೆ ತಿಳಿದು ಬರಬೇಕಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.