ತಂಗಾ ಬಸದಿಯಲ್ಲಿ ನೂತನ ಸಭಾಭವನಕ್ಕೆ ಭೂಮಿಪೂಜೆ

KannadaprabhaNewsNetwork |  
Published : Aug 27, 2026, 03:15 AM IST
ವಿಜಯಪುರ | Kannada Prabha

ಸಾರಾಂಶ

ಚಡಚಣ ಪಟ್ಟಣದ ಶ್ರೀ 1008 ಆದಿನಾಥ ದಿಗಂಬರ ಜೈನ ತಂಗಾ ಬಸದಿಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಭಾಭವನದ ಭೂಮಿಪೂಜೆ ಕಾರ್ಯಕ್ರಮವನ್ನು ಬುಧವಾರ ಜಿನೇಶ್ವರರ ಪೂಜೆಯೊಂದಿಗೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಚಡಚಣ ಪಟ್ಟಣದ ಶ್ರೀ 1008 ಆದಿನಾಥ ದಿಗಂಬರ ಜೈನ ತಂಗಾ ಬಸದಿಯಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಸಭಾಭವನದ ಭೂಮಿಪೂಜೆ ಕಾರ್ಯಕ್ರಮವನ್ನು ಬುಧವಾರ ಜಿನೇಶ್ವರರ ಪೂಜೆಯೊಂದಿಗೆ ನೆರವೇರಿಸಲಾಯಿತು.

ಸನತ್‌ಕುಮಾರ ಪಂಡಿತ ಮತ್ತು ಶ್ರೀಪಾಲ ಪಂಡಿತರವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಕರಾದ ಡಾ.ವಿಶಾಲ ತಂಗಾ, ಸಂಜೀವ ತಂಗಾ, ರಾಜೇಂದ್ರ ತಂಗಾ, ಶಾಂತಿನಾಥ ತಂಗಾ, ಪ್ರವೀಣ ತಂಗಾ, ಮತಿಸಾಗರ ತಂಗಾ, ಬಾಹುಬಲಿ ತಂಗಾ ಸೇರಿದಂತೆ ಜೈನ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ನಮ್ಮ ಹಿರಿಯರು ನಿರ್ಧರಿಸಿದಂತೆ ಸಭಾಭವನ ನಿರ್ಮಿಸಲು ಮುಂದಾಗಿದ್ದು, ಬಹುದಿನಗಳ ಕಾರ್ಯಯೋಜನೆಗೆ ಈಗ ಚಾಲನೆ ನೀಡಲಾಗಿದೆ. ಮುಂದಿನ ಎರಡ್ಮೂರು ವರ್ಷಗಳಲ್ಲಿ ಸಭಾಭವನ ನಿರ್ಮಾಣ ಪೂರ್ಣಗೊಳ್ಳಲಿದ್ದು, ಸಮಾಜದ ಜನರಿಗೆ ಅನುಕೂಲವಾಗಲಿದೆ. ಸುಮಾರು ₹50 ಲಕ್ಷದವರೆಗೆ ವೆಚ್ಚವಾಗಲಿದ್ದು, ಸಕಲ ಸೌಕರ್ಯಗಳೊಂದಿಗೆ ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಲಾಗುವುದು.

-ಉತ್ತಮ ತಂಗಾ, ಜೈನ ಸಮಾಜದ ಮುಖಂಡರು ಹಾಗೂ ತಂಗಾ ಕುಟುಂಬದ ಹಿರಿಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರ ಶಕ್ತಿಗೆ ಸಾಕ್ಷಿಯಾದ ಅದ್ಧೂರಿ ರಥೋತ್ಸವ!
ಬಸವೇಶ್ವರ ಜಾತ್ರಾ ಮಹೋತ್ಸವದ ಬಿತ್ತಿ ಪತ್ರ ಬಿಡುಗಡೆ