ಕನ್ನಡಪ್ರಭ ವಾರ್ತೆ ಹಲಗೂರು
ಬೊಪ್ಪೇಗೌಡನಪುರದ ಮಠಾಧೀಶ ಭರತ್ ರಾಜೇ ಅರಸ್ ಅವರ ಸಮ್ಮುಖದಲ್ಲಿ ನಡೆದ ನೀಲಗಾರಿಕೆ ವಿಶೇಷ ಪೂಜೆ ವೇಳೆ ಮಾತನಾಡಿ, ನಾವು ಸಿದ್ದಪ್ಪಾಜಿ ಪರಮಭಕ್ತರು. ನಮ್ಮ ತಂದೆ, ತಾತ-ಮುತ್ತಂದಿರು ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ನಾವು ಇಂದಿಗೂ ಮರೆಯುತ್ತಿಲ್ಲ ಎಂದರು.
ಕಗ್ಗಲೀಪುರ ಮಠದ ಕಾಂತರಾಜು ಮಾತನಾಡಿ, ಸಿದ್ದಪ್ಪಾಜಿಯವರ ಮೂಲಸ್ಥಾನ ಹಲಗೂರಿನ ಸಿದ್ದಪ್ಪಾಜಿ ದೇವಸ್ಥಾನದ ಅರ್ಚಕ ಸಿದ್ದರಾಜುರವರ ಪುತ್ರ ಶಿವುಗೆ ಸಿದ್ದಪ್ಪಾಜಿ ದೇವರ ನೀಲಗಾರಿಕೆ ಗುರು ದೀಕ್ಷೆಯನ್ನು ಧರೆಗೆ ದೊಡ್ಡವರು ಮಹಾಸಂಸ್ಥಾನಪೀಠ ರಾಜ ಬೊಪ್ಪೇಗೌಡನಪುರ ಮಠದ ಪೀಠಾಧಿಪತಿ ಜ್ಞಾನೇಂದ್ರ ಚನ್ನೇರಾಜ ಅರಸ್ ಅವರ ಅಮೃತ ಹಸ್ತದಿಂದ ನೀಡಲಾಗಿದೆ ಎಂದರು.ಈ ದಿನ ಕುರುಬನ ಕಟ್ಟೆ ಕ್ಷೇತ್ರದ ಲಿಂಗಯ್ಯ ಚೆನ್ನಯ್ಯ ಕಂಡಾಯಗಳು, ಕಗ್ಗಲೀ ಪುರ ಮಠದ ಸಿದ್ದಪ್ಪಾಜಿ ಕಂಡಾಯ ಮತ್ತು ಹಲಗೂರು ಸಿದ್ದಪ್ಪಾಜಿ ಕಂಡಾಯಗಳ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸವಿತಾ ಸಿದ್ದರಾಜು ಪುತ್ರನಾದ ಎಚ್.ಎಸ್. ಶಿವಶಂಕರ್ ಗೆ ನೀಲಗಾರಿಕೆ ಮಾಡಿಸಲು ಕ್ಕಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಹಲಗೂರಿನ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಬೊಪ್ಪೇಗೌಡನಪುರದ ಕಂಡಾಯ, ಕುರುಬನ ಕಟ್ಟೆ ಕಂಡಾಯ, ಕಗ್ಗಲೀಪುರ ಮಠದ ಸಿದ್ದಪ್ಪಾಜಿ ಕಂಡಾಯ ಹಾಗೂ ಹಲಗೂರಿನ ಸಿದ್ದಪ್ಪಾಜಿ ಕಾದಗಟ್ಟಿಯಲ್ಲಿ ಇರುವ ಕಂಡಾಯ ಸೇರಿದಂತೆ ಇತರ ಕಂಡಾಯಗಳಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು.