ಇಳಿ ವಯಸ್ಸಿನ ತಂದೆ-ತಾಯಿ ಪೋಷಣೆ ಎಲ್ಲರ ಕರ್ತವ್ಯ: ನ್ಯಾ. ಮುದಕಪ್ಪ

KannadaprabhaNewsNetwork |  
Published : Oct 03, 2026, 02:00 AM IST
ಹುಣಸಗಿ ಪಟ್ಟಣದ ಪಟ್ಟಣ ಪಂಚಾಯತ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಕಾನೂನಿನ ಅರಿವು–ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

Caring for elderly parents is everyone's duty: Justice Mudakappa

-ಸ್ಮಾಲ್‌ ಕಿಕ್ಕರ್‌

ಮಾತೃದೇವೋ ಭವ, ಪಿತೃದೇವೋ ಭವ

---

-ಹುಣಸಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟನೆ

---

ಕನ್ನಡಪ್ರಭ ವಾರ್ತೆ ಹುಣಸಗಿ

ಇಳಿ ವಯಸ್ಸಿನ ತಂದೆ–ತಾಯಿಯರನ್ನು ಪೋಷಣೆ ಮಾಡಬೇಕಾದುದು ತಮ್ಮ ಧರ್ಮ, ಕರ್ತವ್ಯ ಎಂದು ಮಕ್ಕಳು ಭಾವಿಸುತ್ತಿಲ್ಲ. ಮಕ್ಕಳು ನಿರ್ಲಕ್ಷ್ಯ ತೋರಿದರೆ, ಹಿರಿಯರು ಕಾನೂನಿನ ಮೂಲಕ ರಕ್ಷಣೆ ಪಡೆಯಬಹುದು ಎಂದು ಸುರಪುರದ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಮುದುಕಪ್ಪ ಓದನ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ, ತಾಲೂಕು ಕಾನೂನು ಸೇವಾ ಸಮಿತಿ ಸುರಪುರ, ನ್ಯಾಯವಾದಿಗಳ ಸಂಘ ಸುರಪುರ, ಹುಣಸಗಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಪಂಚಾಯಿತಿ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನಿನ ಅರಿವು–ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಹಿರಿಯರಿಗೆ ಸಿಗಬೇಕಿದ್ದ ಗೌರವ, ಸ್ಥಾನಮಾನಗಳು ಸಿಗುತ್ತಿಲ್ಲ. ಇಳಿ ವಯಸ್ಸಿನ ತಂದೆ–ತಾಯಿಯರನ್ನು ಪೋಷಣೆ ಮಾಡಬೇಕಾದುದು ತಮ್ಮ ಧರ್ಮ, ಕರ್ತವ್ಯ ಎಂದು ಮಕ್ಕಳು ಭಾವಿಸುತ್ತಿಲ್ಲ. ಮಕ್ಕಳು ನಿರ್ಲಕ್ಷ್ಯ ತೋರಿದರೆ, ಹಿರಿಯರು ಕಾನೂನಿನ ಮೂಲಕ ರಕ್ಷಣೆ ಪಡೆಯಬಹುದು ಎಂದರು.

ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆ, ಅವರ ಪಾಲನೆ ಹಾಗೂ ಕಲ್ಯಾಣಕ್ಕಾಗಿ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೊಳಿಸಿದೆ. ಆದರೆ, ಕಾನೂನುಗಳ ಕುರಿತು ಅರಿವಿನ ಕೊರತೆಯಿಂದ ಅನೇಕರು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತ ಕಾನೂನು ನೆರವು ಹಾಗೂ ಸಲಹೆ ಪಡೆಯುವ ಅವಕಾಶವನ್ನು ಹಿರಿಯ ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಎಂ. ಬಸವರಾಜ ಮಾತನಾಡಿ, ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಕಾನೂನು ನೆರವು ತಲುಪಿಸುವಲ್ಲಿ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದರು.

ವಕೀಲ ಹಣಮಂತ್ರಾಯ ಕಟ್ಟಿಮನಿ ಉಪನ್ಯಾಸ ನೀಡಿ, 2007ರ ಹಿರಿಯ ನಾಗರಿಕರು ಮತ್ತು ಪೋಷಕರ ಪಾಲನೆ ಹಾಗೂ ಕಲ್ಯಾಣ ಅಧಿನಿಯಮ ಕುರಿತು ಹಿರಿಯ ನಾಗರಿಕರ ಪಾಲನೆ, ಮಕ್ಕಳ ಜವಾಬ್ದಾರಿ, ಆಸ್ತಿ ಮತ್ತು ಹಕ್ಕುಗಳ ರಕ್ಷಣೆ ಸೇರಿದಂತೆ ಕಾಯ್ದೆಯ ಪ್ರಮುಖ ಅಂಶಗಳ ಕುರಿತು ವಿವರಿಸಿದರು.

ಸುರಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅನಸೂರ, ಹಿರಿಯ ವಕೀಲ ಮಲ್ಲಿಕಾರ್ಜುನಯ್ಯ ಹೀರೆಮಠ, ಹುಣಸಗಿ ವೃತ್ತ ನಿರೀಕ್ಷಕ ರವಿಕುಮಾರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಲಭೀಮನಾಯಕ, ವಕೀಲೆ ಜೋತಿನಾಯಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣ ಚವ್ಹಾಣ, ಹುಣಸಗಿ ಪೊಲೀಸ್ ಉಪನಿರೀಕ್ಷಕ ರಾಹುಲ್ ಪವಾಡೆ ಸೇರಿದಂತೆ ಹಿರಿಯ ನಾಗರಿಕರು ಇದ್ದರು. ಶಿವಾನಂದ ತೋಟದ ನಿರೂಪಿಸಿದರು, ವಕೀಲ ಬಸವರಾಜ್ ಕಟ್ಟಿಮನಿ ಕಾಮನಟಗಿ ಸ್ವಾಗತಿಸಿ ವಂದಿಸಿದರು.

-

1ವೈಡಿಆರ್14 : ಹುಣಸಗಿ ಪಟ್ಟಣದ ಪಟ್ಟಣ ಪಂಚಾಯತ ಸಭಾಂಗಣದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಕಾನೂನಿನ ಅರಿವು–ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಜಿಲ್ಲೆಯ 11 ಗ್ರಾಮಗಳಿಗೆ ಗಾಂಧಿ ಪುರಸ್ಕಾರ
ಜೀವನ ಚೈತನ್ಯಕ್ಕೆ ಗಾಂಧೀಜಿ ಆದರ್ಶ ಬೇಕು