ಜಾತಿ, ಹಣ ಆಧಾರಿತ ಚುನಾವಣೆಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ: ಶ್ರೀನಿವಾಸ್

KannadaprabhaNewsNetwork |  
Published : Jan 27, 2026, 02:45 AM IST
26ಕೆಎಂಎನ್ ಡಿ15 ,16 | Kannada Prabha

ಸಾರಾಂಶ

ಭಾರತ ಸಾರ್ವಭೌಮ ರಾಷ್ಟ್ರವಾಗಿದೆ. ನೂರಾರು ಜಾತಿ, ಸಾವಿರಾರು ಭಾಷೆಗಳ ಇದ್ದರೂ ವಿವಿಧತೆಯಲ್ಲಿ ಏಕತೆಯ ಕಂಡು ಎಲ್ಲರು ಅಣ್ಣ ತಮ್ಮಂದಿರಂತೆ ಸಹಭಾಳ್ವೆಯಿಂದ ಬದುಕು ನಡೆಸುತ್ತಿದ್ದೇವೆ. ನಮ್ಮ ಭಾರತದಂತಹ ಸಾಂಸ್ಕೃತಿಕ, ಪಾರಂಪರಿಕವಾದ ರಾಷ್ಟ್ರ ವಿಶ್ವದಲ್ಲಿ ಬೇರೊಂದು ರಾಷ್ಟ್ರವಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪ್ರಜಾಪ್ರಭುತ್ವದ ಅಡಿ ನಡೆಯುತ್ತಿರುವ ಚುನಾವಣೆಗಳು ಜಾತಿ, ಹಣ ಸೇರಿದಂತೆ ಹಲವು ಆಮಿಷಗಳಿಗೆ ಒಳಗಾಗಿ ವ್ಯವಸ್ಥೆಗೆ ಧಕ್ಕೆ ತರುತ್ತಿದೆ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ವಿಷಾಧ ವ್ಯಕ್ತಪಡಿಸಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣೆ ಸಮಿತಿಯಿಂದ ನಡೆದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂವಿಧಾನದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯರಿಗೂ ಮತದಾನ ಹಕ್ಕು ನೀಡಲಾಗಿದೆ. ಮತದಾರರು ಯಾವುದೇ ಜಾತಿ, ಹಣ ಆಮಿಷಗಳಿಗೆ ಒಳಗಾಗದೆ ತಮ್ಮ ಮತ ಚಲಾಹಿಸಬೇಕು. ಜೊತೆಗೆ ಸಂವಿಧಾನದ ಮೂಲ ಹಕ್ಕುಗಳ ಜತೆಗೆ ಕರ್ತವ್ಯ ಪಾಲನೆ ಮಾಡಬೇಕು ಎಂದರು.

ಭಾರತ ಸಾರ್ವಭೌಮ ರಾಷ್ಟ್ರವಾಗಿದೆ. ನೂರಾರು ಜಾತಿ, ಸಾವಿರಾರು ಭಾಷೆಗಳ ಇದ್ದರೂ ವಿವಿಧತೆಯಲ್ಲಿ ಏಕತೆಯ ಕಂಡು ಎಲ್ಲರು ಅಣ್ಣ ತಮ್ಮಂದಿರಂತೆ ಸಹಭಾಳ್ವೆಯಿಂದ ಬದುಕು ನಡೆಸುತ್ತಿದ್ದೇವೆ. ನಮ್ಮ ಭಾರತದಂತಹ ಸಾಂಸ್ಕೃತಿಕ, ಪಾರಂಪರಿಕವಾದ ರಾಷ್ಟ್ರ ವಿಶ್ವದಲ್ಲಿ ಬೇರೊಂದು ರಾಷ್ಟ್ರವಿಲ್ಲ ಎಂದರು.

ಭಾರತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ. ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರವಾಗಲಿದೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನದ ಆಶಯಗಳಿಗೆ ಧಕ್ಕೆ ತರದಂತೆ ಗೌರವಿಸಬೇಕು. ಹೋರಾಟಗಾರನ್ನು ಸ್ಮರಿಸಬೇಕು ಎಂದರು.

ಗಣರಾಜ್ಯೋತ್ಸವದಲ್ಲಿ ವಿವಿಧ ಶಾಲೆಗಳ ಬ್ಯಾಂಡೆ ಸೆಟ್ ತಂಡಗಳು ವೇದಿಕೆ ಮೇಲಿನ ಗಣ್ಯರಿಗೆ ವಂದನೆ ಸಲ್ಲಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ತಾಲೂಕು ಆಡಳಿತದಿಂದ ಅಭಿನಂಧಿಸಲಾಯಿತು. ವಿವಿಧ ಶಾಲೆಗಳ ಮಕ್ಕಳಿಂದ ನಾಡು-ನುಡಿ, ರಾಷ್ಟ್ರಕ್ಕೆ ಸಂಬಂಧಿಸಿದ ಹಲವು ಹಾಡುಗಳಿಗೆ ನೃತ್ಯಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.

ಸಮಾರಂಭದಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ತಾಪಂ ಇಒ ವೀಣಾ, ಪುರಸಭೆ ಮುಖ್ಯಾಧಿಕಾರಿ ಸತೀಶ್, ರೈತಸಂಘದ ಅಧ್ಯಕ್ಷ ವಿಜಯ್ ಕುಮಾರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಕೆ.ಟಿ.ಗೋವಿಂದೇಗೌಡ ಸೇರಿದಂತೆ ಹಲವರು ಮುಖಂಡರು, ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಇಂದಿನಿಂದ ಮತ್ತೆ ಕಲಾಪ : ಭಾರೀ ಕೋಲಾಹಲ ನಿರೀಕ್ಷೆ