ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣನ್ಯಾಯಾಲಯಕ್ಕೆ ಕೆಲಸದ ನಿಮಿತ್ತ ಹಾಜರಾಗಿದ್ದ ತಹಸೀಲ್ದಾರ್ ಅವರನ್ನು ಅಡ್ಡಗಟ್ಟಿ, ಅವ್ಯಾಚ ಶಬ್ಧಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಘಟನೆ ಚನ್ನರಾಯಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಗುಲಸಿಂದ ಮಹೇಶ್ ಸೇರಿದಂತೆ ಐವರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆಯ ವಿವರ
ದೂರಿನ ಅನ್ವಯ ಈ ಕೆಳಗಿನವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಗುಲಸಿಂದ ಮಹೇಶ, ಗೊಲ್ಲರಹೊಸಹಳ್ಳಿ ಮಂಜುನಾಥ, ಗೋವಿನಕೆರೆ ತೇಜಸ್‌ಗೌಡ, ರವಿ ಮತ್ತು ಇತರರು.ದೂರಿನ ಸಾರಾಂಶ:
ಆರೋಪಿ ಮಹೇಶ್ ಹಾಗೂ ತಂಡವು ನವೀನ್ ಕುಮಾರ್ ಅವರನ್ನು ತಡೆದು, ಅಯೋಗ್ಯ ಮಗನೇ, ಕೋರ್ಟಿಗೆ ಯಾಕೆ ಬರುತ್ತೀಯಾ? ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಅಲ್ಲದೆ ಸಾರ್ವಜನಿಕರ ಮುಂದೆಯೇ ಕೆಟ್ಟ ಪದಗಳನ್ನು ಬಳಸಿ ಅವಮಾನಿಸಿ, ದಾಖಲಿಸಿರುವ ಕೇಸನ್ನು ವಾಪಸ್ ಪಡೆಯುವಂತೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಘಟನೆಗೆ ಸಾಕ್ಷಿಗಳಾಗಿ ಶ್ರವಣಬೆಳಗೊಳದ ಸಾಗರ್ ಉತ್ತೇನಹಳ್ಳಿ, ಮೀಸೆಮಂಜಣ್ಣ ಹಾಗೂ ದಂಡೋರ ಮಂಜುನಾಥ್, ಮಹೇಶ್ ಕಬ್ಬಾಳು, ಗಾಯಕ ಮಂಜು ಮತ್ತಿತರಿದ್ದರು.