ಕನ್ನಡ್ರಪ್ರಭ ವಾರ್ತೆ ಮಡಿಕೇರಿ
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಜಾನುವಾರುಗಳ ಮಾಲೀಕರಿಗೆ ತಲಾ ರು. 30 ಸಾವಿರದಂತೆ ಒಟ್ಟು 2.10 ಲಕ್ಷದ ಪರಿಹಾರ ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಶ್ರೀಮಂಗಲ ಭಾಗದಲ್ಲಿ ಹುಲಿಯಿಂದ ಏಳು ಕಡೆ ದಾಳಿಯಾಗಿ ಜಾನುವಾರುಗಳನ್ನು ರೈತರು ಕಳೆದುಕೊಂಡಿದ್ದರು. ಇದರಲ್ಲಿ ನಾಲ್ಕು ಪ್ರಕರಣದಲ್ಲಿ ನೇರವಾಗಿ ಅವರ ಖಾತೆಗೆ ಪರಿಹಾರ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಮೂರು ಪ್ರಕರಣದ ಪರಿಹಾರವನ್ನು ಕೂರ್ಗ್ ಫೌಂಡೇಶನ್ ಅನುದಾನದಲ್ಲಿ ಚೆಕ್ ಮೂಲಕ ನೀಡಲಾಗಿದೆ ಎಂದರು.ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವನ್ಯಪ್ರಾಣಿ- ಮಾನವ ಸಂಘರ್ಷದಿಂದ ಬೆಳೆ ಹಾನಿ, ಜಾನುವಾರುಗಳ ಸಾವು, ಮಾನವ ಪ್ರಾಣಹಾನಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಕಳೆದ 25 ವರ್ಷಗಳಿಂದ ವನ್ಯಪ್ರಾಣಿಗಳ ಹಾವಳಿ, ಮಾನವ ಪ್ರಾಣ ಹಾನಿ, ಬೆಳೆ ನಷ್ಟ ಪ್ರಕರಣಗಳು ಹೆಚ್ಚಾಗಿವೆ. ಅರಣ್ಯ ಇಲಾಖೆ ಸಹ ಇಂತಹ ಪ್ರಕರಣಗಳಿಗೆ ಸ್ಪಂದಿಸುವುದರೊಂದಿಗೆ ಕಾರ್ಯಾಚರಣೆ ಸಂದರ್ಭದಲ್ಲಿಯೂ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಈಗಾಗಲೇ ಶ್ರೀಮಂಗಲ ಮತ್ತು ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ ಒಂದುವರೆ ತಿಂಗಳುಗಳಿಂದ ಪ್ರತ್ಯೇಕವಾದ ಪ್ರಕರಣದಲ್ಲಿ ಹುಲಿಯಿಂದ ಜಾನುವಾರುಗಳ ಮೇಲೆ ದಾಳಿ ಮತ್ತು ಹುಲಿ ಸಂಚಾರ ಹಿನ್ನಲೆ ನಡೆಸಿದ ಒಂದು ವಾರದ ಕಾರ್ಯಾಚರಣೆಯಲ್ಲಿ ಶ್ರೀಮಂಗಲ ವಿಭಾಗದಲ್ಲಿ ಹುಲಿಯು ಅರಣ್ಯಕ್ಕೆ ಹಿಂತಿರುಗಿರುವುದು ಖಚಿತಪಟ್ಟಿದೆ. ಬಾಳೆಲೆ ವ್ಯಾಪ್ತಿಯ ಸುಳುಗೋಡು- ರಾಜಪುರ ಗ್ರಾಮಗಳಲ್ಲಿ ಹುಲಿ ಸಂಚಾರ ಕಂಡುಬಂದ ಹಿನ್ನೆಲೆ ಹಾಗೂ ಜಾನುವಾರುಗಳ ಮೇಲೆ ದಾಳಿ ಹಿನ್ನೆಲೆ ಅಲ್ಲಿಯೂ ಸಹ ಹುಲಿಯನ್ನು ಕಾಡಿಗೆ ಆಟ್ಟುವ ಮೂಲಕ ಕಾರ್ಯಚರಣೆ ಯಶಸ್ವಿಯಾಗಿದೆ ಎಂದು ಸಂಕೇತ್ ಪೂವಯ್ಯ ವಿವರಿಸಿದರು.
ಬೀರುಗ ಗ್ರಾಮದ ರುಕ್ಮಿಣಿ, ಬಿ. ಟಿ. ಮೋಹನ್, ಕುಟ್ಟ ಗ್ರಾಮದ ಪ್ರವರ್ಧನ್, ತೆರಾಲು ಗ್ರಾಮದ ಬಿ. ಎಸ್. ಉತ್ತಪ್ಪ ಅವರ ಖಾತೆಗೆ ಪರಿಹಾರ ನೇರ ವರ್ಗಾವಣೆ ಮೂಲಕ ವಿತರಿಸಲಾಗಿದೆ ಎಂದು ಅವರು ತಿಳಿಸಿದರು.