ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಹೂರ ವಲಯದಲ್ಲಿನ ಭೋವಿ ಗುರಪೀಠದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ, ಪರಿಶಿಷ್ಟ ಜಾತಿ ಸಮೀಕ್ಷೆ, ಭೋವಿ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗಳು, ಗ್ರಾಮ, ತಾಲೂಕು, ಜಿಲ್ಲೆಗಳಲ್ಲಿ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ತಂದೆ ಇಲ್ಲವೆ ತಾತನ ಮನೆಯಲ್ಲಿ ಆಶ್ರಯ ಪಡೆದಿರುವವರು ತಮಗೆ ಸ್ವಂತ ಮನೆ ಇಲ್ಲವೆಂದೂ, ಬ್ಯಾಂಕಿನ ಸಾಲದಲ್ಲಿ ವಾಹನ ಕೊಂಡಿರುವವರು ತಮಗೆ ಸ್ವಂತ ವಾಹನ ಇಲ್ಲವೆಂದೂ ಬರೆಸಬೇಕು. ವಾಹನದ ಸಾಲ ತೀರುವವರೆಗೆ ಅದು ಬ್ಯಾಂಕಿನ ಸ್ವತ್ತು ಎಂಬುದು ನಿಮ್ಮ ಗಮನದಲ್ಲಿರಲಿ ಎಂದರು.ಇದೇ ರೀತಿ ಬೇರೆ ಯಾವ ಅಸ್ತಿಯನ್ನು ನೀವುಗಳು ಬೇರೆಯವರಿಂದ ಅದರ ಮಾಹಿತಿಯನ್ನು ಗಣತಿದಾರರಿಗೆ ನೀಡಬೇಡಿ, ಸ್ವಂತ ದುಡಿಮೆ ಇದ್ದರೆ ಮಾತ್ರ ಮಾಹಿತಿ ನೀಡಿ ಎಂದ ಶ್ರೀಗಳು, ನೀವುಗಳು ಈಗ ನೀಡುವ ಮಾಹಿತಿಯಿಂದ ನಿಮ್ಮ ಮುಂದಿನ ಪೀಳಿಗೆ ತುಂಬಾ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಗಣತಿದಾರರಿಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ನೀಡುವಂತೆ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸಮುದಾಯದ ಮುಖಂಡರಿಗೆ ಕರೆ ನೀಡಿದರು.
ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಸದಾನಂದಗೌಡರವರು ಮುಖ್ಯಮಂತ್ರಿಯಾಗಿದ್ದಾಗ ಈ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಹಲವಾರು ವರ್ಷಗಳಿಂದ ಪ್ರಭಾವಿ ವ್ಯಕ್ತಿಗಳಿಂದ ತಯಾರಿ ನಡೆಯುತ್ತಿತ್ತು, ಇದರ ಬಗ್ಗೆ ಸದನದಲ್ಲಿ ನಮ್ಮ ಭೋವಿ ಜನಾಂಗದ ಶಾಸಕರು, ಮಂತ್ರಿಗಳು ಸೇರಿ ತಡೆ ಹಿಡಿಯುವಂತ ಕಾರ್ಯವನ್ನು ಮಾಡಲಾಗಿತ್ತು ಇದರ ಬಗ್ಗೆ ಯಾರಿಗೂ ಅಷ್ಠಾಗಿ ಗೊತ್ತಿಲ್ಲ, ನಮ್ಮ ಹಂತದಲ್ಲಿ ಈ ಒಳ ಮೀಸಲಾತಿ ಜಾರಿಯಾಗದಂತೆ ತಡೆ ಹಿಡಿಯುವ ಕಾರ್ಯವನ್ನು ಮಾಡಲಾಗಿದೆ. ಈ ಮುಂಚೆ ನಮ್ಮ ಸಮುದಾಯಕ್ಕೆ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಎಸ್.ಸಿ.ಜನಾಂಗಕ್ಕೆ ಸೇರಿಸಿರಲಿಲ್ಲ, ಹರಿಹರದ ಹೊಳೆಯಿಂದ ಆಚೇಗೆ ನಮ್ಮ ಸಮುದಾಯದವರನ್ನು ಸಾಮಾನ್ಯ ವರ್ಗಕ್ಕೆ ಇಡಲಾಗಿತ್ತು ಇದರ ಬಗ್ಗೆ ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರಿಗೆ ಇದರ ಬಗ್ಗೆ ಪೂರ್ಣ ಪ್ರಮಾಣದ ವಿಷಯವನ್ನು ತಿಳಿಸಿ ರಾಜ್ಯ ಪೂರ್ಣ ಭೋವಿ ಸಮುದಾಯವನ್ನು ಎಸ್‌ಸಿ ವರ್ಗಕ್ಕೆ ಮಾಡಿಸಲಾಯಿತು. ನಮ್ಮ ಸಮುದಾಯದವರು ಇನ್ನೂ ಸಹಾ ಕಲ್ಲು ಒಡೆಯುವುದರಲ್ಲಿಯೇ ಇದ್ದಾರೆ ಅರ್ಥಿಕವಾಗಿ ಶೃಕ್ಷಣಿಕವಾಗಿ ಹಿಂದೆ ಉಳಿದಿದ್ದಾರೆ, ಇವರು ಪ್ರಗತಿಯನ್ನು ಹೊಂದಬೇಕಾದರೆ ಗುರುಗಳು ಹೇಳಿದ ರೀತಿಯಲ್ಲಿ ಜಾತಿಗಣತಿಯಲ್ಲಿ ಬರೆಸಬೇಕಿದೆ ಎಂದರು.
ಎಚ್,ಅನಂದಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು, ರವಿ ಪೂಜಾರ್ ಪ್ರಸ್ತಾವಿಕವಾಗಿ ಮಾತನಾಡಿದರು, ಭೋವಿ ಗುರುಪೀಠದ ಸಿಇಒ ಗೋವಿಂದಪ್ಪ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ್, ದೊಡ್ಡರಂಗಣ್ಣ, ಗೋಪಾಲ್, ಲಕ್ಷ್ಮಣ್ ರಾಡಿ ವಡ್ಡರ್, ಬಾಲಕೃಷ್ಣ ಬಸವರಾಜು, ವೆಂಕಟೇಶ್, ರಾಮು, ಸಿದ್ದರಾಮು ಜಯ್ಯಣ್ಣ, ರಾಮಾಂಜನೇಯ, ಪರಶುರಾಮ್, ಉಮಾ ಗಾದ್ದಪ್ಪ ಶಶಿಕಲಾ, ಮುನಿರಾಜು, ತಿಮ್ಮಯ್ಯ, ಮುನಿಯಪ್ಪ ಹನುಮಂತಪ್ಪ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.