ಜಾತಿ ಗಣತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಜಾತಿ ಗಣತಿ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುವುದಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಕನ್ನಡಪ್ರಭ ವಾರ್ತೆ ಹುಮನಾಬಾದ್ಜಾತಿ ಗಣತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಜಾತಿ ಗಣತಿ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುವುದಾಗಿ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಬಸವಕಲ್ಯಾಣ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಪಾರ್ಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರ ಗೃಹ ಕಚೇರಿಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪರ ವಿರೋಧ ಮಾತನಾಡುವ ಸಮಾನ ಅವಕಾಶ ಇದೆ. ಅದಕ್ಕೆ ನಾವು ಸಹಕಾರ ನೀಡುವುದಾಗಿ ಜಾತಿಗಣತಿ ಬಿಡುಗಡೆ ಮಾಡಲು ಯೋಚಿಸುತ್ತಿದ್ದೇವೆ ಎಂದರು.ಗುಜರಾತ್ ಮಾದರಿ ಎಂದು ಹೇಳುವ ಬಿಜೆಪಿ ಆ ರಾಜ್ಯದಲ್ಲಿ ಕಳೆದ 30 ವರ್ಷಗಳಿಂದ ಅಧಿಕಾರದಲ್ಲಿದೆ. ಮೋದಿ ಅವರು 15 ವರ್ಷ ಆಳ್ವಿಕೆ ಮಾಡಿದ್ದಾರೆ. ಪ್ರಧಾನ ಮಂತ್ರಿಯಾಗಿ 15 ವರ್ಷ ಪೂರೈಸುವತ್ತ ಹೊರಟಿದ್ದಾರೆ. ಡ್ರಗ್ಸ್ ಕಾರ್ಖಾನೆಗಳು ನಡೆಸುವುದರಲ್ಲಿ ಈ ಮಾಡಲ್‌ನಲ್ಲಿ ನಂ1 ಇದೆ. ಜಿಡಿಪಿ, ಶಿಕ್ಷಣ ಕ್ಷೇತ್ರ, ಕೈಗಾರಿಕಾ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿ ಇದೆನಾ ಎಂದು ಪ್ರಶ್ನಿಸಿದರು.ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಮುಡಾಗೆ ಸೈಟ್ ವಾಪಸ್ ಮಾಡಿದ್ದಾರೆ. ಅದು ಜಿ-ಕ್ಯಾಟಗಿರಿ ಸೈಟ್ ಪಡೆದಿದ್ದರು. ಅದು ಯಾವುದೇ ಕ್ಯಾಟಗರಿಗೆ ಸಂಬಂಧಿಸಿಲ್ಲ. ಕೇವಲ ಪರಿಹಾರಕ್ಕಾಗಿ ಅಧಿಕೃತ ಸೈಟ್ ಇದೆ. ಕುಮಾರಸ್ವಾಮಿ ಅವರು, ಮುಡಾ ಸೈಟ್ ಪಡೆದಿದ್ದು ಯಾವ ಆಧಾರದ ಮೇಲೆ?. ಬಹಳಷ್ಟು ಜನರಿಗೆ ಮೈಸೂರಿನಲ್ಲಿ ಕ್ಯಾಟಗರಿ ಆಧಾರದಲ್ಲಿ ಮುಡಾ ಸೈಟ ಹಂಚಿಕೆಯಾಗಿವೆ ಎಂದು ಮಾಹಿತಿ ನೀಡಿದರು.ಜಿಲ್ಲಾಡಳಿತ ಉಸ್ತುವಾರಿ ಸಚಿವ ಹಿಡಿತದಲ್ಲಿಲ್ಲಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ಜಿಲ್ಲಾಡಳಿತ, ಉಸ್ತವಾರಿ ಸಚಿವರ ಹಿಡಿತದಲ್ಲಿ ಇರದ ಕಾರಣ, ಹುಮನಾಬಾದ ಮತಕ್ಷೇತ್ರದಲ್ಲಿ ಇನ್ನೂ ಟೆಂಡರ್ ಹಂತದಲ್ಲಿರುವ ಕಾಮಗಾರಿ ಉದ್ಘಾಟನೆ ಮಾಡಲಾಗುತ್ತಿದೆ. ಜತೆಗೆ ಇನ್ನಿತರ ಕಾರ್ಯಕ್ರಮದಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ದೂರಿದರು. ಜಿಲ್ಲೆ ಹಾಗೂ ಹುಮನಾಬಾದ ಮತಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಎರಡು ಸ್ಥಾನ ಮಾತ್ರ ಗೆಲ್ಲಲಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಯಾವ ರೀತಿ ನಡೆದಿದೆ ಎನ್ನುವ ಕುರಿತು ಎಲ್ಲವನ್ನೂ ಜನರು ಮಾಧ್ಯಮದಲ್ಲಿ ನೋಡಿದ್ದಾರೆ. ನಮ್ಮ ಜೀವನದಲ್ಲಿ ಎಂದೂ ಹೊಂದಾಣಿಕೆಯ ರಾಜಕೀಯ ಮಾಡಿಲ್ಲ ಎಂದರು. ಡಿವೈಎಸ್‌ಪಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೀಡಿದ ಪತ್ರದ ಕುರಿತು ಗೃಹ ಸಚಿವರ ಜತೆ ಚರ್ಚಿಸಿ ಮುಂದಿನ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಸಂಸದ ಸಾಗರ ಖಂಡ್ರೆ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರಮಿಯ್ಯಾ, ಉಮೇಶ ಜಂಬಗಿ, ಈರಪ್ಪಾ ಭೂತಾಳೆ, ಸಮಾಜದ ಮುಖಂಡರಾದ ಜ್ಞಾನೇಶ್ವರ ಭೋಸ್ಲೆ, ರಂಜೀತ ಮಾನಕರೆ, ರವಿಕುಮಾರ ಘವಳಕರ್, ರಾಮರಾವ ಸೇಡೋಳ, ಓಂಕಾರ ತುಂಬಾ ಸೇರಿದಂತೆ ಅನೇಕರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.