ಉಪನೋಂದಣಾಧಿಕಾರಿ ಕಚೇರಿ ಜಾಲಾಡಿದ ಜಿಲ್ಲಾಧಿಕಾರಿ

KannadaprabhaNewsNetwork | Published : Jan 25, 2024 2:02 AM

ಸಾರಾಂಶ

ಚನ್ನಪಟ್ಟಣ: ನಗರದ ಉಪನೋಂದಣಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಧಿಡೀರ್ ಭೇಟಿ ನೀಡಿ ಕಚೇರಿಯಲ್ಲಿ ಕಾವೇರಿ ಇ-ತಂತ್ರಾಂಶ, ಕಡತಗಳು ಹಾಗೂ ಕಪಾಟುಗಳ ಪರಿಶೀಲನೆ ನಡೆಸಿದರು.

ಚನ್ನಪಟ್ಟಣ: ನಗರದ ಉಪನೋಂದಣಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಧಿಡೀರ್ ಭೇಟಿ ನೀಡಿ ಕಚೇರಿಯಲ್ಲಿ ಕಾವೇರಿ ಇ-ತಂತ್ರಾಂಶ, ಕಡತಗಳು ಹಾಗೂ ಕಪಾಟುಗಳ ಪರಿಶೀಲನೆ ನಡೆಸಿದರು.

ತಹಸೀಲ್ದಾರ್ ಮಹೇಂದ್ರ ಅವರೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಒಂದು ತಾಸಿಗೂ ಹೆಚ್ಚು ಕಾನ್ಕಡತಗಳ ಪರಿಶೀಲನೆ ನಡೆಸಿದರು. ಉಪನೋಂದಣಾಧಿಕಾರಿ ರಜೆಯಲ್ಲಿದ್ದ ಕಾರಣ ಕಚೇರಿಯಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಕಚೇರಿಯಲ್ಲಿನ ರೆಕಾರ್ಡ್ ರೂಂ, ಹಾಜರಾತಿ ಪುಸ್ತಕ, ಅರ್ಜಿಗಳ ವಿಲೇವಾರಿ ಪುಸ್ತಕ, ಕಂಪ್ಯೂಟರ್‌ಗಳನ್ನೂ ಪರಿಶೀಲಿಸಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.

ಜನರಿಂದಲೂ ಮಾಹಿತಿ ಪಡೆದ ಡಿಸಿ:

ಕಚೇರಿಗೆ ಆಗಮಿಸಿದ್ದ ಸಾರ್ವಜನಿಕರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಜನರ ಸಮಸ್ಯೆ ಆಲಿಸಿದರು. ಕಚೇರಿಯಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯವೈಖರಿ ಹೇಗಿದೆ ಎಂಬ ಮಾಹಿತಿ ಕಲೆ ಹಾಕಿದರು.

ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿ ಇರುವ ರಸ್ತೆಯೂ ಕಿರಿದಾಗಿದ್ದು, ನೋಂದಣಿಗೆ ಬರುವವರಿಗೆ ಪಾರ್ಕಿಂಗ್ ಸಮಸ್ಯೆ, ಶೌಚಾಲಯ ಮತ್ತಿತರ ಸಮಸ್ಯೆಗಳು ಇವೆ. ಕಚೇರಿ ಕೆಲಸಗಳಿಗೆ ಬಂದಿದ್ದ ಜನ ಸಿಬ್ಬಂದಿ ಬೇಗ ಕೆಲಸ ಮಾಡಿಕೊಡದೆ ಅಲೆದಾಡುಸುತ್ತಿದ್ದಾರೆಂದು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಕೋಟ್............

ಉಪನೋಂದಣಾಧಿಕಾರಿ ಕಚೇರಿ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದೇನೆ. ಭೇಟಿ ವೇಳೆ ಲೋಪದೋಷಗಳು ಕಂಡುಬಂದಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ.

-ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾಧಿಕಾರಿಪ್ಯಾಕೇಜ್

ಕೆಎಸ್‌ಐಸಿ ಮಿಲ್‌ಗೆ ಭೇಟಿ

ಚನ್ನಪಟ್ಟಣ: ಉಪನೋಂದಣಾಧಿಕಾರಿ ಕಚೇರಿ ಸ್ಥಳಾಂತರ ಸಂಬಂಧ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಮಂಗಳವಾರಪೇಟೆ ಬಳಿ ಇರುವ ಕೆಎಸ್‌ಐಸಿ(ಸ್ಪನ್ ಸಿಲ್ಕ್) ಮಿಲ್ ಆವರಣಕ್ಕೆ ಭೇಟಿ ನೀಡಿ ಅಲ್ಲಿರುವ ಹಳೇ ಕಟ್ಟಡಗಳನ್ನು ಪರಿಶೀಲಿಸಿದರು. ಅಲ್ಲಿನ ಸಿಬ್ಬಂದಿ ಬಳಿ ಸದ್ಯಕ್ಕೆ ಉಪಯೋಗವಾಗುತ್ತಿರುವ ಸ್ಥಳ ಹಾಗೂ ಉಪಯೋಗಿಸದೇ ಉಳಿದಿರುವ ಸ್ಥಳ ಕುರಿತು ಮಾಹಿತಿ ಪಡೆದುಕೊಂಡರು. ಸಂಸ್ಥೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರೆಸ್ಟೋರೆಂಟ್ ಹಾಗೂ ಕೆಎಸ್‌ಐಸಿ ಮಳಿಗೆಯಲ್ಲಿ ರೇಷ್ಮೆ ಸೀರೆಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಸೀರೆಗಳ ಬೆಲೆ ಕೇಳಿ ಮಾಹಿತಿ ಪಡೆದರು.

ನೂತನ ಸಮುಚ್ಚಯವನ್ನು ವೀಕ್ಷಿಸಿದ ಜಿಲ್ಲಾಧಿಕಾರಿ, ಈ ಸ್ಥಳ ಉಪನೋಂದಣಾಧಿಕಾರಿ ಕಚೇರಿಗೆ ಸೂಕ್ತವಾಗಿದೆ. ಜತೆಗೆ ನ್ಯಾಯಾಲಯ ಸಹ ಹತ್ತಿರದಲ್ಲೇ ಇರುವುದರಿಂದ ನೋಟರಿ ಮತ್ತಿತರ ಕಾರ್ಯಗಳಿಗೆ ಅನುಕೂಲಕರವಾಗಿದೆ. ಸಬ್‌ರಿಜಿಸ್ಟರ್ ಕಚೇರಿ ಸ್ಥಳಾಂತರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಪೊಟೋ೨೪ಸಿಪಿಟಿ೨,೩:

ಚನ್ನಪಟ್ಟಣದ ಉಪನೋಂದಣಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಡಾ. ಅವಿನಾಶ್‌ ಮೆನನ್‌ ಭೇಟಿ ನೀಡಿ ಪರಿಶೀಲಿಸಿದರು.

Share this article