ಒಂದು ವರ್ಗದ ಜನರ ತುಷ್ಟೀಕರಣಕ್ಕಾಗಿ ಜಾತಿಗಣತಿ-ಮಾಜಿ ಶಾಸಕ ವಿರೂಪಾಕ್ಷಪ್ಪ

KannadaprabhaNewsNetwork |  
Published : Sep 23, 2025, 01:04 AM ISTUpdated : Sep 23, 2025, 01:05 AM IST
ಮ | Kannada Prabha

ಸಾರಾಂಶ

ಅಲ್ಪಸಂಖ್ಯಾತರಲ್ಲಿ 73 ಒಳಪಂಗಡಗಳಿದ್ದರೂ ಅವುಗಳನ್ನು ಎಲ್ಲಿಯೂ ವಿಭಜನೆ ಮಾಡುವ ಕೆಲಸಕ್ಕೆ ಸರಕಾರ ಕೈಹಾಕಿಲ್ಲ, ಅವುಗಳನ್ನು ಜಾತಿ ಗಣತಿ ಕಾಲಂನಲ್ಲಿ ನಮೂದಿಸಲು ಅವಕಾಶ ನೀಡದೇ ಕೇವಲ ಒಂದು ವರ್ಗದ ಜನರ ತುಷ್ಟೀಕರಣಕ್ಕಾಗಿ ನಡೆಯುತ್ತಿರುವ ಜಾತಿಗಣತಿಗೆ ಬಿಜೆಪಿ ವಿರೋಧವಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಬ್ಯಾಡಗಿ: ಅಲ್ಪಸಂಖ್ಯಾತರಲ್ಲಿ 73 ಒಳಪಂಗಡಗಳಿದ್ದರೂ ಅವುಗಳನ್ನು ಎಲ್ಲಿಯೂ ವಿಭಜನೆ ಮಾಡುವ ಕೆಲಸಕ್ಕೆ ಸರಕಾರ ಕೈಹಾಕಿಲ್ಲ, ಅವುಗಳನ್ನು ಜಾತಿ ಗಣತಿ ಕಾಲಂನಲ್ಲಿ ನಮೂದಿಸಲು ಅವಕಾಶ ನೀಡದೇ ಕೇವಲ ಒಂದು ವರ್ಗದ ಜನರ ತುಷ್ಟೀಕರಣಕ್ಕಾಗಿ ನಡೆಯುತ್ತಿರುವ ಜಾತಿಗಣತಿಗೆ ಬಿಜೆಪಿ ವಿರೋಧವಿದೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಸ್ಲಾಂ ಅನುಯಾಯಿಗಳಲ್ಲಿಯೇ ಶಿಯಾ ಸುನ್ನಿ ಸೇರಿದಂತೆ ಪ್ರಾಂತ, ಭಾಷೆ, ಪದ್ಧತಿಗಳ, ಆಚರಣೆ ಸಂಪ್ರದಾಯಗಳಲ್ಲಿ ವಿಭಿನ್ನತೆ ಇದೇ ಅಷ್ಟೇ ಏಕೆ? ಅಲ್ಲಿಯೂ ಸಹ ಹಿಂದೂ ದೇವರುಗಳನ್ನು ಪೂಜಿಸುವವರೂ ಇದ್ದಾರೆ. ಹೀಗಿರುವಾಗ ಅವರನ್ನೇಕೆ ಜಾತಿ ಗಣತಿಯಲ್ಲಿ ಪ್ರತ್ಯೇಕವಾದ ಕಾಲಂಗಳನ್ನು ರಚಿಸಿಲ್ಲ ಎಂದು ಪ್ರಶ್ನಿಸಿದರು.

ಜಾತಿಯ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್: ಪ್ರಸ್ತುತ ನಡೆಸುತ್ತಿರುವ ಜಾತಿಗಣತಿಯಿಂದ ಯಾರಿಗೂ ಪ್ರಯೋಜನವಿಲ್ಲ, ಬದಲಾಗಿ ಇದರಿಂದ ಏನೋ ಆಗಿಬಿಡುತ್ತದೆ ಎನ್ನುವಂತಹ ವಾತಾವರಣ ಸೃಷ್ಟಿಸುವ ಮೂಲಕ ರಾಜ್ಯದಲ್ಲಿನ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬ್ರಿಟಿಷರಂತೆ ಹಿಂದೂಗಳನ್ನು ಒಡೆದಾಳುವಂತಹ ಪ್ರಯತ್ನ ನಡೆದಿದೆ ಎಂದರು.ಹಿಂದೂ ಎಂದು ನಮೂದಿಸಿ: ಹಿಂದೂಗಳ ಮಧ್ಯದಲ್ಲಿ ವಿಷ ಬೀಜ ಅವರಲ್ಲಿಯೇ ಒಳಗೊಳಗೆ ದ್ವೇಷ ಭಾವನೆ ಮೂಡಿಸಿ ಹಿಂದುತ್ವವನ್ನ ನಾಶ ಮಾಡುವ ಹುನ್ನಾರಕ್ಕೆ ಕಾಂಗ್ರೆಸ್ ಸರಕಾರ ಕೈ ಹಾಕಿದೆ. ಇದಕ್ಕೆ ಕಡಿವಾಣ ಹಾಕಬೇಕಾದಲ್ಲಿ ಗಣತಿ ವೇಳೆಯಲ್ಲಿ ಯಾವುದೇ ಜಾತಿ ಇರಲಿ ಹಿಂದೂ ಎಂದು ನಮೂದಿಸಿ ಎಂದರು.ಈಗಲೇ ಇಸ್ಲಾಂಗೆ ಮತಾಂತರವಾಗಲಿ: ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ತಾವೇ ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟುವೆ ಎಂದು ಹೇಳಿಕೆ ನೀಡಿರುವುದು ಅವರ ಹಾಲು ಮತಕ್ಕೆ ಘೋರ ಅನ್ಯಾಯವೆಸಗಿದ್ದಾರೆ, ಸಮಾಜದ ಭಾವನೆಗಳಿಗೆ ನೋವುಂಟು ಮಾಡಿದ್ದು, ಮುಂದಿನ ಜನ್ಮ ಬೇಡ ಅವರು ಈ ಜನ್ಮದಲ್ಲಿಯೇ ಮತಾಂತರವಾಗಲಿ ಎಂದರು. ಈ ವೇಳೆ ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ವಿದ್ಯಾಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಪುರಸಭೆ ಸದಸ್ಯರಾದ ಫಕ್ಕೀರಮ್ಮ ಛಲವಾದಿ, ಸರೋಜಾ ಉಳ್ಳಾಗಡ್ಡಿ, ಕಲಾವತಿ ಬಡಿಗೇರ, ಮಲ್ಲಮ್ಮ ಪಾಟೀಲ, ಹನುಮಂತಪ್ಪ ಮ್ಯಾಗೇರಿ, ವಿನಯಕುಮಾರ ಹಿರೇಮಠ, ರಾಮಣ್ಣ ಕೋಡಿಹಳ್ಳಿ, ಮುಖಂಡರಾದ ಮುರಿಗೆಪ್ಪ ಶೆಟ್ಟರ, ಸುರೇಶ ಆಸಾದಿ, ಎಂ.ಎಸ್. ಪಾಟೀಲ, ವಿಜಯಭರತ ಬಳ್ಳಾರಿ, ವಿಜಯ ಮಾಳಗಿ, ವಿನಾಯಕ ಕಂಬಳಿ, ಕೊಟ್ರಯ್ಯ ಸೊಪ್ಪಿನಮಠ, ಪ್ರದೀಪ ಜಾಧವ, ನಾಗರಾಜ ಹಾವನೂರ, ಶಿವಾನಂದ ಯಮನಕ್ಕವರ, ಶಿವಯೋಗಿ ಗಡಾದ, ಸುರೇಶ ಉದ್ಯೋಗಣ್ಣನವರ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಪರಶುರಾಮ ಉಜನಿಕೊಪ್ಪ, ಗಣೇಶ ಅಚಲಕರ, ಗುತ್ತೆಮ್ಮ ಮಾಳಗಿ, ಗಿರಿಜಮ್ಮ ಪಟ್ಟಣಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ