ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಲ್ಲದೆ ಫೆ.1ರಿಂದ ಆವಕ ಸಿಬ್ಬಂದಿಗೆ ಸ್ಟ್ಯಾಂಪ್, ಸೀಲು ಸಹ ನೀಡಬಾರದು ಎಂದರು.
ಜಿಲ್ಲೆಯ ಶಹಾಬಾದ, ಯಡ್ರಾಮಿ, ಕಾಳಗಿ ತಹಸೀಲ್ದಾರ್ ಕಚೇರಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇ-ಕಚೇರಿ ಅನುಷ್ಟಾನ ಮಾಡದಿರುವುದಕ್ಕೆ ಸಿಡಿಮಿಡಿಗೊಂಡ ಅವರು, ಪಾರದರ್ಶಕ, ಸಮಯ ಉಳಿತಾಯ, ಅಕೌಂಟೇಬಿಲಿಟಿ ಇರಲೆಂದೇ ನೂತನ ಸಾಫ್ಟವೇರ್ ಅಭಿವೃದ್ಧಿಪಡಿಸಿದೆ. ಹೊಸ ವ್ಯವಸ್ಥೆಗೆ ಹೊಂದಿಕೊಂಡು ಕಡ್ಡಾಯವಾಗಿ ಅನುಷ್ಠನಾಗೊಳಿಸಬೇಕು ಎಂದು ತಹಸೀಲ್ದಾರ್, ಕಂದಾಯ ಸಿಬ್ಬಂದಿಗೆ ತಾಕೀತು ಮಾಡಿದರು.ಯಡ್ರಾಮಿ ತಹಸೀಲ್ದಾರ್ ಕಚೇರಿಯಲ್ಲಿ ಕಳೆದ 6 ತಿಂಗಳಲ್ಲಿ ಕೇವಲ 42 ಕಡತ ಸೃಜಿಸಿದ್ದು, ಇ-ಆಫೀಸ್ ಸಮರ್ಪಕವಾಗಿ ಅನುಷ್ಠಾನ ಮಾಡದ ಕಾರಣ ತಹಸೀಲ್ದಾರರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ ಸಚಿವರು, ಜನವರಿ ಅಂತ್ಯಕ್ಕೆ ಎಲ್ಲಾ ತಹಸೀಲ್ದಾರ್ ಕಚೇರಿಯಲ್ಲಿ ಇ-ಕಚೇರಿಯಲ್ಲಿ ಸೃಜಿಸಿದ ಕಡತ ಪರಿಶೀಲಿಸಬೇಕು. ಶೇ.75ರಷ್ಟು ಅರ್ಜಿಗಳು ಇ-ಕಚೇರಿಯಲ್ಲಿ ಇನ್ ವಾರ್ಡ್ ಮಾಡದಿದ್ದಲ್ಲಿ ಅಂತಹವರಿಗೆ ನೋಟಿಸ್ ಜಾರಿಗೊಳಿಸಿ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜಿಲ್ಲೆಯಲ್ಲಿ ಇ-ಆಫೀಸ್ ಅನುಷ್ಟಾನ ಏಕೆ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಸಮಸ್ಯೆ ಇದ್ದರೆ ಹೇಳಿ, ಐ.ಟಿ-ಬಿ.ಟಿ ಸಚಿನಾಗಿರುವುದರಿಂದ ನಮ್ಮ ಇಲಾಖೆಯಿಂದ ಸಮಸ್ಯೆ ಬಗೆಹರಿಸಬಹುದಾದರೆ ಪ್ರಯತ್ನಿಸುವೆ ಎಂದ ಅವರು, ಸಾರ್ವಜನಿಕರು ಕಚೇರಿಗೆ ಅಲಿಯಬೇಕು, ತಮ್ಮನ್ನು ಬಂದು ಕಾಣಬೇಕು ಎಂಬ ಹಳೇ ಪದ್ಧತಿಯಿಂದ ಹೊರಬನ್ನಿ ಎಂದರು.
ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ ಮೇಲೆ ನಿಗಾ ಇಡಿ: ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಇದ್ದು, 50 ಲಕ್ಷ ಎಕರೆ ಸಾಗುವಳಿ ಚೀಟಿಗೆ ಅರ್ಜಿ ಬಂದಿರೋದು 54 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ. ಸಾಗುವಳಿ ಅಲ್ಲದವರು ಅರ್ಜಿ ಹಾಕಿದ್ದಾರೆ. ಸೂಕ್ತವಾಗಿ ಪರಿಶೀಲಿಸಿ ರೆಸೋಲುಷನ್ ಪಾಸ್ ಮಾಡಿ ಸಾಗುವಳಿ ಚೀಟಿ ವಿತರಿಸಬೇಕು. ಇನ್ನು ಮುಂದೆ ಸಾಗುವಳಿ ಚೀಟಿ ಜೊತೆಗೆ ಪೋಡಿ ಸ್ಕೆಚ್ ನೀಡುವ ಚಿಂತನೆ ನಡೆದಿದೆ. ಮುಮದೆ ಆನ್‌ಲೈನ್ ಮೂಲಕವೇ ಸಾಗುವಳಿ ಚೀಟಿ ನೀಡಲಾಗುವುದು ಎಂದರು.