ಕನ್ನಡಪ್ರಭ ವಾರ್ತೆ ಶಿರಾ
ಗುರುವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಪಕ್ಷದಿಂದ ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಯಶಸ್ವಿಯಾಗಿ ಮಾಡಿದ್ದೇವೆ. ಶಿರಾ ನಗರದ ಸರಕಾರಿ ಪ.ಪೂ. ಕಾಲೇಜು, ಕಳ್ಳಂಬೆಳ್ಳ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಗೌಡಗೆರೆ ಹೋಬಳಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗೌಡಗೆರೆ, ಹುಲಿಕುಂಟೆ ಹೋಬಳಿಯಲ್ಲಿ ಸರಕಾರಿ ಪ್ರೌಢಶಾಲೆ ಬರಗೂರು, ಬುಕ್ಕಾಪಟ್ಟಣ ಹೋಬಳಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬುಕ್ಕಾಪಟ್ಟಣ ಇಲ್ಲಿ ಇಲ್ಲಿ ಮತ ಕೇಂದ್ರ ತೆರೆಯಲಾಗುವುದು. ಮತದಾರರು ತಮ್ಮ ವ್ಯಾಪ್ತಿ ಮತಕೇಂದ್ರಗಳಲ್ಲಿ ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು.
ತಾಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಆರ್. ಉಗ್ರೇಶ್ ಮಾತನಾಡಿ ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಬಿಜೆಪಿ ಜೆಡಿಎಸ್ ಪಕ್ಷದವರು ಒಗ್ಗಟ್ಟಾಗಿ ತಾಲೂಕಿನ ಗೌಡಗೆರೆ, ಹುಲಿಕುಂಟೆ, ಕಳ್ಳಂಬೆಳ್ಳ, ಶಿರಾ ಸೇರಿದಂತೆ ಎಲ್ಲಾ ಹೋಬಳಿಗಳಲ್ಲೂ ಚುನಾವಣಾ ಪ್ರಚಾರ ಮಾಡಿದ್ದೇವೆ. ಪದವೀಧರ ಮತದಾರರು ಕ್ರಮ ಸಂಖ್ಯೆ ೨ಕ್ಕೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು. ಎನ್‌ಡಿಎ ಅಭ್ಯರ್ಥಿಯನ್ನು ಹೆಚ್ಚು ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು.ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ ಮಾತನಾಡಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ವಿಧಾನಸಭೆ ಚುನಾವಣೆ ಒಂದುವರೆ ವರ್ಷ ಇರುವುದರಿಂದ ಅದರೊಳಗೆ ತಾ.ಪಂ., ಜಿ.ಪಂ., ಗ್ರಾ.ಪಂ. ಚುನಾವಣೆಗಳು ಬರಲಿವೆ. ಆದ್ದರಿಂದ ಕಾರ್ಯಕರ್ತರು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆ ಮಾಡಬೇಕು. ಮುಂದಿನ ರಾಜಕೀಯ ಬದಲಾವಣೆಗೂ ಇದು ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಕೆ.ಎಂ.ಸುರೇಶ್ ಅವರ ಗೆಲುವಿಗೆ ಶ್ರಮಿಸಿ ಎಂದು ಹೇಳಿದರು.