ಕನ್ಡಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಹಾಗೂ ಆರೈಕೆದಾರರಿಗೆ ಕೌಶಲ್ಯ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸದೃಢ ಆರೈಕೆದಾರರು ಸದೃಢ ಸಮಾಜ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಆರೈಕೆದಾರರ ದಿನ ಆಚರಿಸಲಾಗುತ್ತಿದೆ ವಿಕಲಚೇತನ ಮಕ್ಕಳನ್ನು ಆರೈಕೆ ಮಾಡುತ್ತಿರುವವರಿಗೆ ಆರೈಕೆದಾರರ ಭತ್ಯೆ ಯೋಜನೆಯನ್ನು ಕಳೆದ ವರ್ಷದಿಂದ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಷೇಕ್ ಯಾಸೀನ್ ಷರೀಪ್ ಮಾತನಾಡಿ, ವಿಕಲಚೇತನರನ್ನು ನೋಡಿಕೊಳ್ಳುವಾಗ ತಾಳ್ಮೆ, ಸಹನೆ, ಭರವಸೆಯನ್ನು ಆರೈಕೆದಾರರು ಹೊಂದಿರಬೇಕಾಗುತ್ತದೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ತೊಂದರೆಯನ್ನು ಪೋಷಕರು ಗುರುತಿಸಿದಲ್ಲಿ ಮುಂದೆ ಆಗುವ ದೊಡ್ಡ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿ, ಆರೈಕೆದಾರರಿಗೆ ಕೆಲವು ನಿರ್ವಹಣಾ ಕೌಶಲ್ಯಗಳನ್ನು ವಿವರಿಸಿದರು.ಬೆಂಗಳೂರು ಎಪಿಡಿ ಸಂಸ್ಥೆ ಕ್ಲಿನಿಕಲ್ ಸೈಕಾಲಜಿಸ್ಟ್ ಸುಪ್ರಜಾ ಅವರು 21 ವಿಧಧ ವಿಕಲತೆಗಳ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ರಾಜೀವ್, ಎಪಿಡಿ ಸಂಸ್ಥೆಯ ನಂದಿನಿ, ಆರೈಕೆದಾರರ ಸಂಘದ ಅಧ್ಯಕ್ಷೆ ಅನ್ನಪೂರ್ಣ, ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದ ಸಿಬ್ಬಂದಿ ಹಾಜರಿದ್ದರು.