ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲದು: ಆರೋಗ್ಯಾಧಿಕಾರಿ ಸಿ.ಎ.ಅರವಿಂದ್

KannadaprabhaNewsNetwork | Published : Jun 25, 2024 12:35 AM

ಸಾರಾಂಶ

ಆರೋಗ್ಯ ವೇ ಭಾಗ್ಯ. ಮನುಷ್ಯ ದುಡಿಮೆಯೊಂದಿಗೆ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕು. ನಮ್ಮ ದೈನಂದಿನ ಆಹಾರ, ವಿಹಾರ, ಅಭ್ಯಾಸ, ಹವ್ಯಾಸಗಳೇ ನಮ್ಮ ಆರೋಗ್ಯದ ಗುಟ್ಟು ಶಿಸ್ತಿನ ಜೀವನದಿಂದ ಆರೋಗ್ಯವನ್ನು ಕಾಪಾಡಬಹುದು. ಥೈರಾಯಿಡ್ ಸಮಸ್ಯೆ, ಪಿಸಿಓಡಿ ಸಮಸ್ಯೆ, ಗರ್ಭಕೋಶ, ಸ್ತನ ಕ್ಯಾನ್ಸರ್ ಬಗ್ಗೆ ಸೂಕ್ತ ಸಮಯದಲ್ಲಿ‌ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆನ್ನಾಳು ವಲಯದ ಹರಳಹಳ್ಳಿ ಬಡಾವಣೆಯಲ್ಲಿ ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ತಾಲೂಕು ಪ್ರಭಾರಿ ಆರೋಗ್ಯಾಧಿಕಾರಿ ಸಿ.ಎ.ಅರವಿಂದ್ ಶಿಬಿರ ಉದ್ಘಾಟಿಸಿ ಮಾತನಾಡಿ, ಥೈರಾಯಿಡ್ ಸಮಸ್ಯೆ, ಪಿಸಿಓಡಿ ಸಮಸ್ಯೆ, ಗರ್ಭಕೋಶ, ಸ್ತನ ಕ್ಯಾನ್ಸರ್ ಬಗ್ಗೆ ಸೂಕ್ತ ಸಮಯದಲ್ಲಿ‌ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲದು ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ‌ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರಳಿದರ್ ಮಾತನಾಡಿ, ಆರೋಗ್ಯ ವೇ ಭಾಗ್ಯ. ಮನುಷ್ಯ ದುಡಿಮೆಯೊಂದಿಗೆ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕು. ನಮ್ಮ ದೈನಂದಿನ ಆಹಾರ, ವಿಹಾರ, ಅಭ್ಯಾಸ, ಹವ್ಯಾಸಗಳೇ ನಮ್ಮ ಆರೋಗ್ಯದ ಗುಟ್ಟು ಶಿಸ್ತಿನ ಜೀವನದಿಂದ ಆರೋಗ್ಯವನ್ನು ಕಾಪಾಡಬಹುದು ಎಂದರು.

ಕೆನ್ನಾಳು ಗ್ರಾಪಂ ಅಧ್ಯಕ್ಷ ವಿ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾದಿಕಾರಿ ಯಶವಂತ್, ಒಕ್ಕೂಟದ ಅಧ್ಯಕ್ಷೆ ರೇಣುಕಾ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ಆರೋಗ್ಯ ಇಲಾಖಾ ಸಿಬ್ಬಂದಿ ವರ್ಗ, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಸುಮಾರು 220 ಮಂದಿ ಆರೋಗ್ಯ ತಪಾಸಣೆಯಲ್ಲಿ ಕಣ್ಣಿನ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆಯ ಪ್ರಯೋಜನ‌ ಪಡೆದುಕೊಂಡರು. ಜ್ಞಾನವಿಕಾಸ ಸಮನ್ವಯಧಿಕಾರಿ ತೇಜಸ್ವಿ, ವಲಯದ ಮೇಲ್ವಿಚಾರಕ ಉಮೇಶ್, ಸೇವಾಪ್ರತಿನಿಧಿ ವಸಂತ, ಜಯರತ್ನ ಇತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ನಾಗಮಂಗಲ:ತಾಲೂಕಿನ ಬೆಳ್ಳೂರು ಟೌನ್ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಕಲ್ಯಾಣ ಕಾರ್ಯಕ್ರದಡಿ 2024-25ನೇ ಸಾಲಿಗೆ ಶೇ.24.10 ರ ಪರಿಶಿಷ್ಟ ಜಾತಿ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಬೆಳ್ಳೂರು ಪಟ್ಟಣ ಪಂಚಾಯ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಪೌರಕಾರ್ಮಿಕರ ಫಲಾನುಭವಿಗಳಿಗೆ ಪಿ.ಕೆ.ಜಿ.ಬಿ ಯೋಜನೆಯಡಿ ಪಾವತಿಸಬೇಕಾದ ಫಲಾನುಭವಿ ವಂತಿಕೆಯನ್ನು ಪಡೆಯಲು ಹಾಗೂ 7.25 ರ ಯೋಜನೆಯಡಿ ಇತರೆ ಹಿಂದುಳಿದ ವರ್ಗದ ವ್ಯಾಸಂಗ ಮಾಡುತ್ತಿರುವ ಬಿ.ಇ/ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿ ಸಹಾಯಧನ ನೀಡಲು, ಅರ್ಹ ಅರ್ಜಿದಾರರು, ಪೌರಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜುಲೈ 10 ಕೊನೆ ದಿನ. ಆಸಕ್ತ ಅರ್ಜಿದಾರರು ಜಾತಿ ಮತ್ತು ಆಧಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್, ವ್ಯಾಸಂಗ ದೃಢೀಕರಣ ಪತ್ರ, ಇ-ಸ್ವತ್ತು/ಖಾತಾ ನಕಲು ಇದರೊಂದಿಗೆ ಸೌಲಭ್ಯ ಪಡೆಯಲು ಅನ್ವಯಿಸಲ್ಪಡುವ ಇತರೆ ದಾಖಲಾತಿಗಳೊಂದಿಗೆ ಬೆಳ್ಳೂರು ಪಟ್ಟಣ ಪಂಚಾಯ್ತಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ-7795972204 ನ್ನು ಸಂಪರ್ಕಿಸಬಹುದು ಬೆಳ್ಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.

Share this article