ಬಸವೇಶ್ವರ ಜಾತ್ರಾ ಮಹೋತ್ಸವದ ಬಿತ್ತಿ ಪತ್ರ ಬಿಡುಗಡೆ

KannadaprabhaNewsNetwork |  
Published : Aug 27, 2026, 03:15 AM IST
26ಬಿಎಸ್ವಿ01- ಬಸವನಬಾಗೇವಾಡಿಯ ಐತಿಹಾಸಿಕ ಮೂಲನಂದೀಶ್ವರಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಆ.31 ರಿಂದ ಆರಂಭವಾಗುವ ಜಾತ್ರಾಮಹೋತ್ಸವದ ಬಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. | Kannada Prabha

ಸಾರಾಂಶ

ಬಸವನಬಾಗೇವಾಡಿ: ಆ.31 ರಿಂದ ಸೆ.4ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಬಸವೇಶ್ವರ ಜಾತ್ರಾ ಮಹೋತ್ಸವ ಬಿತ್ತಿಪತ್ರಗಳನ್ನು ದೇವಸ್ಥಾನ ಆವರಣದಲ್ಲಿ ಬುಧವಾರ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ ಬಿಡುಗಡೆ ಗೊಳಿಸಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ,

ಆ.31 ರಿಂದ ಸೆ.4ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ಬಸವೇಶ್ವರ ಜಾತ್ರಾ ಮಹೋತ್ಸವ ಬಿತ್ತಿಪತ್ರಗಳನ್ನು ದೇವಸ್ಥಾನ ಆವರಣದಲ್ಲಿ ಬುಧವಾರ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ ಬಿಡುಗಡೆ ಗೊಳಿಸಿದರು.

ನಂತರ ಮಾತನಾಡಿದ ಅವರು, ಆ.31 ರಿಂದ ಸೆ.4ರವರೆಗೆ ಐತಿಹಾಸಿಕ ಜಾತ್ರಾಮಹೋತ್ಸವ ಜರುಗಲಿದೆ. ಆ.31ರಂದು ಬೆಳಗ್ಗೆ 9 ಗಂಟೆಗೆ ದೇವಸ್ಥಾನದಿಂದ ಸಕಲ ವಾದ್ಯವೈಭವಗಳೊಂದಿಗೆ ಪಲ್ಲಕ್ಕಿ ಉತ್ಸ ಹೊರಟು ಪೌರಾಣಿಕ ಪ್ರಸಿದ್ಧ ಹೋರಿಮಟ್ಟಿ ಗುಡ್ಡಕ್ಕೆ ತಲುಪಲಿದೆ. ಅಲ್ಲಿ ಮಧ್ಯಾಹ್ನ ಶಿವಾನಂದ ಈರಕಾರಮುತ್ಯಾ ಅವರಿಂದ ಹೇಳಿಕೆ ನಡೆಯಲಿದೆ. ನಂತರ ಬಸವನಹಟ್ಟಿ ಗ್ರಾಮ, ಬುತ್ತಿ ಬಸವಣ್ಣ ದೇವಸ್ಥಾನಕ್ಕೆ ತೆರಳಿ ಸಂಜೆ 7 ಗಂಟೆಗೆ ಪಟ್ಟಣದ ಕಂಬಿ ಕಟ್ಟೆಗೆ ಆಗಮಿಸಲಿದೆ, ಬಳಿಕ ಸಕಲ ಮಂಗಲ ವಾದ್ಯಮೇಳೊಂದಿಗೆ ಪಲ್ಲಕ್ಕಿ ಉತ್ಸವವನ್ನು ಬರಮಾಡಿಕೊಳ್ಳಲಾಗುವುದು. ಸವೇಶ್ವರ ದೇವಸ್ಥಾನದ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಆಕರ್ಷಕ ಸಿಡಿಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ.

ಸೆ.1ರಂದು ಬೆಳಗ್ಗೆ 9 ಗಂಟೆಗೆ ಡೊಳ್ಳಿನ ಪದಗಳು, ಭಜನಾ ಪದಗಳು, ಮಧ್ಯಾಹ್ನ 3.30 ಗಂಟೆಗೆ ಜಂಗೀ ಕುಸ್ತಿಗಳು ಜರುಗಲಿವೆ. ರಾತ್ರಿ 10 ಗಂಟೆಗೆ ಬಸವೇಶ್ವರ ದೇವಸ್ಥಾನದ ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ಅಥಣಿಯ ಅಮ್ಮಾಜೇಸರಿ ಕಲಾ ನಾಟ್ಯ ಸಂಘದಿಂದ ಜಗಜ್ಯೋತಿ ಬಸವೇಶ್ವರ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ. ಸೆ.2ರಂದು ಬೆಳಗ್ಗೆ 9 ಗಂಟೆಗೆ ಕಸರತ್ತಿನ ಪ್ರದರ್ಶನ ಹಾಗೂ ಭಾರ ಎತ್ತುವ ಸ್ಪರ್ಧೆ, ಮಧ್ಯಾಹ್ನ 3 ಗಂಟೆಗೆ ನಿರ್ಣಾಯಕ ಜಂಗೀ ಕುಸ್ತಿಗಳು, ಸಂಜೆ 6 ಗಂಟೆಗೆ ಖ್ಯಾತ ಜಾದುಗಾರ ಮಂಗಳೂರ ಕುದ್ರೋಳಿ ಗಣೇಶ ಅವರಿಂದ ಮ್ಯಾಜಿಕ್‌ ಶೋ ಜರುಗಲಿದೆ. ಸೆ.3 ರಂದು ಬೆಳಗ್ಗೆ 9 ಗಂಟೆಗೆ ಮನಗೂಳಿಯ ಸೋಮೇಶ್ವರ ಭಜನಾ ಮಂಡಳಿ ಹಾಗೂ ಟಾಕಳಿಯ ಸುನೀತಾ, ಚಂದ್ರಕಲಾ ಕೋಳಿ ಅವರಿಂದ ಭಜನಾ ಪದಗಳು, ರಾತ್ರಿ 9.30 ಗಂಟೆಗೆ ಬ್ಯಾಲ್ಯಾದ ಅಮರೇಶ್ವರ ನಾಟ್ಯ ಸಂಘದಿಂದ ಕೃಷ್ಣ ಪಾರಿಜಾತ ಪ್ರದರ್ಶನವಾಗಲಿದೆ. ಸೆ.4 ರಂದು ಬೆಳಗ್ಗೆ 10.30 ಗಂಟೆಗೆ ವಿದ್ಯಾಶ್ರೀ ಮಸಬಿನಾಳ, ಮಕ್ತುಮಸಾಬ ಸೊನ್ಯಾಳ ಅವರಿಂದ ಸುಪ್ರಸಿದ್ಧ ಗೀಗಿ ಪದಗಳು,. ಸಂಜೆ 6 ಗಂಟೆಗೆ ಖ್ಯಾತ ಹಿರಿಯ ಜಾನಪದ ಹಾಡುಗಾರ, ಗುರುರಾಜ ಹೊಸಕೋಟಿ ಅವರ ತಂಡದಿಂದ ಜನಪದ ಸಂಜೆ ಜರುಗಲಿದೆ.

ಶ್ರಾವಣ ಮಾಸ ಹಾಗೂ ಜಾತ್ರೆ ನಿಮಿತ್ತ ಆ.13 ರಿಂದ ನಂದೀಶ್ವರ ರಂಗಮಂದಿರದಲ್ಲಿ ಬಸವಬೆಳವಿಯ ಶರಣಬಸವ ಸ್ವಾಮೀಜಿಯವರಿಂದ ಶರಣರ ಜೀವನ ಪಥ ಪ್ರವಚನ ಪ್ರತಿನಿತ್ಯ ಸಂಜೆ 6.30 ರಿಂದ 8 ಗಂಟೆಯವರೆಗೆ ನಡೆಯುತ್ತಿದೆ. ಭಕ್ತರಿಗೆ ನಿರಂತರ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು. ಬಸವರಾಜ ಹಾರಿವಾಲ, ಎಂ.ಜಿ.ಆದಿಗೊಂಡ, ಶೇಖರ ಗೊಳಸಂಗಿ, ವಿನುತ ಕಲ್ಲೂರ, ರವಿಗೌಡ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ,ಅಮರ ಗಾಯಕವಾಡ, ಮಹಾಂತೇಶ ಹಂಜಗಿ,ಭದ್ರು ಮಣ್ಣೂರ, ಶ್ರೀಶೈಲ ಶಿರಗುಪ್ಪಿ, ರವಿ ನಾಯ್ಕೋಡಿ, ಮಹೇಶ ಹಿರೇಕುರಬರ, ಮಲ್ಲಿಕಾರ್ಜುನ ಬೋರಗಿ, ಮಹಾಂತೇಶ ಅವಟಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಂಗಾ ಬಸದಿಯಲ್ಲಿ ನೂತನ ಸಭಾಭವನಕ್ಕೆ ಭೂಮಿಪೂಜೆ
ಮಹಿಳೆಯರ ಶಕ್ತಿಗೆ ಸಾಕ್ಷಿಯಾದ ಅದ್ಧೂರಿ ರಥೋತ್ಸವ!